ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆರಂಭವಾದ ಆಂಗ್ಲ ಮಾಧ್ಯಮ ತರಗತಿಗೆ ಎರಡನೇ ವರುಷದ ಸಂಭ್ರಮ

0

ಪೋಷಕರಿಂದ ನಿರಂತರ ಪ್ರೋತ್ಸಾಹ
ಎಲ್.ಕೆ.ಜಿ., ಯು.ಕೆ.ಜಿ., ಕ್ಲಾಸ್ ಗಳಿಗೆ ಅಡ್ಮಿಶನ್ ಆರಂಭ

ಹತ್ತು ಹಲವು ಸಮಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ಸಾರ್ವಜನಿಕರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಸಮಾನ ಮನಸ್ಕರ ಸಾಮಾಜಿಕ ಸಂಘಟನೆಯಾಗಿರುವ ರೋಟರಿ ಕ್ಲಬ್ ಪುತ್ತೂರು ಸಿಟಿಯು ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿ.ಪ್ರಾ ಶಾಲೆ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ನ ಆಶ್ರಯದಲ್ಲಿ ವರುಷಗಳ ಹಿಂದೆ ಆರಂಭಿಸಿರುವ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿ ಇದೀಗ ಎರಡನೇ ವರುಷದ ಸಂಭ್ರಮದಲ್ಲಿದೆ.

ಆರಂಭದ ದಿನಗಳಲ್ಲೇ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿತ್ತು ಮಾತ್ರವಲ್ಲದೆ ಪ್ರಥಮ ವರುಷವೇ 15 ಮಕ್ಕಳು ಸೇರ್ಪಡೆಗೊಂಡಿದ್ದರು. ಪ್ರಸ್ತುತ ವರ್ಷ ಈಗಾಗಲೇ ಎಲ್.ಕೆ.ಜಿ.ಗೆ 25 ಮಕ್ಕಳು ಹಾಗೂ ಯು.ಕೆ.ಜಿ.ಗೆ 15 ಮಕ್ಕಳ ಸೇರ್ಪಡೆಗೊಂಡಿದ್ದಾರೆ.

ರೋಟರಿ ಕ್ಲಬ್ ಪುತ್ತೂರು ಸಿಟಿಯ ನೇತೃತ್ವದಲ್ಲಿ ಪುತ್ತೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಶೆಲ್ಟರ್, ರೆಸ್ಟ್‌ ರೂಂ, ಬ್ಲಡ್ ಡೊನೇಶನ್, ಎಂಡೋ ಪೀಡಿತರಿಗೆ ಆಶ್ರಯ ಕಲ್ಪಿಸಿರುವುದು ಹಲವಾರು ಸೇವಾ ಕಾರ್ಯಗಳು ಕ್ಲಬ್ ನ ಸದಸ್ಯರ ಸಲಹೆ‌, ಸಹಕಾರದಿಂದ ನಡೆದಿದೆ.
ಇದೀಗ ತಮ್ಮ ಸಾಮಾಜಿಕ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಅನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡುತ್ತಾ ಸಂಸ್ಥೆ ಮುಂದುವರಿಯುತ್ತಿದೆ.

ಇದೀಗಾಗಲೇ ಈ‌ ಭಾರಿಯ ದಾಖಲಾತಿ ಆರಂಭಗೊಂಡಿದ್ದು ಹಲವಾರು ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣವನ್ನು ನಾವು ಇಲ್ಲಿ ನೀಡಲು ಪ್ರಯತ್ನ ನಡೆಸುತ್ತಿದ್ದೇವೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7338033775, 9342944566, 9482099155ಯನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಸುರೇಂದ್ರ ಕಿಣಿ, ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೀಡಿನಮಜಲು, ಸಂಚಾಲಕ ಉಲ್ಲಾಸ ಪೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here