ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಪುತ್ತೂರಿನ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ, ಮೇಜರ್ ಡೋನರ್ ಡಾ.ಶ್ರೀಪತಿ ರಾವ್ ಯು, ಕಾರ್ಯದರ್ಶಿಯಾಗಿ ಬಿಎಸ್‌ಎನ್‌ಎಲ್ ನಿವೃತ್ತ ಸಬ್ ಡಿವಿಷನಲ್ ಇಂಜಿನಿಯರ್ ದಾಮೋದರ್ ಕೆ, ಕೋಶಾಧಿಕಾರಿಯಾಗಿ ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್‌ರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಜೈರಾಜ್ ಭಂಡಾರಿ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷರಾಗಿ ಮೇಜರ್ ಡೋನರ್ ಡಾ.ಶ್ರೀಪ್ರಕಾಶ್ ಬಿ, ಜೊತೆ ಕಾರ್ಯದರ್ಶಿಯಾಗಿ ಸುಬ್ಬಪ್ಪ ಕೈಕಂಬ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ವಾಮನ್ ಪೈ ಪಿ, ಎಕ್ಸಿಕ್ಯೂಟಿವ್ ಕಾರ್ಯದರ್ಶಿಯಾಗಿ ದೀಪಕ್ ಕೆ.ಪಿ, ಬುಲೆಟಿನ್ ಎಡಿಟರ್ ಆಗಿ ಕೆ.ಬಾಲಕೃಷ್ಣ ಆಚಾರ್ಯ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ವಿ.ಜೆ ಫೆರ್ನಾಂಡೀಸ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪರಮೇಶ್ವರ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಚಿದಾನಂದ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ರಾಜ್‌ಗೋಪಾಲ್ ಬಲ್ಲಾಳ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಡಾ.ಜಯದೀಪ್ ಎನ್.ಎ, ಯೂತ್ ಸರ್ವಿಸ್ ನಿರ್ದೇಶಕಿಯಾಗಿ ಪ್ರೀತಾ ಹೆಗ್ಡೆ, ಚೇರ್‌ಮ್ಯಾನ್‌ಗಳಾಗಿ ಝೇವಿಯರ್ ಡಿ’ಸೋಜ(ಟಿ.ಆರ್.ಎಫ್), ಹೆರಾಲ್ಡ್ ಮಾಡ್ತಾ(ಸಿಎಲ್‌ಸಿಸಿ), ಡಾ.ಜೆ.ಸಿ ಅಡಿಗ(ಪಲ್ಸ್ ಪೋಲಿಯೋ), ಕಿಶನ್ ಬಿ.ವಿ(ಟೀಚ್), ಶ್ರೀಕಾಂತ್ ಕೊಳತ್ತಾಯ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಸುಜಿತ್ ಡಿ.ರೈ(ವಿನ್ಸ್), ಡಾ.ಎಂ.ಎಸ್ ಭಟ್(ಎಥಿಕ್ಸ್), ಎ.ಜೆ ರೈ(ಪಬ್ಲಿಕ್ ಇಮೇಜ್), ಗುರುರಾಜ್ ಕೊಳತ್ತಾಯ(ಐಟಿ ಮತ್ತು ವೆಬ್), ಪ್ರಭಾಕರ್ ಮುಗೇರ್(ಜಿಲ್ಲಾ ಪ್ರಾಜೆಕ್ಟ್ಸ್), ಶ್ರೀಧರ್ ಆಚಾರ್ಯ(ರೋಟರ‍್ಯಾಕ್ಟ್), ಗೋವಿಂದಪ್ರಕಾಶ್ ಸಾಯ(ಪ್ರೋಗ್ರಾಂ ಸಮಿತಿ), ಸತೀಶ್ ನಾಯಕ್ ಎಂ(ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್), ಮನೋಜ್ ಟಿ.ವಿ(ರೋಟರ‍್ಯಾಕ್ಟ್ ಕ್ಲಬ್ ಸ್ವರ್ಣ)ರವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಪರಿಚಯ:
ಉಡುಪಿ ಸಮೀಪದ ಬಾರ್ಕೂರು ದಿ.ಯು.ಕೆ.ಎಸ್. ಭಟ್ ಹಾಗೂ ದಿ.ಶ್ರೀಮತಿ ಸರಸ್ವತಿ ದಂಪತಿ ಪುತ್ರರಾಗಿ ಡಾ.ಶ್ರೀಪತಿ ರಾವ್ ಜನಿಸಿದ್ದು ತಮ್ಮ ಪಿಯುಸಿ ಶಿಕ್ಷಣವನ್ನು ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನಲ್ಲಿ 1976ರ ಬ್ಯಾಚ್‌ನ ಅತ್ಯುತ್ತಮ ಔಟಿಂಗ್ ವಿದ್ಯಾರ್ಥಿ ಎಂದು ಪ್ರಶಸ್ತಿ ಪಡೆದಿದ್ದರು. ಬಳಿಕ ಎಂಬಿಬಿಎಸ್ ಪದವಿ ಜೊತೆಗೆ ಎಂಡಿ ಪದವಿಯನ್ನು ಪಡೆದುಕೊಂಡು ಮೊದಲಿಗೆ ಸರ್ಕಾರಿ ವೈದ್ಯಾಧಿಕಾರಿಯಾಗಿ ಸೇವೆಯನ್ನು ಆರಂಭಿಸಿದರು. ಬಳಿಕ 2004ರಂದು ಬೊಳ್ವಾರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಅದಮಾರು ಮಠದ ಸ್ವಾಮೀಜಿ ಹಾಗೂ ಡಾ.ಬಿ.ಎಂ ಹೆಗಡೆ ಸಮ್ಮುಖದಲ್ಲಿ ಪ್ರಗತಿ ಆಸ್ಪತ್ರೆಯನ್ನು ಆರಂಭಿಸಿದರು. ಪ್ರಸ್ತುತ ಪ್ರಗತಿ ಆಸ್ಪತ್ರೆಯು ಸುಸಜ್ಜಿತ ಸೌಕರ್ಯಗಳೊಂದಿಗೆ ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೊಂಡು ಕಾರ್ಯನಿರ್ವಹಿಸುತ್ತಿದೆ. ಇಡೀ ಪುತ್ತೂರಿನಲ್ಲಿ ಸತತ ಮೂರು ಬಾರಿ ಎನ್‌ಎಬಿಎಚ್ ಪ್ರಮಾಣೀಕರಣದೊಂದಿಗೆ ಗುರುತಿಸಿಕೊಂಡಿರುವ ಹೆಗ್ಗಳಿಕೆ ಈ ಆಸ್ಪತ್ರೆಗಿದೆ. 2013ರಲ್ಲಿ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜ್, ಪ್ರಗತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಅನ್ನು ಸಹ ಪ್ರಾರಂಭಿಸಲಾಯಿತು. ಡಾ.ಶ್ರೀಪತಿ ರಾವ್‌ರವರು ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಲ್ಲಿ ಗ್ಯಾರಿಯಾಟ್ರಿಕ್ ಮೆಡಿಸಿನ್ ಪ್ರಾಧ್ಯಾಪಕರಾಗಿದ್ದು ಪತ್ನಿ ಡಾ.ಸುಧಾ ಎಸ್.ರಾವ್‌ರವರೂ ಕೂಡ ಪ್ರಗತಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯದರ್ಶಿ ಪರಿಚಯ:
ಸುಳ್ಯ ತಾಲೂಕಿನ ಆರಂತೋಡು ಗ್ರಾಮದ ದಿ.ಅಪ್ಪಯ್ಯ ಆಚಾರ್ಯ ಹಾಗೂ ದಿ.ದೇವಕಿ ಆಚಾರ್ಯ ದಂಪತಿ ಪುತ್ರರಾಗಿ ದಾಮೋದರ್ ಕೆ ಜನಿಸಿದ್ದು, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣವನ್ನು ಆರಂತೋಡು, ಸಂಪಾಜೆ ಶಾಲೆಯಲ್ಲಿ, ಕಾಲೇಜು ಶಿಕ್ಷಣವನ್ನು ಸುಳ್ಯ, ಮಡಿಕೇರಿ ಸರಕಾರಿ ಕಾಲೇಜಿನಲ್ಲಿ ಪೂರೈಸಿದ್ದರು. ಬಳಿಕ ಬಿಎಸ್‌ಎನ್‌ಎಲ್‌ನಲ್ಲಿ ಸಬ್ ಡಿವಿಷನ್ ಇಂಜಿನಿಯರ್ ಆಗಿ ಸೇವೆಯನ್ನು ಆರಂಭಿಸಿ 2020ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದಿದ್ದರು. ದಾಮೋದರ್ ಕೆ.ರವರು ಪತ್ನಿ ಸುಪ್ರಭ, ಪುತ್ರ ಶ್ರೀನಿಧಿರವರೊಂದಿಗೆ ಬನ್ನೂರಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.
ಕೋಶಾಧಿಕಾರಿ ಪರಿಚಯ:
ಉಪ್ಪಿನಂಗಡಿ ಮಠ ಗೇಟ್ ಎಂಬಲ್ಲಿ ಅಬ್ದುಲ್ ಖಾದರ್ ಹಾಗೂ ಮರಿಯಮ್ಮ ದಂಪತಿ ಪುತ್ರರಾಗಿ ಜನಿಸಿದ ರಫೀಕ್ ಎಂ.ಜಿರವರು ಬೆಳ್ತಂಗಡಿ ಸರಕಾರಿ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದು ಹತ್ತು ವರ್ಷ ದುಬೈನಲ್ಲಿ ದುಡಿದಿದ್ದರು. ಕಳೆದ 28 ವರ್ಷಗಳಿಂದ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ಪಾದರಕ್ಷೆಗಳ ನಯಾ ಚಪ್ಪಲ್ ಬಜಾರ್ ಮಳಿಗೆಯನ್ನು ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಉದ್ಯಮದೊಂದಿಗೆ ತನ್ನ ಮಳಿಗೆಯಲ್ಲಿ ಕಾಲೇಜು ರಜಾ ಸಂದರ್ಭ ಕೆಲಸ ನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳನ್ನು, ಕಾರ್ಮಿಕರ ದಿನದ ಸಂದರ್ಭ ಕಾರ್ಮಿಕರನ್ನು, ವೈದ್ಯರ ದಿನಾಚರಣೆ ಸಂದರ್ಭ ವೈದ್ಯರುಗಳನ್ನು, ಸಂಸ್ಥೆಯು ನವೀಕರಣಗೊಂಡು ಉದ್ಘಾಟನೆ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಿದ್ದರು. ಪುತ್ತೂರು ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ರೋಟರಿ ಕ್ಲಬ್ ಪುತ್ತೂರು ಇದರ ನಾಲ್ಕನೇ ಬಾರಿ ಕೋಶಾಧಿಕಾರಿಯಾಗಿ, ಮಾಜಿ ಅಧ್ಯಕ್ಷರಾಗಿ, ಪುತ್ತೂರು ಸಲಫಿ ಮಸೀದಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಜು.5 ರಂದು ಪದಪ್ರದಾನ..
ಜು.5 ರಂದು ಸಂಜೆ ದರ್ಬೆ ಪ್ರಶಾಂತ್ ಮಹಲ್‌ನಲ್ಲಿ ಪದ ಪ್ರದಾನ ಸಮಾರಂಭ ಜರಗಲಿದ್ದು, ನೂತನ ಪದಾಧಿಕಾರಿಗಳಿಗೆ ರೋಟರಿ ಕ್ಲಬ್ ಮಂಗಳೂರು ಅಧ್ಯಕ್ಷ ದೇವರಾಜ್ ಫೆರ್ನಾಂಡೀಸ್‌ರವರು ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್, ಡಾ.ಸಿ.ಆರ್ ರಾಜೇಶ್ ಬಲ್ಲಾಳ್, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ, ವಲಯ ಸೇನಾನಿ ಪಿ.ಮುರಳೀಧರ್ ರೈರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.