ಪುತ್ತೂರು: ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರ್ 26ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಇತ್ತೀಚೆಗೆ ಕೃತಜ್ಞತಾ ಸಮಾರಂಭ ಏರ್ಪಡಿಸಲಾಯಿತು.
ಸಮಾರಂಭವನ್ನು ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಮಹಾವೀರ ಆಸ್ಪತ್ರೆಯ 26 ವರ್ಷಗಳ ಅತ್ಯತ್ತಮ ವೈದ್ಯಕೀಯ ಸೇವೆಯನ್ನು ಶ್ಲಾಘಿಸಿದರು. ಡಾ ಅಶೋಕ್ ಪಡಿವಾಳ್ ದಂಪತಿಗಳ ಸೇವೆ ಮೆಚ್ಚುವಂತಹುದು .ಮೆಡಿಕಲ್ ಕಾಲೇಜು ಸ್ಥಾಪಿಸುವುದಾದರೆ 400ಎಕರೆ ಜಾಗ ಸರಕಾರದ ವತಿಯಿಂದ ಕಾದಿರಿಸಲಾಗಿದೆ. ಖಾಸಗಿಯವರು ಮುಂದೆ ಬಂದರೆ ಮೆಡಿಕಲ್ ಕಾಲೇಜು ಇಲ್ಲಿ ಸ್ಥಾಪಿಸಬಹುದು ಮತ್ತು ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಅತಿಥಿ ಕೆಎಂಸಿ ಆಸ್ಪತ್ರೆ ಖ್ಯಾತ ಹೃದ್ರೋಗ ತಜ್ಞ ಡಾ.ನರಸಿಂಹ ಪೈ ಅವರು ಮಾತನಾಡಿ ಪುತ್ತೂರಿನ ರೋಗಿಗಳ ವಿಶೇಷ ಅಭಿಯಾನವನ್ನು ಕೊಂಡಾಡಿದರು. ಅದೇ ರೀತಿ ಕಡುಬಡವರಿಗಾಗಿ ಶೀಘ್ರದಲ್ಲಿ ಮಂಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೆಎಂಸಿ ವತಿಯಿಂದ ಹೃದ್ರೋಗದ ಎಲ್ಲಾ ಆಸ್ಪತ್ರೆಗಳಿಗೆ ನೆರವಾಗುವ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.
ವೇದಿಕೆಯಲ್ಲಿದ್ದ ಆಸ್ಪತ್ರೆಯ ವೈದ್ಯ ಡಾ.ಪ್ರದೀಪ್ ಕುಮಾರ್ ಮತ್ತು ಡಾ. ಸುರೇಶ್ ಪುತ್ತೂರಾಯ ಮಾತನಾಡಿ ಎಲ್ಲಿ ವೈದ್ಯರುಗಳ ಮತ್ತು ಸಿಬ್ಬಂಧಿಗಳ ಸಹಕಾರಕ್ಕೆ ವಂದಿಸಿದರು. ವೈದ್ಯಕೀಯ ಸೇವೆಗಾಗಿ ಪ್ರಶಸ್ತಿಗಳಿಂದ ಡಾ ಸುರೇಶ್ ಪುತ್ತುರಾಯರಿಗೆ ಆಸ್ಪತ್ರೆಯ ವತಿಯಿಂದ ಸನ್ಮಾನಿಸಲಾಯಿತು. ಮತ್ತು ಅಶೋಕ್ ಪಡಿವಾಳ್ ದಂಪತಿಗಳನ್ನು ಅವರ ವೈದ್ಯಕೀಯ ಸೇವೆಗಾಗಿ ಜೈನ ಸಮುದಾಯದವರು ಮತ್ತು ಆಸ್ಪತ್ರೆಯ ಸಿಬ್ಬಂಧಿ ವರ್ಗದವರಿಂದ ಸನ್ಮಾನಿಸಲಾಯಿತು.
ಆಸ್ಪತ್ರೆಯ ಮುಖ್ಯಸ್ಥ ಡಾ. ಅಶೋಕ್ ಪಡಿವಾಳ್ ಸ್ವಾಗತಿಸಿ 26ವರ್ಷಗಳಲ್ಲಿ ಆಸ್ಪತ್ರೆ ಬೆಳೆದು ಬಂದ ರೀತಿಯನ್ನು ವಿವರಿಸಿದರು.ಡಾ. ಪ್ರದೀಪ್ ಕುಮಾರ್ ವಂದಿಸಿದರು.ಡಾ. ಸಾಯಿಪ್ರಕಾಶ್ ,ಡಾ. ರಜತಾ ಮತ್ತು ಸಹನಾ ಕಾರ್ಯಕ್ರಮ ನಿರೂಪಿಸಿದರು. ಅನೇಕ ವೈದ್ಯರು, ಗಣ್ಯರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಅಜೇಯ ಪಡಿವಾಳ, ನರೇಂದ್ರ ಪಡಿವಾಳ ಸೇರಿದಂತೆ ಪಡಿವಾಳ್ ಕುಟುಂಬದವರು, ಬಂದುಮಿತ್ರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಿದ್ವಾನ್ ಶ್ರೀಲತಾ ನಿಶ್ಚಿಕ್ ತಂಡದಿಂದ ವೀಣಾ ವಾದನ ಮತ್ತು ಕೊಳಲು ವಾದನ ಕಾರ್ಯಕ್ರಮ ಜರುಗಿತು