ರೋಟರಿ ಪುತ್ತೂರು ಸಿಟಿಗೆ ಪ್ಲಾಟಿನಂ ಫ್ಲಸ್ ಪ್ರಶಸ್ತಿ, ರೋಟರಿ ಜಿಲ್ಲಾ ಯೋಜನೆಯಲ್ಲಿ ಪ್ರಥಮ ಸ್ಥಾನ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ 2023-24ನೇ ಸಾಲಿನಲ್ಲಿ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರೋಟರಿ ಕ್ಲಬ್ ನ ಅತ್ಯುನ್ನತ ಪ್ರಶಸ್ತಿ “ಪ್ಲಾಟಿನಂ ಫ್ಲಸ್” ಹಾಗೂ ರೋಟರಿ ಜಿಲ್ಲೆಯ ಪ್ರಸ್ತುತ ವರ್ಷದ ಜಿಲ್ಲಾ ಯೋಜನೆಯಾದ ಅಂಗನವಾಡಿ ಕೇಂದ್ರಗಳಿಗೆ ನೀಡಿದ ಸೇವೆಗೆ ರೋಟರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಸ್ತುತ ಸಾಲಿನಲ್ಲಿ ಕ್ಲಬ್ ಸುಮಾರು 204 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ರೋಟರಿ ಸಿಟಿಯು ಉತ್ತಮ ಕ್ಲಬ್ ಆಗಿ ಕಾರ್ಯನಿರ್ವಹಿಸಿದೆ ಎಂದು ಶ್ಲಾಘನೆಗೆ ಪಾತ್ರವಾಗಿದೆ. ರೋಟರಿ ಜಿಲ್ಲೆ 3181 ಇದರ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವು ಮೈಸೂರಿನಲ್ಲಿ ಜರಗಿದ್ದು ರೋಟರಿ ಕ್ಲಬ್ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ರವರ ಮಾರ್ಗದರ್ಶನದಲ್ಲಿ ಪ್ರಸ್ತುತ ವರ್ಷ ಹತ್ತು ಹಲವು ಕಾರ್ಯಕ್ರಮಗಳು ಜರಗಿ ಉತ್ತಮ ಕ್ಲಬ್ ಆಗಿ ಮೂಡಿ ಬಂದಿರುತ್ತದೆ.

ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರೋಟರಿ ರೋಟರಿ ಸಿಟಿ ಕ್ಲಬ್ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ವಿವಿಧ ವಿಭಾಗಗಳ ಸದಸ್ಯರಾದ ಜಯಕುಮಾರ್ ರೈ ಎಂ.ಆರ್, ಸುರೇಂದ್ರ ಕಿಣಿ, ಪ್ರಮೋದ್ ಮಲ್ಲಾರ, ಸ್ವಾತಿ ಮಲ್ಲಾರ, ಡಾ.ಶಶಿಧರ್ ಕಜೆ, ರಾಮಚಂದ್ರರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here