ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಧರ್ನಪ್ಪ ಗೌಡರ ಸೇವಾ ನಿವೃತ್ತಿ-ಸನ್ಮಾನ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಥಿತ ಅಂಗ ಸಂಸ್ಥೆಯಾದ ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1992 ರಿಂದ 2024 ರವರೆಗೆ ಪರಿಚಾರಕರಾಗಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಧರ್ನಪ್ಪ ಗೌಡರನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿವರ್ಗ ಅವರಿಗೆ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಹಾಗೂ ಸಹದ್ಯೋಗಿ ಬಂಧುಮಿತ್ರರು ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಈಶ್ವರ ಚಂದ್ರ ಉಪಸ್ಥಿತರಿದ್ದರು. ಪ್ರಾಂಶುಪಾಲ ಮುರಳೀಧರ್.ಎಸ್. ಸ್ವಾಗತಿಸಿ.ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಪುಷ್ಪ ಬ.ಎನ್. ವಂದಿಸಿದರು. ಉಷಾಕಿರಣ್ ನಿರೂಪಿಸಿದರು.

LEAVE A REPLY

Please enter your comment!
Please enter your name here