ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳಿಗೆ ತೆರೆ

0

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ದೇವರ ಹೊರಾಂಗಣ ಉತ್ಸವಾದಿಗಳು ಬುಧವಾರ ತೆರೆಕಂಡವು. ಜೇಷ್ಠ ಶುದ್ಧ ಷಷ್ಠಿಯ ದಿನ ಹೊರಾಂಗಣದಲ್ಲಿ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿದ ಬಳಿಕ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವ ಸಂಪನ್ನವಾಯಿತು.

ಬಳಿಕ ಒಳಾಂಗಣದ ಕಟ್ಟೆಯಲ್ಲಿ ಪೂಜೆ ಮತ್ತು ವಸಂತ ಪೂಜೆ, ಪಂಚಾಂಗ ಶ್ರವಣ ನೆರವೇರಿತು. ತದನಂತರ ಫಲವಸ್ತುಗಳನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಿಸಲಾಯಿತು. ಊರ ಮತ್ತು ಪರವೂರ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಇನ್ನು ದೀಪಾವಳಿ ಅಮಾವಾಸ್ಯೆಯ ತನಕ ದೇವಸ್ಥಾನದಲ್ಲಿ ಹರಕೆ ಉತ್ಸವ ಗಳು ನಡೆಯುವುದಿಲ್ಲ. ದಿನನಿತ್ಯ ನಡೆಯುವ ಹರಕೆ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಪಂಚಾಮೃತ ಮಹಾಭಿಷೇಕ, ಶೇಷಸೇವೆ ಇತ್ಯಾದಿ ಸೇವೆಗಳು ಏಕಾದಶಿ ಮತ್ತಿತರ ಉಪವಾಸ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲಿ ಎಂದಿನಂತೆ ಜರಗುತ್ತವೆ.

LEAVE A REPLY

Please enter your comment!
Please enter your name here