ತಾ|ಬಿಲ್ಲವ ಸಂಘ, ಬಿಲ್ಲವ ನಗರ ಸಮಿತಿಯ ವಾರ್ಷಿಕ ಮಹಾಸಭೆ – ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಅಭಿನಂದನೆ

0

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಹಾಗೂ ಬಿಲ್ಲವ ನಗರ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮವು ಜೂ.29ರಂದು ಅಪರಾಹ್ನ ಬಪ್ಪಳಿಗೆ-ಪುತ್ತೂರು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರಗಿತು.

ವಿದ್ಯಾರ್ಥಿಗಳು ಸಮಾಜಕ್ಕೆ, ಸಮುದಾಯಕ್ಕೆ ಹೆಸರು ತರಬೇಕು-ಚಿದಾನಂದ ಸುವರ್ಣ:
ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನಕುಮೇರುರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘದಿಂದ ಪುಸ್ತಕ ಪಡೆದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ಹೆಸರು ಗಳಿಸುವಂತಾಗಬೇಕು ಮಾತ್ರವಲ್ಲ ಬಿಲ್ಲವ ಸಮುದಾಯಕ್ಕೂ ಗೌರವ ತಂದುಕೊಡುವಂತಾಗಲಿ. ಬಿಲ್ಲವ ಸಮಾಜ ಬಾಂಧವರು ಎಲ್ಲರೂ ಕೈಜೋಡಿಸಿ ಸಮುದಾಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಒಟ್ಟಾಗಿ ಸೇರಿದಾಗ ಸಂಘದ ಬಲವರ್ಧನೆ ಸಾಧ್ಯ-ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್:
ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು ಮಾತನಾಡಿ, ಸಂಘವು ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿರುವುದು ಹಾಗೂ ಫಲಾನುಭವಿಗಳನ್ನು ಗುರುತಿಸಿ ನೆರವಿನ ಸಹಾಯಹಸ್ತ ಚಾಚಿರುವುದು ಶ್ಲಾಘನೀಯ. ಬಿಲ್ಲವ ಸಮಾಜ ಬಾಂಧವರು ಸಂಘದ ಪ್ರತಿಯೊಂದು ಕಾರ್ಯಕ್ರಮಕ್ಕೆ ಹಾಜರಾಗುವ ಮನಸ್ಸು ಮಾಡಬೇಕು. ಬಿಲ್ಲವ ಸಮಾಜದಲ್ಲಿ ಸೇವೆ ನೀಡಲು ಬಿಲ್ಲವ ಬಾಂಧವರಿಗೆ ಹಿಂಜರಿಕೆ ಯಾಕೆ?. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಸಂಘದ ಬಲವರ್ಧನೆ ಸಾಧ್ಯ ಎಂದರು.

ಮಕ್ಕಳ ಹುಟ್ಟುಹಬ್ಬದಂದು ಗುರುಮಂದಿರದಲ್ಲಿ ಪೂಜೆ ಸಲ್ಲಿಸಿ-ಉದಯಕುಮಾರ್ ಕೋಲಾಡಿ:
ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ ಮಾತನಾಡಿ, ಸಮಾಜ ಬಾಂಧವರು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಗೊತ್ತಾಗುತ್ತದೆ ಸಂಘಟನೆ ಅಂದರೆ ಏನೆಂಬುದು ಎಂದು. ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ಚಿಂತನೆಯನ್ನು ನಾವು ಅಳವಡಿಸಿಕೊಂಡಾಗ ಸಂಘಟನೆ ಬಲಯುತವಾಗಲು ಸಾಧ್ಯ. ಸಮಾಜ ಬಾಂಧವರು ತಮ್ಮ ಮಕ್ಕಳ ಹುಟ್ಟು ಹಬ್ಬದ ಸಂದರ್ಭ ತಮ್ಮ ಮಕ್ಕಳನ್ನು ಗುರುಮಂದಿರಕ್ಕೆ ಕರೆ ತಂದು ಪೂಜೆ ಸಲ್ಲಿಸಿ ಗುರುಗಳ ಬಗ್ಗೆ ತಿಳಿಯುವರಾಗಬೇಕು ಎಂದರು.

ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಕಿಂಚಿತ್ತ್ ಸಹಾಯ ಮಾಡುವವರಾಗಿ-ವಿಮಲ ಸುರೇಶ್:
ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷೆ ವಿಮಲ ಸುರೇಶ್ ಮಾತನಾಡಿ, ಗ್ರಾಮ ಸಮಿತಿಗಿಂತ ಹೆಚ್ಚಿನ ಜನಸಂಖ್ಯೆ ಇರುವುದು ನಗರ ಸಮಿತಿಯಲ್ಲಿ. ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಮುದಾಯ ಬಾಂಧವರು ಸ್ಪಂದಿಸಿದಾಗ ಸಂಘವು ಬೆಳೆಯುತ್ತದೆ. ಸಂಘದಿಂದ ನೆರವು ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರತಿ ಹಂತದಲ್ಲೂ ಸಂಘವನ್ನು ಮರೆಯಕೂಡದು ಮಾತ್ರವಲ್ಲ ಭವಿಷ್ಯದಲ್ಲಿ ಇದೇ ವಿದ್ಯಾರ್ಥಿಗಳು ಸಮಾಜಕ್ಕೆ ಕಿಂಚಿತ್ತ್ ಸಹಾಯ ಮಾಡುವವರಾಗಿ ಎಂದರು.

ಸಮಾಜ ಸೇವೆಗೆ ಯುವವಾಹಿನಿ ಸಂಘಟನೆ ಅವಕಾಶ ಕಲ್ಪಿಸುತ್ತಿದೆ-ಜಯರಾಮ ಬಿ.ಎನ್:
ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್ ಮಾತನಾಡಿ, ವಿದ್ಯೆ, ಉದ್ಯೋಗ, ಸಂಪರ್ಕದಡಿಯಲ್ಲಿ ಯುವವಾಹಿನಿ ಕಾರ್ಯನಿರ್ವಹಿಸುತ್ತಿದೆ. ಯುವವಾಹಿನಿ ಸಂಘವು ಸಮುದಾಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಸಮಾಜ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಮಾಜ ಸೇವೆಗೆ ಯುವವಾಹಿನಿ ಸಂಘಟನೆಯು ಅವಕಾಶವನ್ನು ಕಲ್ಪಿಸಿಕೊಡುತ್ತಿದ್ದು ಇದರ ಸದುಪಯೋಗ ಎಲ್ಲರದಾಗಲಿ ಎಂದರು.

ಬಿಲ್ಲವ ನಗರ ಸಮಿತಿ ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೂಡಮರ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀನಪ್ಪ ಪೂಜಾರಿ ಬನ್ನೂರು, ವೇದಾವತಿ ಟೀಚರ್, ಸಂಗೀತ ಮನೇಹರ್, ಜಯಲಕ್ಷ್ಮೀ ಸುರೇಶ್ ಕೇಪುಳು ಹಾಗೂ ಸ್ನೇಹ ಟೆಕ್ಸ್‌ಟೈಲ್ಸ್ ಮಾಲಕ ಸತೀಶ್ ಪೂಜಾರಿ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಿಲ್ಲವ ನಗರ ಸಮಿತಿ ಅರ್ಧಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ಉಪಾಧ್ಯಕ್ಷ ಮೋಹನ್ ತೆಂಕಿಲ ವರದಿ ವಾಚಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ದೇವಿಕಾ ಬನ್ನೂರು ಫಲಾನುಭವಿಗಳ ಹೆಸರನ್ನು ವಾಚಿಸಿ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಅವಿನಾಶ್ ಹಾರಾಡಿ ಲೆಕ್ಕಪತ್ರ ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಾ ಸನ್ಮಾನ/ಪುಸ್ತಕ ವಿತರಣೆ..
2023-24ನೇ ಸಾಲಿನ ದ್ವಿತೀಯ ಪಿಯುಸಿ, ಎಸೆಸ್ಸೆಲ್ಸಿ ಹಾಗೂ ಡಿಪ್ಲೋಮಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಬಿಲ್ಲವ ನಗರ ಸಮಿತಿಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿ.ಸ್ವಾತಿ(ಪಿಯುಸಿ), ಶಿವಾನಿ ಪಿ(ಎಸೆಸ್ಸೆಲ್ಸಿ), ಅಂಚಿತ್ ನಡುಬೈಲು(ಪಿಯುಸಿ), ದೀಪಿಕಾ ಕೆ(ಡಿಪ್ಲೋಮಾ), ಸಾಕ್ಷಿ ಕೃಷ್ಣ(ಎಸೆಸ್ಸೆಲ್ಸಿ)ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸುಮಾರು 40 ಫಲಾನುಭವಿ ವಿದ್ಯಾರ್ಥಿಗಳಿಗೆ ಸುಮಾರು ರೂ.25 ಸಾವಿರ ವೆಚ್ಚದಲ್ಲಿ ಉಚಿತವಾಗಿ ಪುಸ್ತಕ ವಿತರಣೆ ಮಾಡಲಾಯಿತು.

ಸ್ವಾರ್ಥ ಬಿಡಿ ಒಗ್ಗಟ್ಟಿರಲಿ…
ವರ್ಷಂಪ್ರತಿ ನಗರ ಸಮಿತಿಯು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಸಂಘದ ಬೆಳವಣಿಗೆಯಲ್ಲಿ ಎಲ್ಲಿ ಸ್ವಾರ್ಥ ಮನೆ ಮಾಡುತ್ತದೆಯೋ ಅಲ್ಲಿ ಸಂಘ ಬೆಳವಣಿಗೆ ಕಾಣುವುದಿಲ್ಲ. ಸ್ವಾರ್ಥ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಂಘವು ಅಭಿವೃದ್ಧಿ ಹೊಂದುತ್ತದೆ ಮಾತ್ರವಲ್ಲ ಒಳ್ಳೆಯ ಹೆಸರು ಗಳಿಸುತ್ತದೆ. ನಾನು ಬಿಲ್ಲವ ಎಂಬ ಗೌರವ ನಮ್ಮಲ್ಲಿರಬೇಕು. ನಾವು ನಮಗೋಸ್ಕರ ಸಂಘದಲ್ಲಿ ದುಡಿಯುವುದಲ್ಲ, ಬದಲಾಗಿ ಸಂಘದ ಏಳಿಗೆಗಾಗಿ. ಆದ್ದರಿಂದ ಸಂಘದ ಬೆಳವಣಿಗೆಯಲ್ಲಿ ಎಲ್ಲರ ಸಹಕಾರವಿರಲಿ.
-ಕೇಶವ ಪೂಜಾರಿ ಬೆದ್ರಾಳ, ಅಧ್ಯಕ್ಷರು, ಬಿಲ್ಲವ ನಗರ ಸಮಿತಿ, ಪುತ್ತೂರು

-ವಿದ್ಯಾರ್ಥಿಗಳು ಸಮಾಜಕ್ಕೆ, ಸಮುದಾಯಕ್ಕೆ ಹೆಸರು ತರಬೇಕು-ಚಿದಾನಂದ ಸುವರ್ಣ
-ಒಟ್ಟಾಗಿ ಸೇರಿದಾಗ ಸಂಘದ ಬಲವರ್ಧನೆ ಸಾಧ್ಯ-ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್
-ಮಕ್ಕಳ ಹುಟ್ಟುಹಬ್ಬದಂದು ಗುರುಮಂದಿರದಲ್ಲಿ ಪೂಜೆ ಸಲ್ಲಿಸಿ-ಉದಯಕುಮಾರ್ ಕೋಲಾಡಿ
-ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಕಿಂಚಿತ್ತ್ ಸಹಾಯ ಮಾಡುವವರಾಗಿ-ವಿಮಲ ಸುರೇಶ್
-ಸಮಾಜ ಸೇವೆಗೆ ಯುವವಾಹಿನಿ ಸಂಘಟನೆ ಅವಕಾಶ ಕಲ್ಪಿಸುತ್ತಿದೆ-ಜಯರಾಮ ಬಿ.ಎನ್

LEAVE A REPLY

Please enter your comment!
Please enter your name here