ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ

0

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪೋಷಕರ ಸಭೆ ಹಾಗೂ ಪಾಲಕರು ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದರ ಬಗ್ಗೆ ಕಾರ್ಯಾಗಾರ ನಡೆಯಿತು.
ಎಸ್‌ಹೆಚ್ ಕಾನ್ವೆಂಟ್‌ನ ಕೌನ್ಸಿಲರ್‌ಗಳಾದ ಸಿ| ಆಲ್ಪಿ ಎಸ್.ಹೆಚ್., ಸಿ| ಬ್ಲೇಸಿ ಮರಿಯ ಅವರು ಜೂ.18ರಿಂದ 20ರ ತನಕ ವಿವಿಧ ಹಂತಗಳಲ್ಲಿ ನಡೆದ ಕಾರ್ಯಾಗಾರದಲ್ಲಿ ಹದಿಹರೆಯದ ಮಕ್ಕಳನ್ನು ಹೇಗೆ ಬೆಳೆಸಬೇಕು, ಅವರು ಎದುರಿಸುತ್ತಿರುವ ಸವಾಲುಗಳನ್ನು ಪೋಷಕರು ಹೇಗೆ ನಿಭಾಯಿಸಬೇಕು, 6-13 ವರ್ಷದ ಮಕ್ಕಳನ್ನು ಹೇಗೆ ಬೆಳೆಸಬೇಕು, ಮಕ್ಕಳು ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇನು ?, ಉತ್ತಮ ಪೋಷಕ ಹೇಗಿರಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ಪಿಯು ವಿಭಾಗದಿಂದ ಪ್ರಾಥಮಿಕ ವಿಭಾಗದ ತನಕ ನಾಲ್ಕು ಹಂತಗಳಲ್ಲಿ ಕಾರ್ಯಾಗಾರ ನಡೆಯಿತು.

ಸಂಸ್ಥೆಯ ಸಂಚಾಲಕರಾದ ರೆ.ಫಾ.ಜೈಯಿಸನ್ ಸೈಮನ್ ಒಐಸಿ, ಪ್ರಾಂಶುಪಾಲರಾದ ರೆ.ಫಾ.ವರ್ಗೀಸ್ ಕೈಪನಡ್ಕ, ಉಪಪ್ರಾಂಶುಪಾಲರಾದ ಜೋಸ್ ಎಂ.ಜೆ., ಎಲ್ಲಾ ವಿಭಾಗಗಳ ಮುಖ್ಯಸ್ಥರಾದ ಸುಶೀಲ್‌ಕುಮಾರ್, ಜಾರ್ಜ್ ಕೆ.ತೋಮಸ್, ಜೋಸ್ ಪ್ರಕಾಶ್, ಲಿಸ್ಸಿ ಕೆ.ಜೆ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಉಪಸ್ಥಿತರಿದ್ದರು. ಸಭೆಯಲ್ಲಿ ತರಗತಿವಾರು ಪೋಷಕರ ಪ್ರತಿನಿಧಿಯನ್ನು ಆಯ್ಕೆ ಮಾಡಲಾಯಿತು. ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ, ಶಿಕ್ಷಕಿ ಎಲಿಸಬೆತ್ ಎನ್.ಪಿ.ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here