ಪುತ್ತೂರು: ಸಾಮೆತ್ತಡ್ಕ ದ.ಕ.ಜಿ.ಪಂ. ಹಿ. ಪ್ರಾ.ಶಾಲೆ ಸಾಮೆತ್ತಡ್ಕ ಇದರ 2024-25 ಸಾಲಿನ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಶಾಲಾ ನಾಯಕಿಯಾಗಿ 7 ನೇ ತರಗತಿಯ ಎಂ.ದಿವ್ಯ ,ಉಪನಾಯಕನಾಗಿ 6 ನೇ ತರಗತಿಯ ಮೊಹಮ್ಮದ್ ಹಾಶಿಮ್ ಆಯ್ಕೆಯಾಗಿರುತ್ತಾರೆ.
ಶಿಕ್ಷಣ ಮಂತ್ರಿಯಾಗಿ ನೀಲ್ ಡಿಯೋನ್ ಪಸನ್ನ , ಆರೋಗ್ಯ ಮಂತ್ರಿಯಾಗಿ ವಿಜಯ್ ಪುಟ್ಟಯ್ಯ ಮಠಪತಿ ,ಕ್ರೀಡಾ ಮಂತ್ರಿಯಾಗಿ 4ನೆತರಗತಿಯ ಸಯ್ಯದ್ ಮೊಹಮ್ಮದ್ ಸೈಫಾನ್ ,ನೀರಾವರಿ ಮಂತ್ರಿಯಾಗಿ ಹೇಮಂತ್, ರಕ್ಷಣಾ ಮಂತ್ರಿಯಾಗಿ ಚಿನ್ಮಯಿ, ವಾರ್ತಾ ಮಂತ್ರಿಯಾಗಿ ನೇತ್ರಾ , ಸ್ವಚ್ಚತಾ ಮಂತ್ರಿಯಾಗಿ ಭೂಮಿಕಾ, ಕಾನೂನು ಮಂತ್ರಿಯಾಗಿ ಚರಿಷ್ಮ ಗ್ರಂಥಾಲಯ ಮಂತ್ರಿಯಾಗಿ ಶಜ್ಮಾ ಫಾತಿಮಾ ತೋಟಗಾರಿಕೆ ಮಂತ್ರಿಯಾಗಿ ರಾಹೀದ್, ಹಣಕಾಸು ಮಂತ್ರಿಯಾಗಿ ಲಾವಣ್ಯ, ಆಹಾರ ಮಂತ್ರಿಯಾಗಿ ಸಯ್ಯದ್ ಮೊಹಮ್ಮದ್ ಆಫ್ರೊಜ್ ,ವಿರೋಧ ಪಕ್ಷದ ನಾಯಕಿಯಾಗಿ ಮಿನ್ಹಾ ಫಾತಿಮಾ,ಅಭಿವೃದ್ಧಿ ಮಂತ್ರಿಯಾಗಿ ಅರ್ಪಿತಾ 4ನೇ ತರಗತಿ ಆಯ್ಕೆಯಾಗಿರುತ್ತಾರೆ.ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಕಾರ್ಯಕ್ರಮಕ್ಕೆ ಸಹಕರಿಸಿದರು.