ಅರಿಯಡ್ಕ ಗ್ರಾಮ ಪಂಚಾಯತ್- ಮಳೆ ಹಾನಿ ಬಗ್ಗೆ ವಿಪತ್ತು ನಿರ್ವಹಣಾ ಸಭೆ

0

ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ 2024-2025 ನೇ ಸಾಲಿನ ಮಳೆ ಹಾನಿ ಬಗ್ಗೆ ತುರ್ತು ಮುಂಜಾಗ್ರತೆ ಕ್ರಮಕ್ಕಾಗಿ ವಿಪತ್ತು ನಿರ್ವಹಣಾ ಸಮಿತಿ ಸಭೆಯೂ ಜೂ 29 ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೋಡೆಲ್ ಅಧಿಕಾರಿಗಳಾಗಿ ಪಶು ಸಂಗೋಪನಾ ಇಲಾಖೆ ಪುತ್ತೂರು ಇದರ ಸಹಾಯಕ ನಿರ್ದೇಶಕ ಧರ್ಮ ಪಾಲರವರು ಮಾಹಿತಿ ನೀಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ದುರಸ್ತಿಯಲ್ಲಿರುವ ಬೀಳುವಂತಹ ಮನೆಗಳ ಸ್ಥಳಾಂತರ, ತೆಂಗಿನ, ಅಡಿಕೆ ಮರದ ಪಾಲ ವರೆಗೆ ನೀರು ಬರುವಂತಹ ತೋಡು, ಗುಡ್ಡೆ ಬರೆ ಕುಸಿವಂತಹ ಸ್ಥಳಗಳು, ಕಿಂಡಿ ಅಣೆಕಟ್ಟು ಕಾಲು ಸಂಕ ಮೇಲೆ ವರೆಗೆ ನೀರು ಬರುವಂತಹ ಸ್ಥಳ, ಅಪಾಯಕಾರಿ ನೀರು ತುಂಬಿರುವ ಸ್ಥಳಗಳಿಗೆ ಬೇಲಿ ಹಾಕಿ ನಾಮಫಲಕ ಅಳವಡಿಸುವ ಮೂಲಕ ಜಾಗ್ರತೆ ವಹಿಸಬೇಕು ಎಂದರು.


ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್ ಬಿ ಕೆ ಮಾಹಿತಿ ನೀಡಿ, ಅಪಾಯಕಾರಿ ಮರಗಳ ಪಟ್ಟಿ ಪಂಚಾಯತ್ ನೀಡಿದ್ದು, ಅದರಲ್ಲಿ ಈಗಾಗಲೇ ಕೆಲವೊಂದು ಮರಗಳನ್ನು ತೆರವು ಗೊಳಿಸಿದ್ದೇವೆ, ಇನ್ನೂ ಕೆಲವು ಮರಗಳನ್ನು ತೆರವುಗೊಳಿಸಲು ಬಾಕಿ ಇದೆ ಎಂದರು.ಈ ವಿಚಾರವಾಗಿ ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಮಾತನಾಡಿ, ಶೇಖಮಲೆ ಎಂಬಲ್ಲಿ ಅಪಾಯಕಾರಿ ಮರ ಇರುವ ಬಗ್ಗೆ ಅನೇಕ ಬಾರಿ ಪ್ರಸ್ತಾಪ ಮಾಡಿದ್ದೇನೆ.ಅದರ ಬಗ್ಗೆ ಯಾಕೇ ಕ್ರಮ ಕೈಗೊಳ್ಳಲಿಲ್ಲ ಎಂದರು.ಈ ವಿಚಾರವಾಗಿ ಮಾತನಾಡಿದ ಅರಣ್ಯಾಧಿಕಾರಿಯವರು ಮೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕ ತೆರವು ಕಾರ್ಯಾಚರಣೆ ಮಾಡಿದ ನಂತರ ಮರ ತೆಗೆಯುವ ಕೆಲಸವಾಗಲಿದೆ ಎಂದರು.ಈ ವಿಚಾರವಾಗಿ ಮಾತನಾಡಿದ ನೋಡೆಲ್ ಅಧಿಕಾರಿಯವರು ಆದಷ್ಟು ಬೇಗ ಕೆಲಸ ಮುಂದುವರೆಸಿ ಎಂದರು.


ಸಭೆಯ ಬಳಿಕ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಿಗೆ ಅಧಿಕಾರಿಗಳು ತೆರಳಿ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆಮಜಲು, ಗ್ರಾಮ ಲೆಕ್ಕಿಗ ಗೋಪಿನಾಥ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ನಾರಾಯಣ ನಾಯ್ಕ ಚಾಕೋಟೆ, ರಾಜೇಶ್ ಮಣಿಯಾಣಿ ತ್ಯಾಗ ರಾಜೆ, ಜಯಂತಿ ಪಟ್ಟುಮೂಲೆ,ಮೋನಪ್ಪ ಪೂಜಾರಿ ಕೆರೆಮಾರು, ರೇಣುಕಾ ಸತೀಶ್ ಮಡ್ಯಂಗಳ, ಪುಷ್ಪ ಲತಾ ಮರತ್ತಮೂಲೆ, ಅನಿತಾ ಆಚಾರಿ ಮೂಲೆ, ಪವರ್ ಮ್ಯಾನ್ ನವೀನ್,ಹಿ.ಪ.ವೈದ್ಯ ಪರಿ ವೀಕ್ಷಕ ವೀರಪ್ಪ ಮತ್ತೀತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here