ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ ಅಪಾಯಕಾರಿ ಮರ ತೆರವು ಮಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ಬರೆಯಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಜು.13 ರಂದು ನಡೆಯಿತು.

ಮೈಂದನಡ್ಕ- ಸುಳ್ಯಪದವು ಲೋಕೋಪಯೋಗಿ ರಸ್ತೆಯ ಪದಡ್ಕ ಎಂಬಲ್ಲಿ ಒಣಗಿದ ಮರವೊಂದು ಅಪಾಯದ ಹಂತದಲ್ಲಿದೆ. ಈ ಭಾಗದಲ್ಲಿ ಶಾಲಾ ಮಕ್ಕಳು, ಹೆಚ್ಚು ಸಂಚಾರಿಸುತ್ತಾರೆ, ಮತ್ತು ವಾಹನ ಸಂಚಾರದ ದಟ್ಟಣೆ ಹೆಚ್ಚು ಇದೆ. ಮಳೆಗಾಲದ ಈ ಸಮಯದಲ್ಲಿ ಗಾಳಿ ಮಳೆಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಈ ನಿಟ್ಟಿನಲ್ಲಿ ಅಪಾಯ ಸಂಭವಿಸುವ ಮುನ್ನ ಮರ ತೆರವು ಗೊಳಿಸುವುದು ಉತ್ತಮ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗೆ ಬರೆಯುವಂತೆ ಸದಸ್ಯ ಧರ್ಮೇಂದ್ರ ಕುಲಾಲ್ ಪದಡ್ಕ ಒತ್ತಾಯಿಸಿದರು. ಇವರೊಂದಿಗೆ ಸದಸ್ಯ ವೆಂಕಟೇಶ್  ಕನ್ನಡ್ಕ ಧ್ವನಿ ಗೂಡಿಸಿ ಕನ್ನಡ್ಕದಿಂದ ಪಿಲಿಪುಡೆ ವೆರೆಗೆ ಕೆಲವು ಅಪಾಯಕಾರಿ ಮರಗಳಿವೆ ಅದನ್ನು ತೆರವು ಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆ ಬರೆಯುವಂತೆ  ಒತ್ತಾಯಿಸಿದರು  . ಈ ಬಗ್ಗೆ ಚರ್ಚಿಸಿ  ಅಪಾಯಕಾರಿ ಮರ ತೆರವು ಬಗ್ಗೆ  ಸಂಬಂಧ ಪಟ್ಟ ಇಲಾಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಮೆಸ್ಕಾಂ ಇಲಾಖೆಗೆ 24/7  ವಾಹನ ವ್ಯವಸ್ಥೆ ಕಲ್ಪಿಸಿ
ಮಳೆಗಾಲದ ಸಮಯದಲ್ಲಿ  ಗಾಳಿ ಮಳೆಗೆ ಅನೇಕ ಭಾಗದಲ್ಲಿ  ವಿದ್ಯುತ್ ಸಮಸ್ಯೆ ಉಂಟಾಗುತ್ತದೆ.ಈ ದೃಷ್ಟಿಯಿಂದ  ಸಮಸ್ಯೆ ಶ್ರೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಇಲಾಖೆಗೆ 24/7  ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಸದಸ್ಯ ಲಿಂಗಪ್ಪ ಗೌಡ ಮೋಡಿಕೆ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿ ಸಂಬಂಧ ಪಟ್ಟ ಇಲಾಧಿಕಾರಿಗಳಿಗೆ ಬರೆಯಲು ಆಗ್ರಹಿಸಿದರು. ಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಪದಡ್ಕ ಕುಡಿಯುವ ನೀರಿನ ಕೊಳವೆ ಬಾವಿಗೆ ಪಂಪ್ ಇಳಿಸುವ ಕಾಮಗಾರಿ ಸಂದರ್ಭದಲ್ಲಿ ವಾರ್ಡ್ ಸದಸ್ಯರ  ಗಮನಕ್ಕೆ ಬಾರದೇ ಕಾಮಗಾರಿ ನಡೆಸಿದ ಬಗ್ಗೆ ಸದಸ್ಯ ಧರ್ಮೇಂದ್ರ ಕುಲಾಲ್ ಆಕ್ರೋಶಗೊಂಡು  ನಾನು ಆ ಭಾಗದ ನೀರಿನ ಸಮಿತಿ ಅಧ್ಯಕ್ಷ ಆದರೆ ನನಗೆ ಅಧ್ಯಕ್ಷರಾಗಲಿ, ಅಭಿವೃದ್ಧಿ ಅಧಿಕಾರಿಯಾಗಲಿ ತಿಳಿಸಲಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಭಾರ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಮುಂದೆ ಯಾವುದೇ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಆಯಾ ವಾರ್ಡ್ ಸದಸ್ಯರ ಗಮನಕ್ಕೆ ತಂದು ಕಾಮಗಾರಿ ನಡೆಸಲಾಗುವುದು ಎಂದು ಸಮಾಧಾನಕರ ಉತ್ತರ ನೀಡಿ ಚರ್ಚೆಗೆ ಪೂರ್ಣಾವಿರಾಮ ನೀಡಿದರು.

ಸರಕಾರಿ ಬಸ್ ಸರಿಯಾದ ಸಮಯಕ್ಕೆ ತಲುಪಲಿ  
ಬೆಳಗ್ಗೆ 8.15ರ ಹೊತ್ತಿಗೆ ಸುಳ್ಯಪದವಿನಿಂದ ಪುತ್ತೂರಿಗೆ ಹೋಗುವ ಬಸ್  ವಿಳಂಬವಾಗುತ್ತಿದೆ ಮತ್ತೆ ಒಂದೊಂದು ದಿವಸ ಇರುವುದಿಲ್ಲ. ಇದರಿಂದ  ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಮತ್ತು ಇರುವಂತಹ ಆ ಹೊತ್ತಿನ ಬಸ್ಸಿನಲ್ಲಿ ಸುಳ್ಯಪದವಿನಿಂದ  ಮೈಂದನ್ನಡ್ಕ ತಲುಪುವ ಹೊತ್ತಿಗೆ ನೇತಾಡಿಕೊಂಡು ಹೋಗಬೇಕಾಗುತ್ತದೆ ಈ ದೃಷ್ಟಿಯಿಂದ ಹೊಸದಾಗಿ ಆರಂಭಗೊಂಡು ರೆಂಜ ಮಾರ್ಗವಾಗಿ  ಮುಡಿಪಿನಡ್ಕದವರೆಗೆ ಬಂದು ತಿರುಗಿ ಹೋಗುವ ಬಸ್ಸನ್ನು  ಮೈಂದನ್ನಡ್ಕ ಜಂಕ್ಷನ್ ತನಕ ಹಾಕಬೇಕೆಂದು  ಪುತ್ತೂರು ಕೆ.ಎಸ್ ಆರ್.ಟಿ.ಸಿ ಘಟಕದ ಸಂಬಂಧ ಪಟ್ಟ ಅಧಿಕಾರಿಗಳ ಬರೆಯಲು ಸದಸ್ಯ ಸಂತೋಷ್ ಆಳ್ವ ಗಿರಿಮನೆ ಹೇಳಿದರು ಇವರೊಂದಿಗೆ ಸದಸ್ಯೆ ದಮಯಂತಿ ಕೆಮತ್ತಡ್ಕ ಧ್ವನಿ ಗೂಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಲಿಂಗಪ್ಪ ಮೋಡಿಕೆ, ರವಿಚಂದ್ರ ಸಾರೆಪ್ಪಾಡಿ, ಕುಮಾರ್ ಅಂಬಟೆಮೂಲೆ, ವೆಂಕಟೇಶ ಕನ್ನಡ್ಕ, ಪದ್ಮನಾಭ ಕನ್ನಡ್ಕ ಧರ್ಮೇಂದ್ರ ಕುಲಾಲ್ ಪದಡ್ಕ, ಸವಿತಾ ನೆರೋತ್ತಡ್ಕ, ಹೇಮಾವತಿ ಮೋಡಿಕೆ, ಸುಜಾತ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ, ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ಕೆಮತ್ತಡ್ಕ ಉಪಸ್ಥಿತರಿದ್ದರು.

ಪ್ರಭಾರ  ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಸಾರ್ವಜನಿಕ ಮತ್ತು ಸರಕಾರಿ ಸುತ್ತೋಲೆ ಓದಿದರು.ಸಿಬ್ಬಂದಿಗಳು ಸಹಕರಿಸಿದರು.  ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯು ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here