ಆಲಂಕಾರಿನಲ್ಲಿ ಜೆ.ಸಿ.ಐ ವತಿಯಿಂದ ರಕ್ತದಾನ ಶಿಬಿರ

0

ಆಲಂಕಾರು: ಜೆ.ಸಿ.ಐ ಆಲಂಕಾರು, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಹಾಗು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಆಲಂಕಾರು ಜೆ.ಸಿ.ಐ ನ ಅಧ್ಯಕ್ಷರಾದ ಮಮತಾ ಶೆಟ್ಟಿ ಅಂಬರಾಜೆ ರಕ್ತದಾನ ಶಿಬಿರ ಉದ್ಘಾಟಿಸಿ ಶುಭಾಹಾರೈಸಿದರು.ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವೈದ್ಯರಾದ ಸೀತಾರಾಮ್ ಭಟ್ಟ್ ರಕ್ತದಾನದ ಮಹತ್ವ ತಿಳಿಸಿದರು. ಜೆ.ಸಿ.ಐ ಆಲಂಕಾರಿನ ಪೂರ್ವದ್ಯಕ್ಷ ಲಕ್ಷ್ಮೀ ನಾರಾಯಣ ಅಲೆಪ್ಪಾಡಿ,ಗುರುಪ್ರಸಾದ್ ಕೇವಳ,ಪೆರಾಬೆ ಗ್ರಾ.ಪಂ ಸದಸ್ಯರಾದ ಸದಾನಂದ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಹಾರೈಸಿದರು. ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿ,ಚೇತನ್ ಮೊಗ್ರಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 25 ಮಂದಿ ರಕ್ತದಾನ ಮಾಡಿದರು.ಕಾರ್ಯಕ್ರಮದಲ್ಲಿ ಜೆ.ಸಿ.ಐ ಗುರುರಾಜ್ ಕೇವಳ,ಹೇಮಲತಾ ಪ್ರದೀಪ್ ಬಾಕಿಲ,ಧನ್ಯಪ್ರಶಾಂತ ರೈ,ಕಮಲಾಕ್ಷ ಶೆಟ್ಟಿ ಅಂಬರಾಜೆ,ಸಾಂತಪ್ಪ ಆಲಂಕಾರು
ಸೇರಿದಂತೆ ಹಲವು ಮಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here