ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶಾಲಾ ಮಂತ್ರಿಮಂಡಲ ರಚನೆ

0

ನೆಲ್ಯಾಡಿ: ನೆಲ್ಯಾಡಿ ಶ್ರೀರಾಮ ವಿದ್ಯಾಲಯದಲ್ಲಿ ಶಾಲಾ ಮಂತ್ರಿ ಮಂಡಲವನ್ನು ಚುನಾವಣೆ ಮೂಲಕ ರಚಿಸಲಾಯಿತು. ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯ ಮತ್ತು ನಾಯಕತ್ವದ ಗುಣಮೈಗೂಡಿಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ನಾಮಪತ್ರ ಸಲ್ಲಿಕೆಯೊಂದಿಗೆ ಹಂತ ಹಂತವಾಗಿ ನಡೆಯಿತು.

ಚುನಾವಣೆಯಲ್ಲಿ ಮದ್ವಿತ್ ಹತ್ತನೇ ತರಗತಿ ಶಾಲಾ ನಾಯಕನಾಗಿಯೂ,9ನೇ ತರಗತಿಯ ಮೇಘನ ಉಪನಾಯಕಿಯಾಗಿಯೂ ಆಯ್ಕೆಯಾದರು. ಮತದಾನ ಅಧಿಕಾರಿಯಾಗಿ ಕೋಮಲಾಂಗಿ ಮಾತಾಜಿಯವರು ಕಾರ್ಯನಿರ್ವಹಿಸಿದರು.ಸಹಾಯಕ ಮತದಾನ ಅಧಿಕಾರಿಯಾಗಿ ಮಮತಾ ಮಾತಾಜಿ, ವಿನ್ಯಶ್ರೀ ಹಾಗೂ ಅಕ್ಷತಾ ಮಾತಾಜಿಯವರು ಭಾಗಿಯಾದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು. ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜೇತರನ್ನು ಹೂವಿನ ಹಾರ ಹಾಕಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here