ಸವಣೂರು : ಸವಣೂರು ಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25 ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವನ್ನು ಒಂದನೇ ತರಗತಿ ವಿದ್ಯಾರ್ಥಿಗಳು ಪರದೆ ಸರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಶೈಕ್ಷಣಿಕ ವರ್ಷದ ಪ್ರಾರಂಭವೂ ಸವಿ ನೆನಪಾಗಿ ಆಗಿ ಉಳಿಯಬೇಕೆಂಬ ಉದ್ದೇಶದಿಂದ “ನನ್ನ ಶಾಲೆಯಲ್ಲಿ ನನ್ನ ಮೊದಲ ದಿನ ಎನ್ನುವ ಫೋಟೋ ಪ್ರೇಮ್ ಮಾಡಿಸಿಕೊಳ್ಳುವುದರ ಮೂಲಕ ವಿಭಿನ್ನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಹೂವು ಚೆಲ್ಲುವುದರ ಮೂಲಕ ಗೊಂಬೆ ವೇಷದೊಂದಿಗೆ ಬ್ಯಾಂಡ್ ವಾದನದೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಫೀಕ್ ಎಂ. ಎ ಉಪಾಧ್ಯಕ್ಷ, ದಿವ್ಯಲತಾ ಸದಸ್ಯರಾದ ಯಶೋಧ ಮುಖ್ಯ ಗುರುಗಳಾದ ಜುಸ್ತಿನಾ ಲಿಡ್ವಿನ್ ಡಿಸೋಜಾ, ಶಿಕ್ಷಕ ವೃಂದ,ಪೋಷಕ ವೃಂದ ಎಸ್, ಡಿ.ಎಂ.ಸಿ ಸದಸ್ಯರುಗಳು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಊರಿನ ವಿದ್ವಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳೆಲ್ಲರೂ ಭಾಗಿಯಾಗಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯಿಂದ ಕೊಡ ಮಾಡಲಾದ ಸಮವಸ್ತ್ರ ಹಾಗೂ ಪುಸ್ತಕವನ್ನು ವಿತರಿಸಲಾಯಿತು.ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸದಸ್ಯರಾದ ಶ್ರೀ ರಫೀಕ್ ನೆಕ್ಕರೆ ಹಾಗೂ ಹಿರಿಯ ವಿದ್ಯಾರ್ಥಿಯಾದ ಉದ್ಯಮಿ ನಝೀರ್ ಇವರಿಂದ ಸಿಹಿ ತಿಂಡಿಯನ್ನು ವಿತರಿಸಲಾಯಿತು.