ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯೋಗೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಿತು.

ಅಂತರಾಷ್ಟ್ರೀಯ ಯೋಗ ದಿನೋತ್ಸವ ಸಮಿತಿ ,ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿದ 45 ನಿಮಿಷಗಳ ಯೋಗಾಭ್ಯಾಸ ಪಟ್ಟಿ ಒಳಗೊಂಡಿರುವ ಯೋಗ ಮಂತ್ರ, ಸೂಕ್ಷ್ಮ ವ್ಯಾಯಾಮ, ಸರಳ ಆಸನಗಳು, ಪ್ರಾಣಾಯಾಮ, ಅಷ್ಟಾಂಗ ಯೋಗ ಪರಿಚಯ ಅಭ್ಯಾಸಗಳನ್ನು 6 ರಿಂದ 10ನೇ ತರಗತಿಯ ಮಕ್ಕಳಿಗೆ ಜೂನ್ 10ರಿಂದ 21ರವರೆಗೆ ನಡೆಸಲಾಯಿತು. ಜೂನ್ 21ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಸಂತ ಸುವರ್ಣ ಇವರ ಸಭಾಧ್ಯಕ್ಷತೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಪರಿವೀಕ್ಷಕರು ಸಂವಿತ್ ಸಂಶೋಧನಾ ಕೇಂದ್ರ ಕೇಂದ್ರ ಬೆಂಗಳೂರಿನ ಯೋಗ ಸಂಯೋಜಕರಾದ ಸಂಜಯ್ ಸಿ ವಿ ಅವರು ವಿದ್ಯಾರ್ಥಿ ಜೀವನದಲ್ಲಿ ಯೋಗ ಅಭ್ಯಾಸದ ಮಹತ್ವದ ಬಗ್ಗೆ ತಿಳಿಸುತ್ತಾ ದೈಹಿಕ, ಮಾನಸಿಕ, ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಕಾ ಹಂತದಿಂದಲೇ ಬೆಳೆಸಿಕೊಳ್ಳಲು ಯೋಗಾಭ್ಯಾಸ ಸಹಕಾರಿ ಎಂದರು.
ಶಾಲಾ ಪೋಷಕಿ ರಮ್ಯ ದೀಪ ಬೆಳಗಿಸಿ ಯೋಗೋತ್ಸವದ ಮೊದಲನೆಯ ಅವಧಿಗೆ ಚಾಲನೆ ನೀಡಿದರು.
ಎರಡನೇ ಅವಧಿಯಲ್ಲಿ ಪ್ರಸಕ್ತ ವರ್ಷದ ವಿಶ್ವಸಂಸ್ಥೆಯ ಧ್ಯೇಯ ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ವಿಷಯದ ಬಗ್ಗೆ ಶಾಲಾ ಪೋಷಕರಾದ ಮಹಿಳೆಯರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪುತ್ತೂರು ಘಟಕದ ಶಿಕ್ಷಕರಾದ ಶರಾವತಿಯವರು ಮಾತನಾಡಿ, ಎಲ್ಲಾ ಕೆಲಸಗಳ ಒತ್ತಡದ ನಡುವೆ ಮಹಿಳೆ ತನ್ನನ್ನು ತಾನು ಕಂಡುಕೊಳ್ಳಲು ಯೋಗ ಸಹಕಾರಿ ಆಗಿದೆ ಎಂದು ಹೇಳಿದ ಅವರು, ಸರಳ ಆಸನ ಮತ್ತು ಪ್ರಾಣಾಯಾಮದ ಮಹತ್ವವನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು.

ಈ ಅವಧಿಯನ್ನು ಶಾಲಾ ಪೋಷಕರಾದ ಶ್ರುತಿ ವಿಸ್ಮಿತ್ ಬಲ್ನಾಡು ಉದ್ಘಾಟಿಸಿದರು. ಶಾಲಾ ಯೋಗ ಸಂಯೋಜಕ ಶಿಕ್ಷಕರಾದ ನಮಿತಾ ಕಾರ್ಯಕ್ರಮವನ್ನು ನಿರ್ವಹಿಸಿ ಸಹ ಶಿಕ್ಷಕರಾದ ಹರಿಣಾಕ್ಷಿ ಹಾಗೂ ಅನುರಾಧ ಸಂಯೋಜನೆಯಲ್ಲಿ ಸಹಕರಿಸಿದರು. ಯೋಗೋತ್ಸವದ ಅಂಗವಾಗಿ ರೇಡಿಯೋ ಪಾಂಚಜನ್ಯದಲ್ಲಿ ಶಾಲಾ ಹಂತದಲ್ಲಿ ಯೋಗ ಅಭ್ಯಾಸದ ಮಹತ್ವ ಎಂಬ ವಿಷಯದ ಬಗ್ಗೆ ಕಾರ್ಯಕ್ರಮ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here