ಬೆಂದ್ರ್ ತೀರ್ಥ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರಮಟ್ಟು-ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರವಾದ ವಿಪತ್ತು ನಿರ್ವಹಣಾ ಸಮಿತಿ

0

ನಿಡ್ಪಳ್ಳಿ; ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಇರ್ದೆ ಸೀರೆ ಹೊಳೆಯಲ್ಲಿ ನೀರಿನೊಂದಿಗೆ ಬಂದು ಇರ್ದೆ ಬೆಂದ್ರ್ ತೀರ್ಥ ಬಳಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಘನ ಗಾತ್ರದ ಮರ ಮತ್ತು ಕಸ ಕಡ್ಡಿಗಳನ್ನು ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಜೂ.27 ರಂದು ಶ್ರಮದಾನದ ಮೂಲಕ ತೆರವು ಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ಮರಗಳು ಬಂದು ನಿಂತ ಪರಿಣಾಮ ಅದರ ಮೇಲೆ ಪಾದಾಚಾರಿಗಳಿಗೆ ನಡೆದು ಕೊಂಡು ಹೋಗಲೂ ಆಗುತ್ತಿರಲಿಲ್ಲ.ಇವರ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮಿತಿಯನ್ನು ಅಭಿನಂದಿಸಿದೆ.

ಅಲ್ಲದೆ ಬೆಳಿಗ್ಗೆ ಮುಳುಗಡೆಯಾದ ಚೆಲ್ಯಡ್ಕ ಸೇತುವೆಯ ಎರಡೂ ಕಡೆ ನಿರ್ವಹಣಾ ಸಮಿತಿ ಸದಸ್ಯರು ನಿಂತು ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚರಿಕೆ ನೀಡುವ ಕಾರ್ಯವನ್ನು ಸ್ವಯಂಸೇವಕರಾಗಿ ಸೇವೆ ಮಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬೆಟ್ಟಂಪಾಡಿ ವಲಯ ಮೇಲ್ವಿಚಾರಕರಾದ ಸೋಹನ್, ವಿಪತ್ತು ನಿರ್ವಾಹಣ ಘಟಕದ ಸಂಯೋಜಕಿ ಪದ್ಮಾವತಿ ಡಿ, ಘಟಕ ಪ್ರತಿನಿಧಿ ಸುಬ್ರಮಣ್ಯ,ಯೋಜನೆಯ ಬೆಟ್ಟoಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಸ್ವಯಂ ಸೇವಕರಾದ  ಅಶೋಕ, ದಿನೇಶ,ಮನೋಜ್, ಸುಂದರ, ಕೃಷ್ಣ, ಸತೀಶ ಹಾಗೂ  ಊರವರು ಈ ಕಾರ್ಯದಲ್ಲಿ ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here