ಬಡಗನ್ನೂರು: ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿನಗರ ಸುಳ್ಯಪದವು ಇಲ್ಲಿ ಜೂ.14ರಂದು ಸಂಕ್ರಮಣ ಅಂಗವಾಗಿ ಅಗೇಲು ಸೇವೆ ಹಾಗೂ ಶ್ರೀ ಗುಳಿಗ ದೈವಕ್ಕೆ ಕಳಸ ಸೇವೆ ನಡೆಯಿತು.ಊರ ಪರವುಊರ ಭಕ್ತಾದಿಗಳಿಂದ ಸುಮಾರು 163 ಹರಕೆ ಅಗೆಲು ಸೇವೆ ಹಾಗೂ ಕಳಸ ಸೇವೆ ನಡೆಯಿತು.ಬಳಿಕ ಸುಮಾರು 800 ಮಿಕ್ಕಿ ಭಕ್ತಾಧಿಗಳು ಅನ್ನಪ್ರಸಾದ ಬೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಸುಮಾರು 163ಕ್ಕೂ ಮಿಕ್ಕಿ ಅಗೇಲು ಸೇವೆ ಮತ್ತು, ಕಳಸ ಸೇವೆ ಸಲ್ಲಿಸಿ ತಮ್ಮ ತಮ್ಮ ಬೇಡಿಕೆಗಳು ಈಡೇರಿಸುವಂತೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ಬೋಳಂಕೂಡ್ಲು, ಕೋಶಾಧಿಕಾರಿ ಭಾಸ್ಕರ ಹೆಗ್ಗಡೆ ಶಬರಿನಗರ, ಪ್ರಧಾನ ಪೂಜಾ ಕರ್ಮಿ ಮಾದವ ಸಾಲಿಯಾನ್ ಹಾಗೂ ಊರ ಭಕ್ತಾದಿಗಳು ಭಾಗವಹಿಸಿದ್ದರು.
ಅಭಿವೃದ್ಧಿ ಕಾರ್ಯ:-
ಭಕ್ತಾಧಿಗಳ ಸಹಕಾರದಿಂದ ಕ್ಷೇತ್ರದಲ್ಲಿ ಪ್ರತಿವರ್ಷ ಒಂದೊಂದು ಅಭಿವೃದ್ಧಿ ಕಾರ್ಯ ನಡೆಸುತ್ತ ಬರುತ್ತಿದ್ದು ಈ ವರ್ಷ ಸಾನಿಧ್ಯದ ಸುತ್ತಲೂ ಸುಮಾರು 3.80 ಲಕ್ಷ ವೆಚ್ಚದಲ್ಲಿ ಚಪ್ಪರ ಕಾರ್ಯ ನಡೆಸಲಾಗಿದೆ.ಎಂದು ಸಂಘಟಕರು ತಿಳಿಸಿದರು.