ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾರಂಭೋತ್ಸವ

0

ಪುತ್ತೂರು: ಬೆಥನಿ ಆಂಗ್ಲ ಮಾಧ್ಯಮಾ ಶಾಲಾ ಪ್ರಾರಂಭೋತ್ಸವ ಮೇ.31ರಂದು ಶಾಲಾ ಸಭಾಭವನದಲ್ಲಿ ಜರುಗಿತು.  8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. 

ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್‌ ಬಿ.ಎಸ್‌, ಶಿಕ್ಷಕಿ ಪವಿತ್ರ ವಿ ಹಾಗೂ ವಿದ್ಯಾರ್ಥಿಗಳಾದ ಅಫ್ನಾನ್‌ ಅಲಿ, ಪ್ರೀತಿಕಾ ಹಾಗೂ ಆಕೃತಿ ಇವರು ದೀಪವನ್ನು ಬೆಳಗಿಸಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಶಿಕ್ಷಕಿಯರು ,ಬೆಥನಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಫಾದರ್‌ ರೈಮಂಡ್‌ ಫ್ರಾನ್ಸಿಸ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಭಗಿನಿ ಗ್ರೇಸಿ ಇವರು ವಿದ್ಯಾರ್ಥಿಗಳನ್ನು ಧ್ಯಾನದ ಮೂಲಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.  ಮುಖ್ಯ ಶಿಕ್ಷಕಿ ಭಗಿನಿ 8ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಶಿಕ್ಷಕರನ್ನು ಪರಿಚಯಿಸಿ, ಶಾಲಾ ನೀತಿ ನಿಯಮಗಳನ್ನು ವಿವರಿಸಿ ಶುಭ ಹಾರೈಸಿದರು.  ಶಿಕ್ಷಕಿ ಬೃಂದಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here