ಬುರೂಜ್ ಶಾಲೆಯಲ್ಲಿ ಯೋಗೋತ್ಸವ ಆಚರಣೆ

0

ಪುಂಜಾಲಕಟ್ಟೆ: ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ವತಿಯಿಂದ ಜೂ.10 ರಿಂದ 20 ವರೆಗೆ ಹಮ್ಮಿಕೊಂಡ ಯೋಗತ್ಸವ ಆಚರಣೆ ಪ್ರಯುಕ್ತ , ಜೂ. 15ರಂದು ರಾಜ್ಯಾದ್ಯಂತ ಭಾರತ್ ಸ್ಕೌಟ್ಸ್ -ಗೈಡ್ಸ್ ಸಂಸ್ಥೆ ಮತ್ತು ಎಲ್ಲಾ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಶಾಲಾ ಕಾಲೇಜುಗಳಲ್ಲಿ ಯೋಗೋತ್ಸವ ಆಚರಣೆ ಮಾಡಲಾಯಿತು.ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಮೂಡುಪಡಕೋಡಿ ಇಲ್ಲಿನ ವಿದ್ಯಾರ್ಥಿಗಳೂ ಕೂಡ ಯೋಗ ಮಾಡುವುದರ ಮೂಲಕ ಯೋಗೋತ್ಸವ ಆಚರಣೆ ಮಾಡಿದರು.

ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಬಿ ಉದ್ಘಾಟಿಸಿದರು. ಶಿಕ್ಷಕಿಯರಾದ ಶೇಖ್ ಸಾದಿಯ ಮತ್ತು ಚಂದ್ರಾವತಿ ಇವರುಗಳು ಮಾರ್ಗದರ್ಶನ ನೀಡಿದರು.
ಯೋಗದ ಮಹತ್ವವನ್ನು ವಿವರಿಸಿದ ಶೇಖ್ ಜಲಾಲುದ್ದೀನ್ ರವರು ಮಾತನಾಡಿ , ಯೋಗಾಸನಗಳು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುದಲ್ಲದೇ , ಇದೊಂದು ಆರೋಗ್ಯಕರ ಜೀವನ ಕಲೆ. ಕಲಿತ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವಂತೆ ತಿಳಿಸಿದರು.


ಚೇತನಾ ಮಾತನಾಡಿ , ಯೋಗ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಯೋಗ ವಿಧಾನವನ್ನು ಕಿಶ್ಫಾ ಝಬೀನ್ ವಿವರಿಸಿದರು. ವಿದ್ಯಾರ್ಥಿಗಳಾದ ಅಫ್ರಾ ರಿಂಷಾ, ಮಶ್ಕೂರ ಹನಾ ,ಸ್ಪೂರ್ತಿ ,ಪ್ರತೀಕ , ಸ್ಪೂರ್ತಿ ಜಾದರ್,ರಿಷಾನ ಇವರ ಮಾರ್ಗದರ್ಶನದಲ್ಲಿ ಯೋಗೋತ್ಸವ ಪ್ರಾರಂಭಗೊಂಡಿತು.ತದನಂತರ ಎಲ್ಲಾ ವಿದ್ಯಾರ್ಥಿಗಳು ಯೋಗಭ್ಯಾಸ ಪ್ರಾರಂಭಿಸಿದರು. ಈ ವೇಳೆ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here