ಪುತ್ತೂರು: ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ ಮೇ.26ರಂದು ಬಲ್ನಾಡು ಗ್ರಾಮದ ಸಾಜದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಸಂಚಾಲಕ ತಿರುಮಲೇಶ್ ನಾಯ್ಕರವರ ಮುಂದಾಳತ್ವದಲ್ಲಿ ಶ್ರಮದಾನ ನಡೆಸಿ ಹಲವು ವರುಷಗಳಿಂದ ಹೂಳೆತ್ತದ ಬಾವಿಯನ್ನು ಸ್ವಚ್ಛಗೊಳಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಕುಡಿಯಲು ಯೋಗ್ಯವಾದ ನೀರಿನ ವ್ಯವಸ್ಥೆ ಮಾಡಿಕೊಡಲಾಯಿತು.
ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಸಮಿತಿಯ ನೆರವಿನಿಂದ ತರಕಾರಿ ಕೈತೋಟ ನಿರ್ಮಿಸುವ ಬಗ್ಗೆ ನಿರ್ಧರಿಸಲಾಯಿತು. ಸಮುದಾಯದ ಮಕ್ಕಳನ್ನು ಹೆಚ್ಚು ಸಂಖ್ಯೆಯಲ್ಲಿ ಶಾಲೆಗೆ ದಾಖಲಾತಿ ಮಾಡುವ ಬಗ್ಗೆ ಚರ್ಚಿಸಲಾಯಿತು.
ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಪ್ರಸ್ತಾವಿಕ ಮಾತನಾಡಿದರು. ಸಂಚಾಲಕ ಶ್ರೀಧರ್ ನಾಯ್ಕ ಮುಂಡೋವುಮೂಲೆ, ಶಾಲೆಯ ಸಿಬ್ಬಂದಿ ಕೃಷ್ಣ ನಾಯ್ಕ ಜಗದೀಶ್ ನಾಯ್ಕ ಸಾಜ, ಬಾಲಕೃಷ್ಣ ನಾಯ್ಕ ಮುರುಂಗಿ, ರತ್ನಾವತಿ ದಾರಂದಕುಕ್ಕು, ಆನಂದ ನಾಯ್ಕ ಪೆರುವಾಯಿ, ಪ್ರಸಾದ್ ವಡ್ಯ, ಸಿಬ್ಬಂದಿ ಸುನೀತ ಸಹಕರಿಸಿದರು ಶಾಲಾ ಶಿಕ್ಷಕಿ ಮಮತ ವಂದಿಸಿದರು.