ಗೋಳಿತ್ತೊಟ್ಟು; ಶಾಲಾ ವಿದ್ಯಾರ್ಥಿ ಸಂಸತ್ತು ಚುನಾವಣೆ

0

ನೆಲ್ಯಾಡಿ: ಗೋಳಿತ್ತೊಟ್ಟು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ತು ಇದರ ಚುನಾವಣೆಯು ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.

ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯುನ್ಮಾನ ಮತಯಂತ್ರ (ಮೊಬೈಲ್ ಆಪ್)ಬಳಸಿ ಚುನಾವಣೆಯನ್ನು ನಡೆಸಲಾಯಿತು. ಶಾಲಾ ನಾಯಕ ಸ್ಥಾನಕ್ಕೆ 8ನೇ ತರಗತಿಯ ಮೊಹಮ್ಮದ್ ಅನಸ್, ಶರಣ್ಯ ಜಿ.ಕೆ, ಹಾಗೂ ಪಿ.ವಿವೇಕ್ ಸ್ಪರ್ಧಿಸಿದ್ದು ಅತ್ಯಂತ ಹೆಚ್ಚು ಮತಗಳನ್ನು ಪಡೆದ ಶರಣ್ಯ ಜಿ.ಕೆ, ಶಾಲಾ ಮಂತ್ರಿಮಂಡಲದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಶಾಲಾ ಉಪನಾಯಕನ ಹುದ್ದೆಗೆ 7ನೇ ತರಗತಿಯ ಮಹಮ್ಮದ್ ಸಾಲೀಮ್ ಸ್ಪರ್ಧಿಸಿದ್ದು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದನು. ಉಳಿದಂತೆ ಶಿಕ್ಷಣಮಂತ್ರಿಗಳಾಗಿ ಏಳನೇ ತರಗತಿಯ ಶ್ರೀರಕ್ಷಾ ಕೆ.ಜಿ., ಸಾಂಸ್ಕೃತಿಕ ಮಂತ್ರಿಗಳಾಗಿ ಆರಾಧ್ಯ ಕೆ., ಆರೋಗ್ಯ ಮಂತ್ರಿಗಳಾಗಿ 8ನೇ ತರಗತಿಯ ಆಯಿಷತ್ ಫಬೀನ, ಆಹಾರ ಮಂತ್ರಿಗಳಾಗಿ ಮುಹಮ್ಮದ್ ಸಹದತ್, ಕ್ರೀಡಾಮಂತ್ರಿಯಾಗಿ ಎಂಟನೇ ತರಗತಿಯ ಪಿ.ವಿವೇಕ್, ರಕ್ಷಣಾ ಮಂತ್ರಿಯಾಗಿ ಶ್ರೇಯಸ್ ಎ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಗಳಾಗಿ ಮೊಹಮ್ಮದ್ ಅನಸ್, ವಾರ್ತಾಮಂತ್ರಿಗಳಾಗಿ ದೀಪ್ತಿ ಸಿ.ಪಿ., ಸ್ವಚ್ಚತಾ ಮಂತ್ರಿಗಳಾಗಿ ಫಾತಿಮತ್ ಆರಿಫ, ಗ್ರಂಥಾಲಯ ಮಂತ್ರಿಗಳಾಗಿ ಕುಶಿ ಆಯ್ಕೆಯಾದರು.
ಶಾಲಾ ಸಂಸತ್ತಿನ ನೂತನ ಸಭಾಪತಿಗಳಾಗಿ ಏಳನೇ ತರಗತಿಯ ಫಾತಿಮತ್ ಆಶುರಾ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ 6ನೇ ತರಗತಿಯ ಫಾತಿಮತ್ ಆರಿಫರವರನ್ನು ಆಯ್ಕೆ ಮಾಡಲಾಯಿತು. ನಾಮಪತ್ರ ಸಲ್ಲಿಕೆ, ನಾಮ ಪತ್ರ ಹಿಂಪಡೆಯುವಿಕೆ, ಚುನಾವಣಾ ಪ್ರಚಾರ, ಮಾದರಿ ಮತದಾನ ಕೇಂದ್ರ ಹಾಗೂ ಮತದಾನ ಕೇಂದ್ರದ ಅಧಿಕಾರಿಗಳು, ಮತಪತ್ರ ಹಾಗೂ ವಿದ್ಯುನ್ಮಾನ ಮತಯಂತ್ರದ ಬಳಕೆ, ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಸೇರಿದಂತೆ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ನೈಜ ಚುನಾವಣೆಯ ಅನುಭವವನ್ನು ಪಡೆಯುವುದರೊಂದಿಗೆ ಅನುಭವಾತ್ಮಕ ಕಲಿಕೆಗೆ ಸಾಕ್ಷಿಯಾದರು. ಶಾಲಾ ಸಂಸತ್ತಿನ ಚುನಾವಣೆಯನ್ನು ಶಾಲಾ ಮುಖ್ಯಗುರು ಶ್ರೀಮತಿ ಜಯಂತಿ ಬಿ.ಎಂ.ರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಜೋನ್ ಕೆ.ಪಿ, ಶಿಕ್ಷಕರಾದ ಅಬ್ದುಲ್ ಲತೀಫ್ ಸಿ., ತೇಜಸ್ವಿ ಅಂಬೆಕಲ್ಲು, ಮನ್ವಿತಾ ಡಿ., ಹಾಗೂ ಗೌರವ ಶಿಕ್ಷಕಿ ಯಶಸ್ವಿನಿರವರ ಸಹಕಾರದೊಂದಿಗೆ ನಡೆಸಲಾಯಿತು.

LEAVE A REPLY

Please enter your comment!
Please enter your name here