ವಿವೇಕಾನಂದ ಶಿಕ್ಷಣ ವಿದ್ಯಾಲಯದಲ್ಲಿ ‘ಇಪ್ಪತ್ತರ ಸಂಭ್ರಮ : ಸರಣಿ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಶಿಕ್ಷಣ ವಿದ್ಯಾಲಯದಲ್ಲಿ ‘ಇಪ್ಪತ್ತರ ಸಂಭ್ರಮ : ಸರಣಿ ಉಪನ್ಯಾಸದ ಎರಡನೇ ಉಪನ್ಯಾಸ “ಪೃಥೀವೀ ಸಸ್ಯಶಾಲಿನಿ”ಕಾರ್ಯಕ್ರಮ ಮೇ.25ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಸ್ವಾಯತ್ತ) ಪುತ್ತೂರು ಇಲ್ಲಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಶ ಕುಮಾರ್ ಎಂ. ಕೆ ಮಾತನಾಡಿ ಪ್ರಕೃತಿಗೆ ನಾವು ಯಾವಾಗಲೂ ತಲೆಬಾಗಲೇಬೇಕು. ಪ್ರಕೃತಿಯ ಸಮತೋಲನ ತಪ್ಪಿದಾಗ ಮನುಷ್ಯನಲ್ಲಿ ಹಲವಾರು ಕಾಯಿಲೆಗಳು ಕಂಡುಬರುತ್ತದೆ. ನಾವು ಪ್ರಕೃತಿಯನ್ನು ಪ್ರೀತಿಸಬೇಕು. ಭೂಮಿ ಮತ್ತು ಮನುಷ್ಯನಿಗೆ ತಾಯಿ ಮಗುವಿನಂತೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಬೆಳೆಸಬೇಕು. ಆದರೆ ಇಂದಿನ ದಿನಗಳಲ್ಲಿ ಮನುಷ್ಯ ತನ್ನ ಲಾಭಕ್ಕೋಸ್ಕರ ಪ್ರಕೃತಿಯನ್ನು ನಶಿಸಿ , ಹಲವಾರು ಸಮಸ್ಯೆಗಳನ್ನು ತಂದೊಡ್ಡುತ್ತಿದ್ದಾನೆ. ಪ್ರತಿಯೊಂದಕ್ಕೂ ನೀರು ಅತ್ಯಗತ್ಯ ಆದ್ದರಿಂದ ನೀರನ್ನು ಕಲುಷಿತಗೊಳಿಸದೆ, ದುಂದು ವೆಚ್ಚ ಮಾಡದೆ, ಹಿತಮಿತವಾಗಿ ಬಳಸಬೇಕು. ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿದೆ. ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆಗೊಳಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕಿ ಗಂಗಮ್ಮ ಹೆಚ್ ಶಾಸ್ತ್ರೀ ಅಧ್ಯಕ್ಷ ಸ್ಥಾನವನ್ನು ವಹಿಸಿ ಪರಿಸರದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾl ಶೋಭಿತಾ ಸತೀಶ್ ಹಾಗೂ ಕಾರ್ಯಕ್ರಮದ ಸಂಯೋಜಕಿ ಭುವನೇಶ್ವರಿ ಎ.ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಶೃತಿ ಅತಿಥಿಗಳನ್ನು ಪರಿಚಯಿಸಿ, ತೇಜಸ್ವಿನಿ ಸ್ವಾಗತಿಸಿದರು. ಪ್ರೀತಮ್ ವಂದಿಸಿದರು. ಸುನಯನ  ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭೋದಕ – ಭೋದಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here