ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಸನ್ ಕಾಂಪ್ಲೆಕ್ಸ್ನಲ್ಲಿ ಜಿಯೋ ಫೈಬರ್ ಸೇವೆಯು ಜು.3ರಂದು ಲೋಕಾರ್ಪಣೆಗೊಂಡಿತು. ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಬಲರಾಮ ಆಚಾರ್ಯರವರು ಉದ್ಘಾಟನೆ ನೆರವೇರಿಸಿ ಪುತ್ತೂರಿಗೆ ಹೊಸ ಹೊಸ ಸೌಲಭ್ಯಗಳು ಬರುತ್ತಿದ್ದು ಈ ಸೌಲಭ್ಯವನ್ನು ಪುತ್ತೂರಿನ ಜನತೆ ಅತ್ಯಂತ ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಜಿಯೋ ಫೈಬರ್ ಸೇವೆಯು ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಜಿಯೋ ಕ್ಲಸ್ಟರ್ ಮ್ಯಾನೇಜರ್ ಹರೀಶ್ ಕೆ ಪಾಟಾಳಿಯವರು ಮಾತನಾಡಿ ಜಿಯೋ ಫೈಬರ್ ದ.ಕ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 3 ಕಡೆ ಪ್ರಾರಂಭಗೊಂಡಿದೆ. ಶೂನ್ಯ ಪ್ರವೇಶ ವೆಚ್ಚ, ಯಾವುದೇ ಸೆಕ್ಯೂರಿಟಿ ಡಿಪಾಸಿಟ್ ಇಲ್ಲ, ಇನ್ಸ್ಟಾಲೇಶನ್ ಶುಲ್ಕವಿಲ್ಲದೆ 550ಕ್ಕೂ ಮಿಕ್ಕಿ ಟಿವಿ ಚಾನೆಲ್ಗಳಿರುವ, ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯಬಹುದು ಎಂದರು.
ಜಿಯೋ ಮ್ಯಾನೇಜರ್ ಮಹೇಶ್, ಸೇಲ್ಸ್ ಮ್ಯಾನೇಜರ್ ಕಿರಣ್ ಶೆಟ್ಟಿ, ಪಾಲುದಾರರಾದ ದಿಲೀಪ್ ಲೋಬೋ, ಪ್ರವೀಣ್ ಪ್ರಭು, ಉಮಾಶಂಕರ್, ರಂಜನ್ ರಾವ್, ಜಿಯೋ ಏರ್ ಪೈಬರ್ ಪಾಲುದಾರರಾದ ಸತ್ಯಶಂಕರ್ ಉಪಸ್ಥಿತರದ್ದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.