ಆರ್.ಟಿ.ಸಿ ಗೆ ಆಧಾರ್ ಜೋಡಣೆ- ಸರ್ವರ್‌ ಸಮಸ್ಯೆ ,ಜನರ ಪರದಾಟ

0

ಆಲಂಕಾರು: ಸರಕಾರ ಪಹಣಿ ಪತ್ರಕೆ ಅಧಾರ್ ಜೋಡಣೆ ಮಾಡಲು ಗ್ರಾಮ ಆಡಳಿತಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು ಸರ್ವರ್ ಸಮಸ್ಯೆಯಿಂದಾಗಿ ಜನರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಜನರು ಗ್ರಾಮ ಆಡಳಿತಾಧಿಕಾರಿಯವರ ಕಛೇರಿಯಲ್ಲಿ ಕುಳಿತು ಗಂಟೆಗಟ್ಟಲೆ ಕಾದು ನಂತರ ಸರ್ವರ್ ಸಮಸ್ಯೆಯಿಂದ ಹಿಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಆಡಳಿತಾಧಿಕಾರಿಯವರಿಗೆ ವಾರದಲ್ಲಿ ಕೆಲವು ಗ್ರಾಮಗಳ ಜವಾಬ್ದಾರಿ ನೀಡಿದ್ದು ವಾರದಲ್ಲಿ ಆಯ್ದಾ ಗ್ರಾಮಗಳಲ್ಲಿ ವಾರದ ಕೆಲವೇ ದಿನಗಳಲ್ಲಿ ಗ್ರಾಮ ಆಡಳಿತಾಧಿಕಾರಿ ಯವರು ಜನರ ಸೇವೆಗೆ ದೊರಕುತ್ತಿದ್ದು ಇದೀಗ ಆಧಾರ್ ಮತ್ತು ಪಹಣಿ ಜೋಡಣೆ ಕೆಲಸ ಗ್ರಾಮ ಅಢಳಿತಾಧಿಕಾರಿಯವರಿಗೆ ನೀಡಿದ್ದು ಬೇರೆ ಯಾವುದೇ ಕೆಲಸ ಕಾರ್ಯಗಳು ಹಾಗು ಆಧಾರ್ ಮತ್ತು ಪಹಣಿ ಸರ್ವರ್ ಸಮಸ್ಯೆ ಯಿಂದ ಜೋಡಣೆಯಾಗದೆ ಜನರು ಶಪಿಸಿಕೊಂಡು ಹಿಂತಿರಿಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮ ವನ್ ನಾಗರಿಕ ಸೇವಾ ಕೇಂದ್ರದ ಮೂಲಕ ಜನರಿಗೆ ನೀಡಲು ಈ ಹಿಂದೆ ಉದ್ದೇಶಿಸಿದ್ದು ಇದೀಗ ಗ್ರಾಮವನ್ ನಾಗರಿಕ ಸೇವಾ ಕೇಂದ್ರಗಳಿಗೆ ಇಂತಹ ಯೋಜನೆಯನ್ನು ಅನುಷ್ಠಾನ ಮಾಡಲು ಸರಕಾರ ಯಾಕೆ ನೀಡುತ್ತಿಲ್ಲ. ಗ್ರಾಮ ಆಡಳಿತಾಧಿಕಾರಿ ಯವರಿಗೆ ಆಯಾಯಾ ಗ್ರಾಮದ ಅಧಾರ್ ಮತ್ತು ಪಹಣಿಗೆ ಜೋಡಣೆಯ ಕೆಲಸ ನೀಡಿದರೆ ಸರ್ವರ್ ಸಮಸ್ಯೆ ಯಿಂದ ಜನರು ಅಲೆದಾಡುವ ಮೂಲಕ ವರ್ಷಾನುಗಟ್ಟಲೆ ಸಮಯ ಆಧಾರ್ ಮತ್ತು ಪಹಣಿ ಜೋಡಣೆಗೆ ಬೇಕಾಗಿದ್ದು ಸಂಬಂಧ ಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here