ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ನೂತನ ಆಡಳಿತ ಮಂಡಳಿ ಪದಗ್ರಹಣ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಮೇ 26ರಂದು ನಡೆಯಿತು.


ಸಂತ ಅಲ್ಫೋನ್ಸ ಧರ್ಮಕೇಂದ್ರದ ಧರ್ಮಗುರು ವಂದನಿಯ ಫಾ. ಶಾಜಿ ಮ್ಯಾಥ್ಯು ಅವರು ನೂತನ ಟ್ರಸ್ಟಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಟ್ರಸ್ಟಿಗಳಾಗಿ ನಿವೃತ್ತ ಸೈನಿಕ ಅಲೆಕ್ಸ್ ಚೆಂಪಿತ್ತಾನಮ್, ಆಲ್ಬಿನ್ ಕೈದಮಟ್ಟಮ್, ಶಿಬು ಪನಚಿಕ್ಕಲ್, ಜೋಬಿನ್ ಪರಪರಾಗತ್, ಕಾರ್ಯದರ್ಶಿಯಾಗಿ ಜೆಸ್ಸಿತ ಕೆ.ಜೆ., ಕೋಶಾಧಿಕಾರಿಯಾಗಿ ಸುರೇಶ್ ಜಾರ್ಜ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಟ್ರಸ್ಟಿಗಳಾದ ಈಪನ್ ವರ್ಗೀಸ್, ಟೊಮಿ ಮಟ್ಟಮ್, ಬಿಜು ಪೆರುಂಪಳ್ಳಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here