ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

0

ಈಶ್ವರಮಂಗಲ: ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಇಲ್ಲಿ ಶಾಲಾ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅತಿಥಿಗಳಾದ ರಾಮಕೃಷ್ಣ ಭಟ್ (ಸಂಗೀತ)ಉತ್ತಮ್ (ಯಕ್ಷಗಾನ) ವಿಪಿನ್ (ಚಿತ್ರಕಲೆ) ನಾರಾಯಣ ಆಚಾರ್ಯ (ಕರಾಟೆ) ಶಾಲಿನಿ ಆತ್ಮಭೂಷಣ (ಭರತನಾಟ್ಯ) ಇವರು ದೀಪ ಪ್ರಜ್ವಲನೆಯ ಮೂಲಕ ಸಹಪಠ್ಯ ಚಟುವಟಿಕೆಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಕೆ ಶಾಮಣ್ಣನವರು ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದ ಅತಿಥಿಗಳಾದ ನಾರಾಯಣ ಆಚಾರ್ಯ, ರಾಮಕೃಷ್ಣ ಭಟ್, ಶಾಲಿನಿ ಆತ್ಮಭೂಷಣ, ಉತ್ತಮ್, ವಿಪಿನ್ ರವರು ಸಹಪಠ್ಯ ಚಟುವಟಿಕೆಗಳ ಮೌಲ್ಯಗಳನ್ನು ತಿಳಿಸಿದರು. ಸಹಪಠ್ಯ ಚಟುವಟಿಕೆಗಳು ಜನರಿಂದ ಪ್ರೀತಿ ಸಿಗುವಂತೆ ಮಾಡುತ್ತದೆ. ಮಾನಸಿಕ ಜಂಜಾಟ ದೂರ ಮಾಡಿ ನೆಮ್ಮದಿ ತರುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಇಂತಹ ಕಲೆಗಳು ಮುಖ್ಯವಾಗಿದ್ದು ಕಲಿಸುವ ಗುರುಗಳು ಪ್ರಥಮ ಸ್ಥಾನದಲ್ಲಿ ಇರುತ್ತಾರೆ. ಇಂತಹ ತರಬೇತಿಗಳು ಈಗ ಶಾಲೆಗಳಲ್ಲೇ ದೊರಕುವಂತೆ ಮಾಡಿದ್ದು ಎಲ್ಲಾ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳ ಮಾನಸಿಕ, ಬೌದ್ಧಿಕ, ಶಾರೀರಿಕ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿ ಶ್ರೀಯಾ ಎಲ್ಲರನ್ನೂ ಸ್ವಾಗತಿಸಿ ವಿದ್ಯಾರ್ಥಿನಿ ಇಶಾರವರು ಧನ್ಯವಾದ ಸಮರ್ಪಿಸಿದರು. ಅನನ್ಯ ಮತ್ತು ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here