ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ 5ನೇ ವರ್ಷಕ್ಕೆ ಪಾದಾರ್ಪಣೆ- ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ

0

ಸಂಘದ ನೂತನ 10ನೇ ಶಾಖೆ ಜು.13ರಂದು ವಿಟ್ಲದಲ್ಲಿ ಶುಭಾರಂಭ: ಚಿದಾನಂದ ಬೈಲಾಡಿ

ಆಲಂಕಾರು: ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಪ್ರಾಯೋಜಕತ್ವದ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಆಲಂಕಾರು ಶಾಖೆಯು ಯಶಸ್ವಿ 5ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಆಲಂಕಾರು ಶ್ರೀ ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಚೇರಿಯಲ್ಲಿ ಜೂ.27ರಂದು ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು.

ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಅವರ ಪೌರೋಹಿತ್ಯದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ನಡೆಯಿತು. ನಂತರ ನಡೆದ ಸರಳ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿಯವರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002ರಲ್ಲಿ ಆರಂಭಗೊಂಡು ಅನಂತರದ ಅವಧಿಯಲ್ಲಿ 9 ಶಾಖೆಗಳನ್ನು ಆರಂಭಿಸಿದೆ. ಎಲ್ಲಾ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿವೆ. ಸಂಘದ ನೂತನ 10ನೇ ವಿಟ್ಲ ಶಾಖೆ ಜು.13ರಂದು ವಿಟ್ಲ ಎಂಪೈರ್ ಮಹಲ್‌ನಲ್ಲಿ ಶುಭಾರಂಭಗೊಳ್ಳಲಿದೆ ಎಂದರು. ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು ರೂ.542 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸಿದೆ. ಶೇ.99.12ರಷ್ಟು ಸಾಲ ವಸೂಲಾತಿ ಮಾಡಿದ್ದು ಅಂದಾಜು 1.52 ಕೋಟಿ ರೂ.ಲಾಭಗಳಿಸಿದೆ. ಆಲಂಕಾರು ಶಾಖೆಯೊಂದರಲ್ಲೇ 55.36 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದಿದ್ದು ರೂ.27.79 ಲಕ್ಷಕ್ಕೂ ಹೆಚ್ಚು ಲಾಭಗಳಿಸಿದೆ. ಈ ಶಾಖೆಯು ಅತ್ಯುತ್ತಮ ಮಟ್ಟದ ಸಾಧನೆ ಮಾಡಿದೆ. ಈ ಸಾಧನೆಗೆ ಕಾರಣರಾದ ಸಲಹಾ ಸಮಿತಿ ಸದಸ್ಯರಿಗೆ, ಸಿಬ್ಬಂದಿ ವರ್ಗಕ್ಕೆ, ಗ್ರಾಹಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಯು.ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಆಲಂಕಾರು ಶಾಖೆಯ ಸಲಹಾ ಸಮಿತಿ ಅಧ್ಯಕ್ಷೆ, ಸಂಘದ ನಿರ್ದೇಶಕಿಯೂ ಆದ ತೇಜಸ್ವಿನಿ ಕಟ್ಟಪುಣಿ, ನಿರ್ದೇಶಕರಾದ ಜಿನ್ನಪ್ಪ ಗೌಡ ಮಳುವೇಲು, ರಾಮಕೃಷ್ಣ ಗೌಡ ಕರ್ಮಲ, ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾನ, ಸುಪ್ರಿತಾರವಿಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಗೌಡ ಕಣಜಾಲು, ಆಂತರಿಕ ಲೆಕ್ಕಪರಿಶೋಧನ ಧರ್ಮರಾಜ್ ಕೆ., ಮಾಜಿ ನಿರ್ದೇಶಕರಾದ ಲಿಂಗಪ್ಪ ಗೌಡ ಕಡೆಂಬ್ಯಾಲ್, ಆಲಂಕಾರು ಶಾಖೆಯ ಸಲಹಾ ಸಮಿತಿ ಗೌರವ ಸಲಹೆಗಾರರಾದ ನಾಗಪ್ಪ ಗೌಡ ಮರುವಂತಿಲ, ಈಶ್ವರ ಗೌಡ ಪಜ್ಜಡ್ಕ, ಸದಸ್ಯರಾದ ಚಕ್ರಪಾಣಿ ಬಾಕಿಲ, ರಾಮಣ್ಣ ಗೌಡ ಬಿ ದೋಳ, ಅಶೋಕ ಗೌಡ ಪಜ್ಜಡ್ಕ, ಶೇಖರ ಗೌಡ ಕಟ್ಟಪುಣಿ, ಶಿವಣ್ಣ ಗೌಡ ಕಕ್ವೆ, ಕೇಶವ ಗೌಡ ಆಲಡ್ಕ, ದಯಾನಂದ ಗೌಡ ಆಲಡ್ಕ, ವೀರೇಂದ್ರ ಗೌಡ ಪಾಲೆತಡ್ಡ, ಸದಾನಂದ ಗೌಡ ಕುಂಟ್ಯಾನ, ರಾಮಣ್ಣ ಗೌಡ ಸುರುಳಿ, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ಸುಂದರ ಗೌಡ ನೆಕ್ಕಿಲಾಡಿ, ಪದ್ಮಪ್ಪ ಗೌಡ ಕೆದುಂಬಾಡಿ ರಾಮಕುಂಜ, ಮಂಜಪ್ಪ ಗೌಡ ಕಜೆ, ಭವಾನಿ ಗೌಡ ಪರಂಗಾಜೆ, ಪ್ರಮುಖರಾದ ಸುರೇಶ್ ಕಲ್ಲಾರೆ, ಕುಶಾಲಪ್ಪ ಗೌಡ ಸುರುಳಿ, ರವಿಚಂದ್ರ ಹೊಸವೊಕ್ಲು, ಯುವರಾಜ್ ಕುಂಟ್ಯಾನ, ಆಲಂಕಾರು ಜೆಸಿಐ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಆಲಂಕಾರು ಶಾಖೆ ಮೇನೇಜರ್ ದೀಪಾ ಮತ್ತು ಸಿಬ್ಬಂದಿಗಳು, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ಮತ್ತು ಸಿಬ್ಬಂದಿಗಳು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಮತ್ತು ಸಿಬ್ಬಂದಿಗಳು, ಆಲಂಕಾರು ಬಂಟಸಿರಿ ಸಹಕಾರ ಸಂಘ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಹಲವು ಗ್ರಾಹಕರು ಆಗಮಿಸಿ ಶುಭಹಾರೈಸಿದರು.

ಶಾಖಾ ಸಲಹಾ ಸಮಿತಿ ಅಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಪ್ರೀತಮ್ ವಂದಿಸಿದರು. ಶಾಖಾ ಸಿಬ್ಬಂದಿಗಳಾದ ವಿಜಯಕುಮಾರ್, ರಾಜೇಶ್, ಪಿಗ್ಮಿ ಸಂಗ್ರಾಹಕರಾದ ನವೀನ್, ಯೋಗೀಶ್, ಕೀರ್ತಿಕಾ ಸಹಕರಿಸಿದರು.

LEAVE A REPLY

Please enter your comment!
Please enter your name here