ಮಂಗಳೂರು ಡಿ ಸಿ ಕಚೇರಿ ಮುತ್ತಿಗೆಯಲ್ಲಿ ಪುತ್ತೂರು ಬಿಜೆಪಿ ಪ್ರಮುಖರ ಬಂಧನ

0

ಪುತ್ತೂರು: ವಾಲ್ಮೀಕಿ ನಿಗಮದಲ್ಲಿ ಸರಕಾರಿ ಹಣದ ಗೋಲ್ ಮಾಲ್ ಮತ್ತು ಪರಿಶಿಷ್ಟ ಪಂಗಡದ ಅನುದಾನದ 187 ಕೋಟಿ ರೂಗಳನ್ನು ತೆಲಂಗಾಣದ ಚುನಾವಣಾ ಖರ್ಚಿಗೆ ವರ್ಗಾಯಿಸಿದ ಶಂಕೆ ಹಾಗೂ ಎಸ್.ಸಿ ಎಸ್.ಟಿ ಸಮಾಜಕ್ಕೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಮಾಡಿದ ದ್ರೋಹ ಎಂದು ಆರೋಪಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಡಿ.ಸಿ ಕಛೇರಿಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪುತ್ತೂರಿನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ ವೇಳೆ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.


ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ,ಎಸ್.ಟಿ ಮೋರ್ಚ ಅಧ್ಯಕ್ಷ ಹರೀಶ್ ಬಿಜತ್ರೆ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್, ಯುವರಾಜ್ ,ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ,ಮುಕುಂದ ಬಜತ್ತೂರು,ಸುರೇಶ್ ಅತ್ರಮಜಲು,ದಯಾನಂದ ಶೆಟ್ಟಿ,ಪುನೀತ್ ಮಾಡತ್ತಾರು,ವಿರೂಪಾಕ್ಷ ಭಟ್ ಸಹಿತ ಹಲವಾರು ಪಕ್ಷಧ ಪ್ರಮುಖರನ್ನು ಬಂಧಿಸಲಾಯಿತು. ಮಂಗಳೂರಿನ ಕ್ಲಾಕ್ ಟವರಿನಿಂದ ಆರಂಭವಾದ ಪ್ರತಿಭಟನೆಯಲ್ಲಿ ಪುತ್ತೂರು ಎಸ್ .ಟಿ ಮೋರ್ಚ ಅಧ್ಯಕ್ಷರಾದ ಶಿವಪ್ಪ ನಾಯ್ಕ, ನಾರಾಯಣ ಚಾಕೊಟೆ,ಹರೀಶ್ ನಾಯ್ಕ್,ಪಕ್ಷದ ಪ್ರಮುಖರಾದ ಯತೀಂದ್ರ ಕೊಚ್ಚಿ,,ನಗರ ಮಹಿಳಾ ಮೋರ್ಚ ಅಧ್ಯಕ್ಷರಾದ ಜಯಶ್ರೀ ನಾಯಕ್,ಸ್ವರ್ಣಲತಾ ಹೆಗ್ಡೆ,ಸುಮತಿ,ಆಶಾಭಗವಾನ್,ಸರೋಜಿನಿ,ನಳಿನಾಕ್ಷೀ,ಸುನೀತಾ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here