ಹಲಸು, ಹಣ್ಣುಗಳ ಮೇಳಕ್ಕೆ ಚಾಲನೆ

0

ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದದಿಂದ ನಡೆದುಕೊಂಡು ಬರುತ್ತಿರುವ ’ಹಲಸು ಮತ್ತು ಹಣ್ಣುಗಳ ಮೇಳ’ಕ್ಕೆ ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ಚಾಲನೆ ನೀಡಲಾಯಿತು.ಮೇ 24 ರಿಂದ 26ರ ತನಕ ನಡೆಯುವ ಈ ಮೇಳವನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಅವರು ತಮ್ಮ ಮನೆಯಲ್ಲಿ ಸೋಣ ಹಲಸಿನ ಹಣ್ಣು ಇತ್ತು. ಇದು ತುಂಬಾ ದೊಡ್ಡ ಹಲಸು, ಇದು ಯಾವಾಗ ಹಣ್ಣಾಗುತ್ತದೆ ಎಂದು ನಮ್ಮ ನೆರೆ ಮನೆಯವರು ಕಾಯುತ್ತಿದ್ದರು. ನಾವು ಅಷ್ಟು ದೊಡ್ಡ ಹಲಸನ್ನ ತಿನ್ನೋದಿಲ್ಲ. ನಮಗೆ ಉಳಿದು ಅವರಿಗೆ ಕೊಡ್ತಾ ಇದ್ದೆವು. ಹಾಗಾಗಿ ನಾವಲ್ಲ ಸೋಣ ಪೆಲಕಾಯಿ ಏಪ ಪರ್ದುಂಡು ಅಂತ ಕಾಯ್ತಾ ಇದ್ದೇವು . ಆದ್ರೆ ಈಗ ಅಂತಹ ಕಾಲ ಬದಲಾಗಿದೆ. ಇಂದು ಹಲಸು ತಿನ್ನಲು ಮಾತ್ರವಲ್ಲದೆ ಹಲವಾರು ಉತ್ಪನ್ನಗಳು ತಯಾರಾಗ್ತಾ ಇದೆ. ಈ ಹಲಸಿನ ಮರದಲ್ಲಿ ಬಿಸಾಡುವಂತ ವಸ್ತು ಯಾವುದು ಇಲ್ಲ ಎಂದರು.

ಈ ಸಂದರ್ಭದಲ್ಲಿ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ,ನವತೇಜ ಪುತ್ತೂರು ಇದರ ಟ್ರಸ್ಟಿ ಸುಹಾಸ್ ಮರಿಕೆ, ಜೆಸಿಐ ಉಪಾಧ್ಯಕ್ಷ ಅನೂಪ್,ಎಂಎಲ್‌ಸಿ ವಿನಯಚಂದ್ರ ಉಪಸ್ಥಿತರಿದ್ದರು.

ಭಾರತೀಯ ಗೇರು ಸಂಶೋಧನಾಲಯದ ಉಸ್ತುವರಿ ಬಾಲಸುಬ್ರಹ್ಮಣ್ಯಂ ಅವರಿಗೆ ಹಾಗೂ ಪುತ್ತೂರಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ ಅವರಿಗೆ ಗುರುತು ಗೌರವ ಸಲ್ಲಿಕೆಯಾಗಿ ಸನ್ಮಾನಿಸಿ ಪುಸ್ತಕ ನೀಡಿ ಗೌರವಿಸಲಾಯಿತು.


LEAVE A REPLY

Please enter your comment!
Please enter your name here