ಓಜಾಲ ಸರಕಾರಿ ಹಿ. ಪ್ರಾ. ಶಾಲೆಗೆ ಕರ್ಣಾಟಕ ಬ್ಯಾಂಕ್ ನಿಂದ ಕೊಡುಗೆಯಾಗಿ ನೀಡಿದ ಬಸ್ ಗೆ ಚಾಲನೆ

0

ವಿಟ್ಲ: ಕುಳ ಗ್ರಾಮದ ಓಜಾಲ‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ಣಾಟಕ ಬ್ಯಾಂಕ್ ನಿಂದ ಕೊಡುಗೆಯಾಗಿ ನೀಡಿದ ಶಾಲಾ ಬಸ್ಸಿನ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ನಡೆಯಿತು.ಕರ್ಣಾಟಕ ಬ್ಯಾಂಕಿನ ಕಬಕ ಶಾಖಾ ವ್ಯವಸ್ಥಾಪಕರಾದ ಶಶಿಧರ್ ರವರು ಚಾಲನೆ ನೀಡಿದರು.


ಇದೇ ಸಂದರ್ಭದಲ್ಲಿ ಸರಕಾರದಿಂದ ನೀಡಿದ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚಿದಾನಂದ ಪೆಲತಿಂಜ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಸುಂದರ ಗೌಡ ಓಜಾಲರವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಿದಾನಂದ ಪೆಲತಿಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ವೇದಿಕೆಯಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಇಡ್ಕಿದು ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾದ ಈಶ್ವರ್ ನಾಯ್ಕ್, ಪದ್ಮನಾಭ ಸಪಲ್ಯ, ಸೋಮಶೇಖರ ಪೂಜಾರಿ, , ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ರಮೇಶ್ ಚಂದ್ರ ಎನ್. ಎಸ್. ಭಟ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸುಮಯ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ , ಶಿಕ್ಷಕಿ ವಿಲ್ಮಾ ಸಿಕ್ವೇರಾ ವಂದಿಸಿದರು. ಶಿಕ್ಷಕಿಯರಾದ ಜೆಸಿಂತಾ ಲೋಬೊ, ನೇತ್ರಾವತಿ ಎಸ್, ಕುಶಲಕುಮಾರಿ, ಹರ್ಷಿತ, ಚಂದ್ರಕಲಾ, ನವ್ಯಶ್ರೀ, ಅಕ್ಷರ ದಾಸೋಹ ಅಡುಗೆ ಸಿಬಂದಿಗಳಾದ ಕುಸುಮಾ, ಹರಿಣಾಕ್ಷಿ, ವನಿತಾ ಸಹಕರಿಸಿದರು.

12 ಮಕ್ಕಳಿದ್ದ ಶಾಲೆಯಲ್ಲಿ ಇದೀಗ 129 ಮಕ್ಕಳು

ಚಿದಾನಂದ ಪೆಲತ್ತಿಂಜ
ಅಧ್ಯಕ್ಷರು
ಎಸ್.ಡಿ.ಎಂ.ಸಿ.


ಹನ್ನೆರಡು ಮಕ್ಕಳಿದ್ದ ನಮ್ಮ ಶಾಲೆಯಲ್ಲಿ ಇದೀಗ ಸುಮಾರು 129 ಮಕ್ಕಳು ಕಲಿಯುತ್ತಿದ್ದಾರೆ. ಮೂರು ಕೊಠಡಿಯಲ್ಲಿ ಆರಂಭವಾದ ಶಾಲೆಯಲ್ಲಿ ಇದೀಗ ಏಳು ಕೊಠಡಿಗಳಿವೆ. ಒಂದು ಕೊಠಡಿ ಸರಕಾರದ ಅನುದಾನದಲ್ಲಿ ನಿರ್ಮಿಸಲ್ಪಟ್ಟರೆ. ಮೂರು ಕೊಠಡಿಯನ್ನು ರೋಟರಿ ಕ್ಲಬ್ ನಿಂದ ಕೊಡುಗೆಯಾಗಿ ಲಭಿಸಿದೆ. ಮಕ್ಕಳ ಆಟೋಟಗಳಿಗೆ ಸಹಕಾರಿಯಾಗಲೆಂದು ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾದ ಮಕ್ಕಳ ಉದ್ಯಾನವನವನ್ನು ಮತ್ತಷ್ಟು ಸಹಕಾರಿಯಾಗಿದೆ. ಮೂರು ಶಿಕ್ಷಕರಿದ್ದ ಶಾಲೆಯಲ್ಲಿ ಇದೀಗ ಏಳು ಸರಕಾರಿ ಶಿಕ್ಷಕರು ಹಾಗೂ ಎರಡು ಗೌರವ ಶಿಕ್ಷಕರಿದ್ದಾರೆ. ಮಕ್ಕಳ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದನೇ ತರಗತಿಯಿಂದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಕರಾಟೆ ಹಾಗೂ ಡ್ಯಾನ್ಸ್ ಕಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಇದೀಗ ಕರ್ನಾಟಕ ಬ್ಯಾಕ್ ನಿಂದ ಶಾಲಾ ಮಕ್ಕಳ ಅನುಕೂಲಕ್ಕಾಗಿ ಬಸ್ ಕೊಡುಗೆಯಾಗಿ ಲಭಿಸಿದೆ. ಎಲ್ಲರ ಸಹಕಾರದಿಂದಾಗಿ ಗ್ರಾಮೀಣ ಭಾಗದ ಶಾಲೆಯೊಂದು ಇಷ್ಟೊಂದು ಬೆಳೆದು ನಿಲ್ಲಲು ಕಾರಣವಾಗಿದೆ.

LEAVE A REPLY

Please enter your comment!
Please enter your name here