ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ಮುಕ್ತ ಸಮಾಜ-ಜಾಗೃತಿ ಕಾರ್ಯಕ್ರಮ

0

ಶಾಲಾ ಕಾಲೇಜುಗಳಲ್ಲಿ ವ್ಯಸನಮುಕ್ತ ಸಮಾಜದ ನಿರ್ಮೂಲನೆಗೆ ಜಾಗೃತಿ ನಡೆಯಬೇಕು – ಗಣೇಶ್ ಕೈಕುರೆ

ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ಜಂಟಿ ಆಶ್ರಯದಲ್ಲಿ ಮಾದಕ ಮುಕ್ತ ಸಮಾಜ-ಜಾಗೃತಿ ಕಾರ್ಯಕ್ರಮ ಜೂ.21ರಂದು ನಡೆಯಿತು.

ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಗಣೇಶ್ ಕೈಕುರೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಸಮಾಜದಲ್ಲಿ ಮಾದಕ ವ್ಯಸನದ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಪ್ರತೀ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಆಗ ಮಾತ್ರ ವ್ಯಸನಮುಕ್ತ ಸಮಾಜದ ನಿರ್ಮೂಲನೆಗೆ ಸಾಧ್ಯವಿದೆ. ಕುಟುಂಬದಲ್ಲಿ ಸಮಸ್ಯೆಗಳು ಉಂಟಾದಾಗ ವಿದ್ಯಾರ್ಥಿಗಳು ದೃತಿಗೆಡದೆ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸಿಕೊಂಡು, ಕೆಟ್ಟವರ ಜೊತೆ ಸಹವಾಸ ಬೆಳೆಸದೆ ಅಧ್ಯಾಯನಕ್ಕೆ ಹೆಚ್ಚಿನ ಮಹತ್ವನ್ನು ಕೊಟ್ಟರೆ ಆಗ ಆ ವಿದ್ಯಾರ್ಥಿ ಉತ್ತಮ ಸಾಧಕನಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಗಿರಿಶಂಕರ ಸುಲಾಯ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ತೊಡಗಿಸಿಕೊಳ್ಳಬೇಕು. ಆಗ ಇತರ ವಿಚಾರದ ಬಗ್ಗೆ ಯೋಚಿಸುವ ಸಮಯ ಇರುವುದಿಲ್ಲ. ಆ ರೀತಿಯ ಜಾಗೃತಿ ಮಕ್ಕಳಲ್ಲಿ ಮೂಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ ವಿದ್ಯಾರ್ಥಿಗಳು ವ್ಯಸನಮುಕ್ತ ಸಮಾಜದ ನಿರ್ಮೂಲನೆಗೆ ಮನಸ್ಸು ಮತ್ತು ಹೃದಯವನ್ನು ಗಟ್ಟಿ ಮಾಡಿ ಹೋರಾಟ ನಡೆಸಿದರೇ ಖಂಡಿತ ನಿರ್ಮೂಲನೆ ಆಗಲು ಸಾಧ್ಯವಿದೆ. ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನು ಪ್ರೀತಿಸಿ, ಗೌರವಿಸಿ ವ್ಯಾಸಾಂಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಲ್ಲಿ ಉತ್ತಮ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಪುತ್ತೂರು ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ರೋ.ಕೃಷ್ಣ ಕುಮಾರ್ ರೈ ಮಾತನಾಡಿ ವಿದ್ಯಾರ್ಥಿಗಳು ವ್ಯಸನದಿಂದ ಉಂಟಾಗುವ ಸಾಧಕ ಬಾಧಕಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಮೂಡಿಸುವ ಪ್ರಯತ್ನ ನಡೆದಾಗ ಅವರಲ್ಲಿ ಜಾಗೃತಿ ಮೂಡಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯದ ಸೇವಾ ಪ್ರತಿನಿಧಿಗಳಾದ ಶ್ರೀಮತಿ ಪ್ರೇಮ ಆರೆಲ್ತಡಿ, ಶ್ರೀಮತಿ ಅಮಿತಾ ದೇವಸ್ಯ, ಶ್ರೀಮತಿ ಮೀನಾಕ್ಷಿ ದೇವಸ್ಯ, ಶಾಲಾಶಿಕ್ಷಕರಾದ ರೀನಾ ಎಂ ಡಿ, ನಯನಾ ಜಿ ಪಾಲೆಕ್ಕರ್, ಸರಸ್ವತಿ ಎಂ, ಕವಿತಾ ಸಿ ಕೆ, ಚರಿತಾ ಕೆ ಬಿ, ದಿವ್ಯ ಬಿ ಸಿ, ಪವಿತ್ರ ರೂಪೇಶ್, ರೇಖಾ ಎಂಬವರು ಉಪಸ್ಥಿತರಿದ್ದರು.

ದೀಪ್ತಿ ಮತ್ತು ಬಳಗ ಪ್ರಾರ್ಥಸಿ, ಶಿಕ್ಷಕ ಕಿಶಾನ್ ಬಿ ವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪದವೀಧರ ಸಹಶಿಕ್ಷಕರಾದ ರಘು ಬಿ ಆರ್ ವಂದಿಸಿದರು.

LEAVE A REPLY

Please enter your comment!
Please enter your name here