ಪುತ್ತೂರು : ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯು ದೇಶದ ಉದ್ದಗಲಕ್ಕೂ ವ್ಯಾಪಿಸುತ್ತ ಬಡ ಮತ್ತು ದುರ್ಬಲರ, ಅಸಹಾಯಕರ ಉಚಿತ ಸೇವೆ ಮಾಡುತ್ತಾ ಬಂದಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಕಚೇರಿಯು ಇತ್ತೀಚೆಗೆ ಅತ್ತಾವರದ ವೈದ್ಯನಾಥ ನಗರ ಮೀನಕೊಳೆಂಜಿ ಕಟ್ಟಡದ ಎರಡನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಬಳಿಕ ಮಾತನಾಡಿ ನಮ್ಮ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಇಳಿದು ಕೆಲಸ ಮಾಡಬೇಕು, ಕೆಲವೊಂದು ಕಾನೂನಿನ ಪರಿಧಿಯೊಳಗೆ ಧೈರ್ಯದಿಂದ, ಸಾಮಾಜಿಕ ಕಳಕಳಿಯಿಂದ ಸೇವೆ ಮಾಡುವಂತೆ ಕರೆಕೊಟ್ಟರು. ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ,Hrfi ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ ಶೇಷಪ್ಪ ಬಂಬಿಲ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ ನಮ್ಮ ಸಂಸ್ಥೆಯು ಇತರೆ ಸಂಘ ಸಂಸ್ಥೆಗಳ ಜೊತೆ ತುಲನೆ ಮಾಡದೆ ನಮ್ಮದೇ ಆದ ನ್ಯಾಯ, ಧೇಯ, ಉದ್ದೇಶದೊಂದಿಗೆ ಉದಾಸೀನತೆ, ನಿರ್ಲಕ್ಷ, ಭಯ ಬಿಟ್ಟು ಕೆಲಸ ಮಾಡಿದರೆ ಜಿಲ್ಲೆಯ ಎಲ್ಲಾ ಉನ್ನತಾಧಿಕಾರಿಗಳು, ಇಲಾಖೆಗಳು ನಮಗೆ ಗೌರವ ಕೊಟ್ಟು ಬೆಂಬಲಿಸುತ್ತಾರೆ, ಹಾಗಿರುವಾಗ ಉಲ್ಲಾಸದೊಂದಿಗೆ ಕಾರ್ಯ ಪ್ರವೃತ್ತರಾಗೋಣ ಎಂದರು.
ಮುಖ್ಯ ಅತಿಥಿ ತುಳುವೆರೆ ತುಡಿಪು ಪತ್ರಿಕೆಯ ಸಂಪಾದಕ ಮತ್ತು ಕೊಡಗು Hrfi ಜಿಲ್ಲಾಧ್ಯಕ್ಷ ಕೆ ವಾಸು ರೈ ಯವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಸೇರಿರುವ ನಾವೇ ಧನ್ಯರು, , ಜವಾಬ್ದಾರಿಯಿಂದ ಮತ್ತು ಧೈರ್ಯದಿಂದ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಅಂಜದೆ ಕೆಲಸ ಮಾಡಿದರೆ, ಸಮಾಜಕ್ಕೂ ಸಂಸ್ಥೆಗೂ ಒಳ್ಳೆಯದು ಎಂದರು. ಕೇಂದ್ರ ಸಮಿತಿಯ ವತಿಯಿಂದ ಜಿಲ್ಲಾ ಅಧ್ಯಕ್ಷ ಬಿ ಶೇಷಪ್ಪ ಹಾಗೂ ಕೆ ವಾಸು ರೈಯವರಿಗೆ ಸನ್ಮಾನಿಸಿ ಗೌರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಸದಾಶಿವ ಹಾಗೂ ಉಪಾಧ್ಯಕ್ಷ ಅಶ್ವಿನ್ ಕುಮಾರ್ ಅತ್ತಾವರ ಶಾಲು ಹೊದಿಸಿ ಗೌರವಿಸಲಾಯಿತು . ಜೊತೆ ಕಾರ್ಯದರ್ಶಿ ಬಾಬು ರಾಜ್ ಇವರ ಗಣಪತಿ ಪ್ರಾರ್ಥಿಸಿ, ಜಿಲ್ಲಾ ಕಾರ್ಯದರ್ಶಿ ಸದಾಶಿವ ಪಿ ಕಾರ್ಯಕ್ರಮ ನಿರೂಪಿಸಿದರು, ನಿರ್ದೇಶಕ ಕಿರಣ್ ಚೌಟಾಜೆ ವಂದಿಸಿದರು. ಸಂಸ್ಥೆಯ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.