ಫಿಲೋಮಿನಾ ಕಾಲೇಜಿನ ಅನಘ ಎಸ್ ರೈ ಕಂಪೆನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಅನಘ ಎಸ್ ರೈಯವರು ಕಂಪೆನಿ ಸೆಕ್ರೆಟರಿ ಪ್ರವೇಶ ಪರೀಕ್ಷೆ ಸಿಎಸ್ಈಈಟಿ ಯಲ್ಲಿ ತೇರ್ಗಡೆಯಾಗಿದ್ದಾರೆ.

ಪ್ರಸ್ತುತ ವರ್ಷದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಐಸಿಎಸ್ಐನೊಂದಿಗಿನ ಸಹಯೋಗದಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿ ಅವರನ್ನು ಕಂಪೆನಿ ಸೆಕ್ರೆಟರಿ ಕೋರ್ಸ್ ಗೆ ಅಥವಾ ತತ್ಸಮಾನ ಕೋರ್ಸ್ ಗಳಿಗೆ ಸೇರುವಂತೆ ಅಣಿಗೊಳಿಸಲಾಗುತ್ತದೆ. ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾದ ಏಕೈಕ ಅಧ್ಯಯನ ಕೇಂದ್ರವಾಗಿದೆ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಐಸಿಎಸ್ಐ ಮಂಗಳೂರು ಚಾಪ್ಟರ್ ಜೊತೆ ಒಪ್ಪಂದ ಮಾಡಿಕೊಂಡು ಪುತ್ತೂರಿನ ಸ್ಟಡಿ ಸೆಂಟರ್ ಆಗಿ ಐಸಿಎಸ್ಐ ಜೊತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈಗಾಗಲೇ ಈ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಿಎಸ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತ ಬಂದಿರುತ್ತದೆ.

2024, ಮೇ 4ರಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಅನಘ ಸ್ ರೈ ಅವರು ಉತ್ತೀರ್ಣರಾಗಿರುತ್ತಾರೆ. ಪ್ರಥಮ ವರುಷದ ಪ್ರಥಮ ಬ್ಯಾಚ್ ನಲ್ಲಿ ವಿದ್ಯಾರ್ಥಿನಿ ಉತ್ತೀರ್ಣರಾಗಿರುವುದು ಅತಿ ಸಂತಸದ ವಿಷಯ. ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ವಿದ್ಯಾಥಿಗಳ ಕೌಶಲ್ಯ ಅಭಿವೃದ್ಧಿ ಕಡೆ ಗಮನ ತೋರುತ್ತಾ ಇಂತಹ ನವ ನವೀನ ವಿಷಯಗಳನ್ನು ನೀಡುತ್ತಾ ಕಾಲೇಜಿನ ಮತ್ತು ಬಿ ಬಿ ಎ ಕೋರ್ಸ್ ನ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತ ಬಂದಿರುತ್ತದೆ. ಇದು ಶಿಕ್ಷಕರಿಗೆ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಎಂದು ಕಾಲೇಜಿನ ಪ್ರಾಶುಪಾಲ ವಂ|ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ವ್ಯಕ್ತಪಡಿಸಿರುತ್ತಾರೆ.

ವಿದ್ಯಾರ್ಥಿಗಳು ಪ್ರೊಫೆಷನಲ್ ಕೋರ್ಸ್ ಅನ್ನು ಕಲಿಯಲು ಮಂಗಳೂರು ಮುಂತಾದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇದನ್ನರಿತ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಪ್ರಾಶುಪಾಲರೊಡನೆ ಚರ್ಚಿಸಿ ಪ್ರಸ್ತುತ ವರುಷ ಬಿಬಿಎ ವಿಥ್ ಕಂಪೆನಿ ಸೆಕ್ರೆಟರಿ ಕೋರ್ಸ್ ನೀಡುವ ಬಗ್ಗೆ ಯೋಚಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಿಎಸ್ ಕೋರ್ಸ್ ನೀಡುವ ಉದ್ದೇಶದಿಂದ ಐ.ಸಿ.ಎಸ್.ಐ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಬಿಬಿಎ ಕೋರ್ಸ್ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಸಿಎಸ್ ಕೋರ್ಸ್ ನೀಡುತ್ತಿದೆ ಎಂದು ವಿಭಾಗ ಮುಖ್ಯಸ್ಥ ರಾಧಾಕೃಷ್ಣ ಗೌಡ ತಿಳಿಸಿರುತ್ತಾರೆ. ಅನಘ ಸ್ ರೈ ಇವರು ಸದಾಶಿವ ರೈ ಮತ್ತು ಧ್ಯಾನ ಎಸ್ ರೈ ಇವರ ಪುತ್ರಿಯಾಗಿದ್ದು ಮಗಳ ಸಾಧನೆ ಬಗ್ಗೆ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here