ಬೆಳ್ಳಾರೆ : 2022ರ ಜುಲೈನಲ್ಲಿ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಭೀಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿಯನ್ನು ಎನ್‌ಐಎ ಮಂಗಳವಾರ ಬಂಧಿಸಿದೆ.
ಬಂಧಿತ ಆರೋಪಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ರಿಯಾಜ್ ಬಂಧನದಿಂದ ಪ್ರಕರಣದಲ್ಲಿ ಈವರೆಗೆ ಬಂಽತರಾಗಿರುವ ಒಟ್ಟು ಆರೋಪಿಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ಮನ್ಸೂರ್ ಪಾಷಾ ಜತೆಗೆ ತಲೆಮರೆಸಿಕೊಂಡಿದ್ದ ಮುಸ್ತಫ ಪೈಚಾರ್ ನನ್ನು ಬಂಧಿಸಿದ್ದ ತಿಂಗಳ ನಂತರ ಈ ಬಂಧನವಾಗಿದೆ.