ಪುತ್ತೂರು:ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಅಶೋಕ್ ಕುಮಾರ್ ರೈ ಎಲ್ಲಾ ಶಾಲಾ ಮಂತ್ರಿ ಮಂಡಲದ ಸ್ಪರ್ಧಿಗಳಿಗೆ ಶುಭಹಾರೈಸಿ ಚಾಲನೆಯನ್ನು ನೀಡಿದರು.
ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ನಾಯಕ ಮತ್ತು ನಾಯಕಿ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಚುನಾವಣೆಯು ಮೊಬೈಲ್ ವೋಟಿಂಗ್ ಮಿಷನ್ ಆಪ್ ಮೂಲಕ ನಡೆದಿದ್ದು, ಈ ಚುನಾವಣೆಗೆ ಶಾಸಕ ಅಶೊಕ್ ಕುಮಾರ್ ರೈ ಆಗಮಿಸಿ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಜನರೇ ಆಡಳಿತದ ಪ್ರಭುಗಳು. ನಿಮ್ಮ ಮುಂದಿನ ಭವಿಷ್ಯದಲ್ಲಿ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ. ನಾನು ಈ ಶಾಲಾ ವಿದ್ಯಾರ್ಥಿಯಾಗಿದ್ದು ಆಡಳಿತದ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿರುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.
ಶಾಲಾಪ್ರಧಾನ ನಾಯಕನಾಗಿ ನಂದನ್ ಕೆ.ಎಚ್. ಮತ್ತು ಶಾಲಾ ಪ್ರಧಾನ ನಾಯಕಿಯಾಗಿ ಪೃಥ್ವಿ ಎನ್ ತುಮಕೂರು ಆಯ್ಕೆಯಾದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಜೋಕಿಂ ಡಿಸೋಜ, ಸ್ಥಳೀಯ ನಗರಸಭಾ ಸದಸ್ಯ ಪಿ. ಜಿ. ಜಗನ್ನಿವಾಸ ರಾವ್, ಪದವಿಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ನ್ಯಾಯವದಿ ಪಡ್ಡಂಬೈಲು ಸುರೇಶ್ ರೈ ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಮಂತ್ರಿಯಾಗಿ ಅಕ್ಷಯ್, ಜೀವಿತ, ಕೃಷಿಮಂತ್ರಿಯಾಗಿ ಚಿಂತನ್, ಹರ್ಷಿತಾ ಪಿ.ಜೆ, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀಕೃಪಾ, ಚಿನ್ಮಯ, ಗ್ರಂಥಾಲಯ ಮಂತ್ರಿಯಾಗಿ ಪ್ರಜ್ವಲ್, ವೈಷ್ಣವಿ, ಶಿಸ್ತು ಮಂತ್ರಿ : ಜೀವನ್, ಸಿಂಚನಾ, ಕ್ರೀಡಾ ಮಂತ್ರಿ : ಶ್ರೇಯಸ್, ಅಸ್ನಾ, ಸ್ವಚ್ಛತಾ ಮಂತ್ರಿಯಾಗಿ ವೈಭವ್, ಸಾನ್ಯ ಎನ್ ರೈ, ಆಹಾರ ಮಂತ್ರಿಯಾಗಿ ವೈಶಾಕ್, ಯಶಸ್ವಿನಿ ಯವರನ್ನು ಆಯ್ಕೆ ಮಾಡಲಾಯಿತು. ಉಪಪ್ರಾಂಶುಪಾಲ ವಸಂತ ಮೂಲ್ಯ ಇವರು ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು, ಜಾನ್ ವಾಲ್ಡರ್ ಮತ್ತು ಶ್ರೀಮತಿ ಮರ್ಸಿ ಮಮತ ಮೋನಿಸ್ ಚುನಾವಣಾ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡರು.