ಈಶ್ವರಮಂಗಳ:ಹನುಮಗಿರಿ ಈಶ್ವರಮಂಗಳ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಾಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲಾ ಆಡಳಿತ ಮಂಡಳಿಯ ಸದಸ್ಯ ಪದ್ಮನಾಭರವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗ ಎಂದರೆ ಮನಸ್ಸು ಶರೀರ ಉಸಿರು ಒಂದೇ ಸ್ಥಿರತೆಯಲ್ಲಿರಬೇಕು ಎಂದು ತಿಳಿಸಿದರು.
![](https://puttur.suddinews.com/wp-content/uploads/2024/06/WhatsApp-Image-2024-06-21-at-10.25.31-AM.jpeg)
ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಕೆ ಶಾಮಣ್ಣನವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಸೌಮ್ಯ ಎ ಮತ್ತು ಲತಾ ಡಿ ಕೆ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯಾದ ಸಾನಿಕ ನಿರ್ವಹಿಸಿದರು. ವಿದ್ಯಾರ್ಥಿನಿಯರಾದ ಮಿಶ್ರಿಯಾ ಸ್ವಾಗತಿಸಿದರು. ಹಾಗೂ ಸಿಂಚನ ವಂದಿಸಿದರು.