ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ. ಶಾಲೆಯ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಗೌತಮ್, ಉಪ ಮುಖ್ಯಮಂತ್ರಿಯಾಗಿ 6ನೇ ತರಗತಿಯ ಅಶ್ವಿತ್ ಆಯ್ಕೆಯಾಗಿದ್ದಾರೆ. ಗೃಹಮಂತ್ರಿಯಾಗಿ ಪ್ರನ್ವಿತ್, ಉಪ ಗೃಹಮಂತ್ರಿಯಾಗಿ ಪ್ರಥಮ್, ಕ್ರೀಡಾ ಮಂತ್ರಿಯಾಗಿ ವಂಶಿತ್, ಉಪ ಕ್ರೀಡಾಮಂತ್ರಿಯಾಗಿ ರಿಷಿಕಾ, ಶಿಕ್ಷಣ ಮಂತ್ರಿಯಾಗಿ ಫಾತಿಮತ್ ಸೆಹಿಲಾ, ಉಪ ಶಿಕ್ಷಣ ಮಂತ್ರಿಯಾಗಿ ಮನಸ್ವಿ, ಅರೋಗ್ಯ ಮಂತ್ರಿಯಾಗಿ ಧನ್ವಿತಾ, ಉಪ ಅರೋಗ್ಯ ಮಂತ್ರಿಯಾಗಿ ಚಾರ್ವಿ, ಸಾಂಸ್ಕೃತಿಕ ಮಂತ್ರಿಯಾಗಿ ಸಾಕ್ಷಾತ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವಂಶಿ, ತೋಟಗಾರಿಕೆ ಮಂತ್ರಿಯಾಗಿ ಛಾಯಾನ್, ಉಪ ತೋಟಗಾರಿಕೆ ಮಂತ್ರಿಯಾಗಿ ಲಿಖಿತ್, ನೀರಾವರಿ ಮಂತ್ರಿಯಾಗಿ ನಿತೇಶ್, ಉಪ ನೀರಾವರಿ ಮಂತ್ರಿಯಾಗಿ ಅದ್ವಿತ್, ಆಹಾರ ಮಂತ್ರಿಯಾಗಿ ಶಾರ್ವಿ, ಉಪ ಆಹಾರ ಮಂತ್ರಿಯಾಗಿ ಜನನಿ, ವಿರೋಧ ಪಕ್ಷದ ನಾಯಕಿಯಾಗಿ ಸುಶ, ಉಪ ನಾಯಕಿಯಾಗಿ ಅನ್ವಿ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ ಹಾಗೂ ಸಹ ಶಿಕ್ಷಕರು ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.