ಸೇವಾವಽಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆಗಳು- ಬಾಲ್ಯೊಟ್ಟು
ಬಂಟರ ಸಂಘಕ್ಕೆ ಸ್ವಂತ ಜಾಗ- ಸೀತಾರಾಮ ರೈ
ಸೇವಾವಧಿಯಲ್ಲಿ ಉತ್ತಮ ಕೆಲಸ- ಬೂಡಿಯಾರ್
ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸಭೆಯು ಮೇ.25 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆಗಳು- ಬಾಲ್ಯೊಟ್ಟು:
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಂಘದ ಒಟ್ಟು ಮೂರು ವರ್ಷಗಳ ಅವಧಿಯಲ್ಲಿ ಒಂದುವರೆ ವರ್ಷಗಳ ಕಾಲ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಪದಾಧಿಕಾರಿಗಳ ತಂಡ ಕಾರ‍್ಯನಿರ್ವಹಿಸಿದ ಬಳಿಕ, ನನಗೆ ಅಧ್ಯಕ್ಷನಾಗುವ ಅವಕಾಶ ದೊರೆಯಿತು. ನಮ್ಮ ತಂಡವು ಉತ್ತಮವಾದ ಕೆಲಸವನ್ನು ಮಾಡಿದ್ದೇವೆ, ಈ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಂಟರ ಸಂಘಕ್ಕೆ ಸ್ವಂತ ಜಾಗ- ಸೀತಾರಾಮ ರೈ :
ಬಂಟರ ಸಂಘದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಮೂರು ವರ್ಷಗಳ ಅವಽಯಲ್ಲಿ ಬೂಡಿಯಾರ್ ರಾಧಾಕೃಷ್ಣ ರೈ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟುರವರ ತಂಡ ಉತ್ತಮವಾಗಿ ಕೆಲಸವನ್ನು ಮಾಡಿದೆ ಎಂಬ ಸಂತೋಷ ನಮ್ಮಲ್ಲಿ ಇದೆ. ಮುಂದೆಯೂ ಉತ್ತಮವಾದ ಕೆಲಸ ಬಂಟರ ಸಂಘದಿಂದ ಆಗಲಿ, ನಮ್ಮ ಬಂಟರ ಸಂಘಕ್ಕೆ ಸ್ವಂತ ಜಾಗವೊಂದು ಖರೀದಿ ಆಗಬೇಕು, ಈ ಎಲ್ಲಾ ಕೆಲಸಕಾರ‍್ಯಗಳು ಮುಂದೆ ನಡೆಯಬೇಕು ಎಂದರು.
ಸೇವಾವಧಿಯಲ್ಲಿ ಉತ್ತಮ ಕೆಲಸ- ಬೂಡಿಯಾರ್:
ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ನಮ್ಮ ಒಂದುವರೆ ವರ್ಷಗಳ ಅವಧಿಯ ವೇಳೆ ಕರೋನಾ ಸಮಸ್ಯೆ ಇದ್ದರೂ, ಸಂಘದಿಂದ ಉತ್ತಮವಾದ ಸಮಾಜಮುಖಿ ಕಾರ‍್ಯವನ್ನು ಮಾಡಿದ್ದೇವೆ ಎಂದರು.
ಲೆಕ್ಕಪರಿಶೋಧನಾ ವರದಿ :
ಸಂಘದ 22 ವರ್ಷಗಳ ಲೆಕ್ಕಪರಿಶೋಧನಾ ವರದಿ ಕೈಸೇರಿದ್ದು, ಬೈಲ ತಿದ್ದುಪಡಿಯನ್ನು ಸಭೆಯಲ್ಲಿ ಅನುಮೋದನೆ ಮಾಡಲಾಯಿತು.
ಮೌನ ಪ್ರಾರ್ಥನೆ:
ಇತ್ತೀಚೆಗೆ ನಿಧನರಾದ ಬಂಟರ ಸಂಘದ ಕಾರ‍್ಯಕಾರಿ ಸಮಿತಿ ಸದಸ್ಯರಾಗಿದ್ದ ನಾರಾಯಣ ರೈ ಚಿಲ್ಮೆತ್ತಾರು ಹಾಗೂ ಜಗನ್ನಾಥ ರೈ ಹೊಸಮನೆರವರಿಗೆ ಬಂಟರ ಸಂಘದ ವತಿಯಿಂದ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.
ವೇದಿಕೆಯಲ್ಲಿ ಬಂಟ ಸಮಾಜದ ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯಕ್, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿರವರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಬಂಟರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ ಸ್ವಾಗತಿಸಿ, ವರದಿ ವಾಚಿಸಿ, ವಂದಿಸಿದರು.
ಜೂನ್ 22: ಬಂಟರ ಸಂಘದ ಮಹಾಸಭೆ
ತಾ| ಬಂಟರ ಸಂಘದ ಮಹಾಸಭೆಯನ್ನು ಜೂ. 22 ರಂದು ಬೆಳಿಗ್ಗೆ 10.30ಕ್ಕೆ ನಡೆಸಲು ತೀರ್ಮಾನಿಸಲಾಯಿತು, ಚುನಾವಣಾಧಿಕಾರಿಯಾಗಿ ನ್ಯಾಯವಾದಿ ಬಾಲಕೃಷ್ಣ ರೈ ಆರಂತನಡ್ಕರವರನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮಹಾಸಭೆಯ ಕೆಲಸವನ್ನು ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ‍್ಯದರ್ಶಿ ನಿರ್ವಹಿಸಲು ಸಭೆ ನಿರ್ಣಯ ಕೈಗೊಂಡಿತು.