ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ನೆಲ್ಯಾಡಿ:ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮಾಚರಣೆ ನಡೆಯಿತು. ಮಸೀದಿಯ ಖತೀಬಾ ಶ್ವಕತ್ ಅಲೀ ಅಮಾಲೀ ಉಪೇದೆಸಿಸಿ ಎಲ್ಲಾ ಸಮುದಾಯದ ಜನರಿಗೆ ಈದ್ ಸಂದೇಶವನ್ನು ಸಾರಿ ತ್ಯಾಗ ಮತ್ತು ಬಲಿದಾನದ ಹಬ್ಬ ಬಕರ್ ಈದ್ ಲೋಕ ನಾಯಕ ಇಬ್ರಾಹಿಂ (ಸ‌ಅ) ರವರ ಆದರ್ಶಗಳು ನಮಗೆಲ್ಲಾ ದಾರಿದೀಪವಾಗಲಿ.ನಾವೆಲ್ಲಾ ಇಬ್ರಾಹಿಂ ನಬಿಯವರು ಜಗತ್ತಿಗೆ ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯೋಣ, ಲೋಕದಾದ್ಯಂತ ಹಿಂಸಾಚಾರ ಅಳಿದು ಶಾಂತಿ ನೆಲೆಸಲಿ,ಬದುಕು ಸಮೃದ್ದಿಯ ಪಥದಲ್ಲಿ ಚಲಿಸಲಿ ಎಂದರು.

ಈ ಸಂದರ್ಭದಲ್ಲಿ ಬದ್ರಿಯ ಜಮಾ ಮಸೀದಿಯ ಅಧ್ಯಕ್ಷ, ಕಾರ್ಯದರ್ಶಿ,ಸದ್ಯರುಗಳು, ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ಅಧ್ಯಕ್ಷ , ಕಾರ್ಯದರ್ಶಿ ,ಸದಸ್ಯರು ಮತ್ತು ನುಸುರತುಲ್ ಮಸಾಕೀನ್ ಇದರ ಅಧ್ಯಕ್ಷರು, ಕಾರ್ಯದರ್ಶಿ,ಸದ್ಯರುಗಳು ಮತ್ತು ಜಮಾತಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here