ಸೂರಂಬೈಲು ಶಾಲೆಗೆ ಪುತ್ತಿಲ ಪರಿವಾರ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಮುಳಿಯ ಜ್ಯುವೆಲ್ಸ್ ಪುತ್ತೂರು ವತಿಯಿಂದ ಉಚಿತ  ಬ್ಯಾಗ್,ನೋಟ್ ಪುಸ್ತಕ, ಸಮವಸ್ತ್ರ ವಿತರಣೆ

0

ನಿಡ್ಪಳ್ಳಿ:ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಇಲ್ಲಿಯ ಮಕ್ಕಳಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ಮುಳಿಯ ಜ್ಯುವೆಲ್ಲರ್ಸ್ ಪುತ್ತೂರು ವತಿಯಿಂದ ಕೊಡುಗೆಯಾಗಿ ನೀಡಿದ ಉಚಿತ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಸಮವಸ್ತ್ರ  ವಿತರಣೆ ಕಾರ್ಯಕ್ರಮ ಜೂ.7 ರಂದು ನಡೆಯಿತು.

ಪುತ್ತಿಲ ಪರಿವಾರದ ಪುತ್ತೂರು ಘಟಕದ ವಕ್ತಾರ ಸುನೀಲ್ ಬೋರ್ಕರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಇವರು ಮಕ್ಕಳ ವಿಧ್ಯಾಭ್ಯಾಸಕ್ಕೆ ಶುಭ ಹಾರೈಸಿ ಕೊಡುಗೆಗಳನ್ನು ವಿತರಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಪಾಣಾಜೆ ಘಟಕದ ಅಧ್ಯಕ್ಷ ರಮೇಶ್ ಭಟ್ ಬೊಳ್ಳುಕಲ್ಲು ಮತ್ತು ಕಾರ್ಯದರ್ಶಿ ಪುಷ್ಪರಾಜ್ ರೈ ಕೋಟೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಇದರ ನಿಯೋಜಿತ ಅಧ್ಯಕ್ಷರು ಹಾಗೂ ಮುಳಿಯ ಜ್ಯುವೆಲ್ಲರ್ಸ್ ನ ಅಶ್ವಿನಿ ಕೃಷ್ಣ ಮುಳಿಯ ಮತ್ತು ಅವರ ಮಗಳಾದ ಇಷಾ ಸುಲೋಚನಾ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಿದರು. ಬೆಟ್ಟಂಪಾಡಿ ಕ್ಲಸ್ಟರಿನ ಸಿ.ಆರ್.ಪಿ. ಪರಮೇಶ್ವರಿ ಪ್ರಸಾದ್ ಶುಭ ಹಾರೈಸಿ ಇಲಾಖಾ ಪರವಾಗಿ ಕೃತಜ್ಞತೆ ಸಲ್ಲಿಸಿದರು.  ಶಾಲಾ ಎಸ್.ಡಿ.ಯಂ.ಸಿ. ಅಧ್ಯಕ್ಷರಾದ ಸುನೀತಾ ತಾರಾನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಗುರು  ಊರ್ಮಿಳಾ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡುಗೆ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ಇದರ ಸಿಬ್ಬಂದಿ ಸಂಜೀವ ಉಪಸ್ಥಿತರಿದ್ದರು.

  ಗೌರವಾರ್ಪಣೆ;
ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಈ ಕೊಡುಗೆ ನೀಡಿದ ಸಂಘಟನೆ ಮುಖ್ಯಸ್ಥರಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತೂರಿನ ಪ್ರತಿಷ್ಟೆಯ ಮುಳಿಯ ಸಂಸ್ಥೆಯ  ಅಶ್ವಿನಿ ಕೃಷ್ಣ ಮುಳಿಯ ಇವರನ್ನು ಶಾಲಾ ಪರವಾಗಿ ಗೌರವಿಸಲಾಯಿತು.ಗೌರವಾರ್ಪಣಾ ಕಾರ್ಯಕ್ರಮವನ್ನು ಸಹಶಿಕ್ಷಕ ನಾಗೇಶ್ ಪಾಟಾಳಿ  ನೆರವೇರಿಸಿದರು.

   ಪುತ್ತಿಲ ಪರಿವಾರ ಪಾಣಾಜೆ ಘಟಕದ ಸರ್ವ ಸದಸ್ಯರು,   ಎಸ್.ಡಿ.ಯಂ. ಸಿ. ಸದಸ್ಯರು, ಪೋಷಕ ವೃಂದದವರು, ಹಳೆವಿದ್ಯಾರ್ಥಿಗಳು , ಮಕ್ಕಳು ಭಾಗವಹಿಸಿದ್ದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಎಸ್.ಡಿ.ಎಂ.ಸಿ ಸದಸ್ಯ ವಸಂತ ಕುರೂಪ್ ಸ್ವಾಗತಿಸಿ, ಸಹಶಿಕ್ಷಕಿ ಪವಿತ್ರ ಎಂ.ಅರ್ ವಂದಿಸಿದರು. ಅಥಿತಿ ಶಿಕ್ಷಕಿ ಸುಪ್ರೀತಾ ಕೆ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಗೌರವ ಶಿಕ್ಷಕಿಯರಾದ ವಿದ್ಯಾಲಕ್ಷ್ಮಿ ಮತ್ತು ಯಶಸ್ವಿನಿ,ಸೂರ್ಯನಾರಾಯಣ ತೂಂಬಡ್ಕ,  ಪುತ್ತಿಲ ಪರಿವಾರದ ಪಾಣಾಜೆ ಗ್ರಾಮ ಸಮಿತಿ ಸದಸ್ಯರಾದ ಪ್ರದೀಪ್ ಪಾಣಾಜೆ,ಶಂಕರ್ ಭರಣ್ಯ ,ಗುರುರಾಜ್ ಭರಣ್ಯ, ಶಾಲಾ ಪೋಷಕರು ಸಹಕರಿಸಿದರು. 

LEAVE A REPLY

Please enter your comment!
Please enter your name here