ಪುತ್ತೂರು:ನಾವು ಪತ್ರಿಕೆ ಮಾದ್ಯಮ ಸಾಮಾಜಿಕ ಜಾಲತಾಣದಲ್ಲಿ ಕಸದಿಂದ ರಸ ಗೊಬ್ಬರ ಅಲಂಕಾರಿಕ ವಸ್ತುಗಳನ್ನು ಮಾಡಿದ್ದನ್ನು ಕೇಳಿದ್ದೆವೆ ನೊಡಿದ್ದೆವೆ ಅದರೆ ಇದಕ್ಕೆಲ್ಲ ವಿನೂತನ ವೆಂಬಂತೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕಲಿಯುಗ ಕರ್ತವ್ಯ ಜಾಗೃತಿ ಸೇವಾ ಸಂಸ್ಥೆ ಮತ್ತು ಚಿಗರು ಗೆಳೆಯರ ಬಳಗ ಸಂಸ್ಥೆಯು ತನ್ನ ಜಂಟಿ ಆಶ್ರಯದಲ್ಲಿ ತಾವು ಮಾಡುತ್ತಿದ್ದ ವ್ಯಾಪಾರ, ವ್ಯವಹಾರ, ಕೃಷಿ, ಕೂಲಿ ಕೆಲಸಗಳಲ್ಲಿ, ಸಭೆ ಸಮಾರಂಭ, ಜಾತ್ರೆಗಳಲ್ಲಿ ಸಿಕ್ಕ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿ ಬಂದ ಹಣದಿಂದ ಬನ್ನೂರು ಗ್ರಾ.ಪಂ ಗೆ ಸೇರಿದ ಕಜೆ ಬೇರಿಕೆ ಅಂಗನವಾಡಿ ಕೇಂದ್ರದ ಮಕ್ಕಳ ಕಲಿಕೆಗೆ ಪೂರಕವಾದ ಸ್ಮಾರ್ಟ್ ಕ್ಲಾಸ್ ಅಳವಡಿಸಲು ಸಹಾಯದನ ನೀಡಿ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿದ್ದ ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಶೀನ ಶೆಟ್ಟಿ ಮತ್ತು ಸಹನಿರ್ದೇಶಕ ಕೃಷ್ಣ ಮೂಲ್ಯ ಮಾತನಾಡಿ ಈ ಸಂಸ್ಥೆಗಳ ಈ ತೆರನಾದ ಸೇವೆ ಸರ್ವರಿಗೂ ಮಾದರಿ ಯಾಗಬೇಕು. ಇದೊಂದು ಜನ ಜಾಗೃತಿಯ ಜೊತೆಗೆ ಸ್ವಚ್ವ ಭಾರತ ಸಂಕಲ್ಪಕ್ಕೆ ಹಿಡಿದ ಕೈಗನ್ನಡಿ ಎಂದು ಸಂಸ್ಥೆ ಗೆ ಶುಭಾಹಾರೈಸಿದರು.