ಸುಳ್ಯಪದವು: ಹಿಂದೂ ಜಾಗರಣ ವೇದಿಕೆ ವತಿಯಿಂದ 3 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ

0

ಬಡಗನ್ನೂರುಃ ಸುಳ್ಯಪದವು ಹಿಂದು ಜಾಗರಣ ವೇದಿಕೆ  ಘಟಕದ ವತಿಯಿಂದ 3 ನೇ ವರ್ಷದ  ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಜೂ 9 ರಂದು ಸುಳ್ಯಪದವು ಸಮುದಾಯ ಭವನದಲ್ಲಿ ನಡೆಯಿತು. ಬೆಳಗ್ಗೆ  ಗಣಪತಿ ಹೋಮ, ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರ್ರಾರಂಭ ಗೊಂಡಿತು. ಮಧ್ಯಾಹ್ನ ಶ್ರೀ ದೇವರ ಮಂಗಳಾರತಿ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.  

ಪೈರುಪುಣಿ ಸದಾಶಿವ ಭಟ್  ಮತ್ತು ಬಳಗದವರಿಂದ  ಪೂಜಾ ವಿಧಿ ವಿಧಾನಗಳು ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶೀತಲ್ ಬಾರ್ & ರೆಸ್ಟೋರೆಂಟ್ ಮಾಲಕ ಸುರೇಶ್ ಕುಮಾರ್ ಕೆಮ್ಮಿಂಜೆ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.

ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಧಾರ್ಮಿಕ ಭಾಷಣ ಮಾಡಿ ಮಾತನಾಡಿ ಯುವ ಸಂಘಟನೆಯಿಂದ ದೇಶದ ರಕ್ಷಣೆ ಸಾಧ್ಯ , ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಸಂಘಟನೆಯನ್ನು ಬಲವಧರ್ನೆ ಮಾಡುವ ಅಗತ್ಯವಿದೆ. ಮುಂದೆ ಸೈನಿಕರಾಗಿ ದೇಶದ ರಕ್ಷಣೆಗೆ ಪಣತೋಡೋಣ ಎಂದು ಹೇಳಿ ಶುಭ ಹಾರೈಸಿದರು.

ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ  ಗೋಪಾಲ ನಾಯಕ್ ಇಂದಾಜೆ ಸುಳ್ಯಪದವು, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ  ಪುಷ್ಪಲತಾ ದೇವಕಜೆ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು,

ವೇದಿಕೆಯಲ್ಲಿ  ಗ್ರಾಮ ಪಂಚಾಯತ್ ಸದಸ್ಯ  ವೆಂಕಟೇಶ್ ಕನ್ನಡ್ಕ, ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಅಶೋಕ್ ಪಿ. ಎಸ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಎಂ. ಎಸ್ ಉಪಸ್ಥಿತರಿದ್ದರು.

ಸನ್ಮಾನ
ಶೈಕ್ಷಣಿಕ ವರ್ಷದ ಸರ್ವೋದಯ ಪ್ರೌಢ ಶಾಲೆಯ  ಎಸ್ ಎಸ್ ಎಲ್ ಸಿ  ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ,ಸ್ಥಾನ ಪಡೆದ  ಸಾನ್ವಿಕಾ ಎಸ್ ರೈ ದ್ವಿತೀಯ ಸ್ಥಾನ ಪಡೆದ  ಜಶ್ವಿನ್ ಪದಡ್ಕ  ಮತ್ತು ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಹಾಗೂ ಹಲವು ವರ್ಷಗಳಿಂದ ಸುಳ್ಯಪದವಿನ ಬಸ್ ಸ್ಟಾಂಡ್ ನಲ್ಲಿ ಒಬ್ಬಂಟಿಯಾಗಿ ಉಳಿದುಕೊಂಡು, ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡುತ್ತಾ ಜನರ ಗಮನ ಸೆಳೆದ ಮಲ್ಲಿಕ್ ಶೆಟ್ಟಿ ಅರಸೀಕೆರೆ ಅವರನ್ನು ಗುರುತಿಸಿದ ಸಂಘಟನೆ ಅವರಿಗೆ ಸನ್ಮಾನವನ್ನು ಮಾಡಲಾಯಿತು.

ಹಿಂದೂ ಜಾಗರಣ ವೇದಿಕೆಯ ಸದಸ್ಯರಾದ ವಿಜಯ್ ಕುಮಾರ್ ಕನ್ನಡ್ಕ ಸ್ವಾಗತಿಸಿ, ಗುರುಕಿರಣ್ ರೈ ಎಂ. ಜಿ  ವಂದಿಸಿದರು . ರಾಜೇಶ್ ಕರೋಡಿಯನ್ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.

ಭಜನಾ ಕಾರ್ಯಕ್ರಮ:-
ಕಾರ್ಯಕ್ರಮದಲ್ಲಿ  ಸುಳ್ಯಪದವು ಮಹಾಲಕ್ಷ್ಮಿ ಮಹಿಳಾ ಭಜನಾ ಸಂಘದ ಸದಸ್ಯರಿಂದ ಮತ್ತು ಮಹಾಲಕ್ಷ್ಮಿ ಮಕ್ಕಳ ಭಜನಾ  ಮಂಡಳಿ ಸದಸ್ಯರಿಂದ  ಭಜನಾ ಕಾರ್ಯಕ್ರಮ ನಡೆಯಿತು.

ಅನ್ನದಾನ 
ಕಾರ್ಯಕ್ರಮದಲ್ಲಿ  ಸುಮಾರು 450 ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here