ನೆಲ್ಯಾಡಿ: ಫುಟ್‌ಪಾತ್‌ನಲ್ಲೇ ಟ್ರಾನ್ಸ್‌ಫಾರ್ಮರ್ ಕಂಬದ ಸುತ್ತ ತಾತ್ಕಾಲಿಕ ತಡೆಬೇಲಿ

0

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿ ಫುಟ್‌ಪಾತ್‌ನಲ್ಲೇ ಹಾಕಲಾಗಿದ್ದ ಟ್ರಾನ್ಸ್‌ಫಾರ್ಮರ್ ಕಂಬದ ಸುತ್ತ ತಾತ್ಕಾಲಿಕ ತಡೆಬೇಲಿ ಹಾಕಿ ಜನರು ಓಡಾಟ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ದಿನನಿತ್ಯ ನೂರಾರು ಜನರು ಓಡಾಟ ನಡೆಸುತ್ತಿರುವ ಫುಟ್‌ಪಾತ್‌ನಲ್ಲೇ ಕಂಬ ಹಾಕಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಸಾರ್ವಜನಿಕರಿಂದಲೂ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಕಂಬದ ಸುತ್ತಲೂ ಈಗ ತಾತ್ಕಾಲಿಕ ತಡೆಬೇಲಿ ಹಾಕಿ ಜನರು ಓಡಾಟದಂತೆ ಕ್ರಮ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here