ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

0

ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಇದರ ಪೋಷಕರ ಸಭೆಯು ಜೂ.15ರಂದು ಎಂ ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನ ಪುತ್ತೂರು ಇಲ್ಲಿ ನಡೆಯಿತು. ಸಂಚಾಲಕ ಹೇಮನಾಥ ಶೆಟ್ಟಿ ಕಾವು ಇವರ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟನೆಗೊಳಿಸಿ ಮಾತನಾಡಿ ರಕ್ಷಕ ಶಿಕ್ಷಕ ಸಂಘದಲ್ಲಿ ಪೋಷಕರ ಸಂಪೂರ್ಣ ಸಹಕಾರ ಅಗತ್ಯ. ಇವತ್ತು ಎಲ್ಲರಿಗೂ ಶಿಕ್ಷಣ ಬೇಕಿದೆ. ಶಿಕ್ಷಣದಲ್ಲಿ ಯಾವುದೇ ಕೊರತೆ ಆಗದೇ ಶಿಸ್ತು ಬದ್ದವಾಗಿಬೇಕು. ಪಠ್ಯದ ಜೊತೆಗೆ ಸಹಪಠ್ಯಗಳನ್ನು ಒದಗಿಸಿಕೊಟ್ಟು ನಿರಂತರವಾಗಿ ಕಲಿಕೆ ಪ್ರೋತ್ಸಾಹ ನೀಡುವಂತಿರಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ. ಅನನ್ಯಾ ಲಕ್ಷ್ಮೀ ಸಂದೀಪ್ ಇವರು ಮಾತನಾಡಿ ಪೋಷಕರು ತಮ್ಮ ಹದಿಹರೆಯದ ಮಕ್ಕಳ ಜೊತೆಗೆ ಯಾವ ರೀತಿ ನಡೆದುಕೊಳ್ಳಬೇಕು, ಅವರಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು, ಕಲಿಕೆಗೆ ಪೂರಕ ವಾತಾವರಣ ಮನೆಯಲ್ಲಿ ಹೇಗೆ ಒದಗಿಸಿಕೊಡಬೇಕೆಂದು ಮಾಹಿತಿ ನೀಡಿದರು.


2024-25ನೇ ಸಾಲಿನ ರಕ್ಷಕ-ಶಿಕ್ಷಕ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಹಾಗೂ ಮಕ್ಕಳ ಸುರಕ್ಷಾ ಸಮಿತಿ, ತಾಯಂದಿರ ಸಮಿತಿ ಮತ್ತು ಮುಖ್ಯ ಮಂತ್ರಿ ಪೋಷಣಾ ಅಭಿಯಾನ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಎ ಯವರು ಸ್ವಾಗತಿಸಿ, ಶಿಕ್ಷಕಿ ಚಿತ್ರಕಲಾ ಎಸ್ ವಂದಿಸಿದರು. ಶಿಕ್ಷಕಿ ಗೀತಾ ಎಸ್ ರೈ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here