ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ ಜೂನ್ 24ರಂದು ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಚುನಾವಣೆಯು ನಡೆಯಿತು. ಕಂಪ್ಯೂಟರೀಕೃತ ಮತದಾನ ವ್ಯವಸ್ಥೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪಾರದರ್ಶಕ ಮತದಾನದ ಬಗೆಗೆ ಅರಿವು ಮೂಡಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ಭಾರತದ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ವಿವರಿಸಿ, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನುಡಿದರು. ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿದರು. ಅನೀಶ್ ಎಲ್ ರೈ ರವರು ವಿದ್ಯಾರ್ಥಿ ನಾಯಕನಾಗಿ, ಖದೀಜತ್ ಅಫ್ನಾ (10) ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಕಾರ್ಯದರ್ಶಿ ಸ್ಥಾನಕ್ಕೆ ಅದ್ವಿಜ್ ಸಜೇಶ್ (9), ಆಯ್ಕೆಯಾಗಿದ್ದು, ವಿರೋಧ ಪಕ್ಷದ ನಾಯಕಿಯಾಗಿ ಅವನಿ ರೈ 10 ಚುನಾಯಿತರಾಗಿದ್ದಾರೆ. ಸಹ ಶಿಕ್ಷಕರಾದ ಲತಾ, ಹರ್ಷಿತಾ ನಾಕ್, ಸವಿತಾ, ನಿಶ್ಮಿತಾ, ಅಶ್ವಿನಿ, ಯೋಗಿತಾ, ಸುಂದರ್ ನಾವೂರ್, ನವೀನ್, ರಂಜಿತ್ ಮಥಾಯಿಸ್, ತೇಜ ಕುಮಾರ್ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು. ಶಾಲೆಯ ಸೋಶಿಯಲ್ ಕ್ಲಬ್ ಜಾಗೃತಿ ಈ ಕಾರ್ಯಕ್ರಮವನ್ನು ನಿರ್ವಹಿಸಿತ್ತು.