ರೋಟರಿ ಕ್ಲಬ್ ಪುತ್ತೂರು ಪದ ಪ್ರದಾನ ಕಾರ್ಯಕ್ರಮ

0

ದೂರದೃಷ್ಟಿತ್ವದ ಯೋಜನೆಗಳಿದ್ದಾಗ ಕ್ಲಬ್ ಅಭಿವೃದ್ಧಿ – ದೇವರಾಜ್ ಫೆರ್ನಾಂಡೀಸ್

ಪುತ್ತೂರು: ಮಿತೃತ್ವ, ಒಡನಾಟ, ವಿವಿಧತೆಯಲ್ಲಿ ಏಕತೆ, ಬದ್ಧತೆಯೊಂದಿಗೆ ಸಮಾಜಕ್ಕೆ ಅನೇಕ ಸಮಾಜಮುಖಿ ಕಾರ್ಯಗಳನ್ನು ರೋಟರಿ ನೀಡುತ್ತಾ ಬಂದಿದೆ. ಯಾವುದೇ ಕ್ಲಬ್ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ದೂರದೃಷ್ಟಿತ್ವದ ಯೋಜನೆಗಳನ್ನು ಹಾಕಿಕೊಂಡಾಗ ಕ್ಲಬ್ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಎಲ್ಲರ ಒಗ್ಗೂಡುವಿಕೆಯಿಂದ ಕ್ಲಬ್ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕ್ಲಬ್ ಉತ್ತುಂಗಕ್ಕೇರಲಿ ಎಂದು ರೋಟರಿ ಕ್ಲಬ್ ಮಂಗಳೂರು ಅಧ್ಯಕ್ಷ ದೇವರಾಜ್ ಫೆರ್ನಾಂಡೀಸ್‌ರವರು ಹೇಳಿದರು. ಜು.5ರಂದು ಸಂಜೆ ಪ್ರಶಾಂತ್ ಮಹಲ್‌ನಲ್ಲಿ ಜರಗಿದ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಪುತ್ತೂರಿನ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ನೂತನ ನೂತನ ಪದಾಧಿಕಾರಗಳ ಪದ ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ಪರವಾಗಿ ಅವರು ಪದ ಪ್ರದಾನ ನೆರವೇರಿಸಿ ಮಾತನಾಡಿದರು.

ಡಾ.ಶ್ರೀಪತಿ ರಾವ್‌ರವರ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಲಿ – ಡಾ.ಸಿ.ಆರ್ ಬಲ್ಲಾಳ್:
ಮುಖ್ಯ ಅತಿಥಿ, ಮಂಗಳೂರು ಕೆಎಂಸಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್, ಡಾ.ಸಿ.ಆರ್ ರಾಜೇಶ್ ಬಲ್ಲಾಳ್ ಮಾತನಾಡಿ, ಮಂಗಳೂರು ನನ್ನ ಜನ್ಮಭೂಮಿ, ಪುತ್ತೂರು ನನ್ನ ಕರ್ಮಭೂಮಿಯಾಗಿದೆ. ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿರವರು ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ ಅದರಂತೆ ಓರ್ವ ವೈದ್ಯನಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ರೋಟರಿಯಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಂತಹ ನೂತನ ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರ ಮುಂದಿನ ಸಮಾಜಮುಖಿ ಕಾರ್ಯಗಳು ಯಶಸ್ವಿಯಾಗಲಿ ಎಂದರು.

ಕ್ಲಬ್ ವಜ್ರದಂತೆ ನೊಂದವರ ಬಾಳಿಗೆ ಕಂಗೊಳಿಸಲಿ-ಡಾ.ಹರ್ಷಕುಮಾರ್ ರೈ:
ಗೌರವ ಅತಿಥಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈರವರು ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ರೋಟರಿ ಪಿನ್ ತೊಡಿಸುವ ಮೂಲಕ ಮಾತನಾಡಿ, ವಜ್ರಮಹೋತ್ಸವ ಸಂಭ್ರಮದಲ್ಲಿರುವ ಈ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದೆ. ಸಮಾಜಮುಖಿ ಕಾರ್ಯಗಳ ಮೂಲಕ ಮಾನವೀಯ ಕಾರ್ಯಗಳನ್ನು ಮಾಡುತ್ತಿರುವ ಈ ಕ್ಲಬ್ ಅನ್ನು ದೇವರು ಮೆಚ್ಚಿರುವುದು ಅಲ್ಲದೆ ಜನತೆಯು ಕೂಡ ಮೆಚ್ಚಿದೆ ಮಾತ್ರವಲ್ಲ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಕ್ಲಬ್ ಪಾತ್ರವಾಗಿದೆ ಜೊತೆಗೆ ವಜ್ರದಂತೆ ನೊಂದವರ ಬಾಳಿಗೆ ಕ್ಲಬ್ ಕಂಗೊಳಿಸಲಿ ಎಂದರು.

ಜನತೆ ರೋಟರಿಯ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಮೆಚ್ಚಿದ್ದಾರೆ-ಮುರಳೀಧರ್ ರೈ:
ರೋಟರಿ ವಲಯ ಸೇನಾನಿ ಪಿ.ಮುರಳೀಧರ್ ರೈರವರು ಕ್ಲಬ್ ಬುಲೆಟಿನ್ ಎಡಿಟರ್ ಕೆ.ಬಾಲಕೃಷ್ಣ ಆಚಾರ್ಯ ಸಂಪಾದಕತ್ವದ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, 59 ವರ್ಷದ ಹಿಂದೆ ಭಿತ್ತಿದ ಬೀಜ ಇಂದು ಸುಳ್ಯ, ಪುತ್ತೂರು, ಕಡಬ ತಾಲೂಕಿನಲ್ಲಿ ಹೆಮ್ಮರವಾಗಿ ಹಬ್ಬಿದ್ದು ನೋಡಿದಾಗ ಅಂದು ಹಿರಿಯರು ಪಟ್ಟ ಶ್ರಮವನ್ನು ನೆನಪಿಸಬೇಕಾಗುತ್ತದೆ. ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ರೋಟರಿ ಸದಸ್ಯರ ಸಂಖ್ಯೆ ಕುಸಿಯುತ್ತಿರುವುದು ಅಂಕಿ ಅಂಶಗಳಿಂದ ಗುರುತಿಸಲ್ಪಟ್ಟಿದ್ರೂ ಪುತ್ತೂರಿನಲ್ಲಿ ಮಾತ್ರ ಕ್ಲಬ್‌ಗಳು ಹೆಚ್ಚೆಚ್ಚು ಹುಟ್ಟು ಹಾಕುತ್ತಿರುವುದು ನೋಡಿದಾಗ ಜನರಿಗೆ ರೋಟರಿಯ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವನೆಯನ್ನು ಮೆಚ್ಚಿದ್ದಾರೆ ಎಂದು ತಿಳಿಯುತ್ತದೆ ಎಂದರು.

ಸಂತೋಷ, ಆತ್ಮತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ-ಜೈರಾಜ್ ಭಂಡಾರಿ:
ರೋಟರಿ ಕ್ಲಬ್ ಪುತ್ತೂರು ನಿರ್ಗಮಿತ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಕ್ಲಬ್ ಸದಸ್ಯರ ಸಹಕಾರ, ಸಂಯೋಗದಿಂದ ಸಂಸ್ಥೆಯ ವತಿಯಿಂದ ಜನಪರ ಕಾರ್ಯಕ್ರಮ ಸಂಘಟಿಸಿ ಸಂತೋಷ ಹಾಗೂ ಆತ್ಮತೃಪ್ತಿಯಿಂದ ನಿರ್ಗಮಿಸುತ್ತಿದ್ದೇನೆ. ಹೆಮ್ಮೆಯ ಸದಸ್ಯರ ಮತ್ತು ಹಿತೈಷಿಗಳ ತುಂಬು ಹೃದಯದ ಸಹಕಾರದಿಂದ ಸಮಾಜಮುಖಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ ಮಾತ್ರವಲ್ಲ ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ರಕ್ತನಿಧಿ, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ ಮುಂತಾದ ಶಾಶ್ವತ ಪ್ರಾಜೆಕ್ಟ್‌ಗಳನ್ನು ಕ್ಲಬ್ ಸಮಾಜಕ್ಕೆ ನೀಡಿದ್ದು ಮುಂದಿನ ವರ್ಷ ಮೆಮೋಗ್ರಾಫಿ ಸೆಂಟರ್ ಅನ್ನು ಲೋಕಾರ್ಪಣೆಗೊಳ್ಳಲಿದೆ. ಮುಂದಿನ ವರ್ಷದ ಡಾ.ಶ್ರೀಪತಿ ರಾವ್‌ರವರ ಅಧ್ಯಕ್ಷತೆಯಲ್ಲಿ ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಯಲಿದೆ ಎಂದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ನಿವೃತ್ತ ರೈಲ್ವೇ ಇಂಜಿನಿಯರ್ ಗೋಪಕುಮಾರ್, ಆಯುರ್ವೇದ ತಜ್ಞ ಡಾ.ಪ್ರದೀಪ್ ಕುಮಾರ್, ಹೋಮಿಯೋಪತಿ ವೈದ್ಯ ಡಾ.ಅವಿಲ್ ಗೊನ್ಸಾಲ್ವಿಸ್, ಉದ್ಯಮಿ ರಾಜೇಶ್ ಎಂ.ಆರ್, ಕೆನರಾ ಬ್ಯಾಂಕ್ ಪ್ರಬಂಧಕ ರಾಜ್‌ಕುಮಾರ್, ಝೈಡಸ್ ಹೆಲ್ತ್‌ಕೇರ್ ಸೇಲ್ಸ್ ಎಕ್ಸಿಕ್ಯೂಟಿವ್ ಪ್ರಕಾಶ್ ಎನ್, ನಿವೃತ್ತ ಸೈನಿಕ ಸುಂದರ ಗೌಡ, ಉದ್ಯಮಿ ಕೃಷ್ಣಪ್ರಸಾದ್(ಹಿಂದೆ ರೋಟರಿಯಲ್ಲಿದ್ದರು), ವೈದ್ಯೆ ಡಾ.ಹಬೀನಾ, ವೈದ್ಯ ಡಾ.ಪದ್ಮನಾಭ ಭಟ್‌ರವರುಗಳಿಗೆ ಪದ ಪ್ರದಾನ ಅಧಿಕಾರಿ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.

ಸಹಕರಿಸಿದವರಿಗೆ ಅಭಿನಂದನೆ:
ನಿರ್ಗಮಿತ ಅಧ್ಯಕ್ಷ ಜೈರಾಜ್ ಭಂಡಾರಿರವರ ಅವಧಿಯಲ್ಲಿ ಸಹಕರಿಸಿದ ಸದಸ್ಯರಾದ ಸುಜಿತ್ ಡಿ.ರೈ, ಸಂಕಪ್ಪ ರೈ, ಬಾಲಕೃಷ್ಣ ಆಚಾರ್ಯ, ಅಶೋಕ್ ಬಲ್ನಾಡು, ಡಾ.ಶ್ರೀಪ್ರಕಾಶ್, ಪರಮೇಶ್ವರ ಗೌಡ, ಡಾ.ಸೀತಾರಾಂ ಭಟ್, ಸುರೇಶ್ ಶೆಟ್ಟಿ, ಕಿಶನ್ ಬಿ.ವಿ, ಗುರುರಾಜ್ ಕೊಳತ್ತಾಯ, ಹೆರಾಲ್ಡ್ ಮಾಡ್ತಾ, ಸುಬ್ಬಪ್ಪ ಕೈಕಂಬ, ಪ್ರೇಮಾನಂದ ಡಿ, ಪ್ರೀತಾ ಹೆಗ್ಡೆ, ರಾಜ್ ಗೋಪಾಲ್ ಬಲ್ಲಾಳ್, ದತ್ತಾತ್ರೇಯ ರಾವ್, ಹೇಮಾ ಜಯರಾಂ, ಸುದರ್ಶನ್ ರಾವ್, ಎ.ವಿ ನಾರಾಯಣ, ದಾಮೋದರ್ ಕೆ, ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್, ಟೆಕ್ನೀಶಿಯನ್ ಸಜಿನಿ ಮಾರ್ಟಿಸ್, ರೋಟರಿ ಚಾರಿಟೇಬಲ್ ಟ್ರಸ್ಟ್ ಪಿ.ಆರ್.ಒ ಕುಲ್‌ದೀಪ್‌ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.

ಕೆ.ಆರ್ ಶೆಣೈರವರಿಗೆ ಅಭಿನಂದನೆ:
59 ವರ್ಷಗಳ ಹಿಂದೆ ಸ್ಥಾಪನೆಯಾದ ರೋಟರಿ ಕ್ಲಬ್ ಪುತ್ತೂರು ಇದರ ಆರಂಭದಿಂದಲೂ ಇಂದಿಗೂ ಕ್ಲಬ್‌ನೊಂದಿಗೆ ಸಹಕರಿಸುತ್ತಿರುವ ರೋಟರಿ ಭೀಷ್ಮ ಕೆ.ಆರ್ ಶೆಣೈರವರಿಗೆ ಪದ ಪ್ರದಾನ ಅಧಿಕಾರಿ ಹೂಗುಚ್ಛ ನೀಡಿ ಗೌರವಿಸಿದರು.

ಮನೆ ಕೀ ಹಸ್ತಾಂತರ:
ಸಮುದಾಯ ಸೇವಾ ವಿಭಾಗದಡಿಯಲ್ಲಿ ಪೆರ್ನೆ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ಮಾಯಿಲು ಎಂಬ ಮಹಿಳೆಗೆ ರೋಟರಿ ಜಿಲ್ಲಾ ಗ್ರ್ಯಾಂಟ್, ರೋಟರಿ ಸದಸ್ಯರ, ಇಂಜಿನಿಯರ್ ಎ.ವಿ ನಾರಾಯಣರವರ ದೇಣಿಗೆಯ ರೂ.7.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯ ಕೀಯನ್ನು ಮಾಯಿಲು ಎಂಬ ಮಹಿಳೆಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಕ್ಲಬ್ ಪ್ರತಿಭಾವಂತ ಮಕ್ಕಳಿಗೆ ಗೌರವ:
ಕ್ಲಬ್ ಸದಸ್ಯರ ಮಕ್ಕಳಾಗಿದ್ದು, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸುದರ್ಶನ್ ರಾವ್‌ರವರ ಪುತ್ರ ಅಭಯ್ ಎಸ್.ರಾವ್, ಸುಜಿತ್ ಡಿ.ರೈಯವರ ಪುತ್ರ ಸ್ವಯಂ ಎಸ್.ರೈ, ಜಗದೀಶ್ ಆಚಾರ್ಯರವರ ಪುತ್ರ ಯಶಸ್ ಎಸ್.ಜೆ(ಪಿಯುಸಿ), ಸುಬ್ಬಪ್ಪ ಕೈಕಂಬರವರ ಪುತ್ರ ತೇಜಸ್ ಎಸ್.ಕೆ(ಎಸೆಸ್ಸೆಲ್ಸಿ), ದತ್ತಾತ್ರೇಯ ರಾವ್‌ರವರ ಪುತ್ರಿ ದ್ಯುತಿ ಡಿ.ರಾವ್(ಫುಡ್ ನ್ಯುಟ್ರಿಶಿಯನ್), ತ್ರೋಬಾಲ್‌ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮನೋಜ್ ಟಿ.ವಿರವರ ಪುತ್ರಿ ವೈಗಾ ಮನೋಜ್‌ರವರುಗಳನ್ನು ಗೌರವಿಸಲಾಯಿತು.

ಪಿ.ಎಚ್.ಎಫ್ ಗೌರವ:
ರೋಟರಿ ಫೌಂಡೇಶನ್‌ಗೆ ಟಿ.ಆರ್.ಎಫ್ ದೇಣಿಗೆ ಮೂಲಕ ಪಿ.ಎಚ್.ಎಫ್ ಪದವಿಗೆ ಭಾಜನರಾಗಿರುವ ಮೇಜರ್ ಡೋನರ್ ಪಿಡಿಜಿ ಡಾ.ಭಾಸ್ಕರ್ ಎಸ್, ಮೇಜರ್ ಡೋನರ್ ವಾಮನ್ ಪೈ, ಬಲರಾಂ ಆಚಾರ್ಯ, ಕೃಷಕುಮಾರ್ ರೈ(ಪಿ.ಎಚ್.ಎಫ್+3), ರಘುನಾಥ್ ರಾವ್, ಕೇಶವ್ ಅಮೈ, ಅಜಯ್ ಪಡಿವಾಳ್, ರಾಜ್‌ಗೋಪಾಲ್ ಬಲ್ಲಾಳ್, ಸಂಕಪ್ಪ ರೈ, ಕೃಷ್ಣ ಉದಯ ಭಟ್, ಮನೋಜ್ ಟಿ.ವಿ, ಸೂರಜ್ ನಾಯರ್, ಡಾ.ಜೈದೀಪ್(ಪಿ.ಎಚ್.ಎಫ್+1)ರವರುಗಳನ್ನು ಅಭಿನಂದಿಸಲಾಯಿತು.

ಜಿಲ್ಲಾ ಪ್ರತಿನಿಧಿಗಳಿಗೆ ಅಭಿನಂದನೆ:
ಕ್ಲಬ್ ಸದಸ್ಯರಾಗಿದ್ದು, ಜಿಲ್ಲಾ ತಂಡದಲ್ಲಿ ಕಾರ್ಯ ನಿರ್ವಹಿಸಲಿರುವ ಝೇವಿಯರ್ ಡಿ’ಸೋಜ(ಡಿಸ್ಟ್ರಿಕ್ಟ್ ತರಬೇತಿ ತಂಡ, ವೈಸ್ ಚೇರ್ಮನ್-ಬಲೋಟಿಂಗ್), ಬಾಲಕೃಷ್ಣ ಆಚಾರ್ಯ(ಅಡ್ವೈಸರ್-ಕಾನ್ಫರೆನ್ಸ್ ನವವೈಭವ), ಡಾ.ಭಾಸ್ಕರ್ ಎಸ್(ಕ್ಲಬ್ ಸರ್ವಿಸ್-ಅವೆನ್ಯೂ ಡೈರೆಕ್ಟರ್), ಮಧು ನರಿಯೂರು(ವೈಸ್ ಚೇರ್ಮನ್-ಕ್ಲಬ್ ಡೆವಲಪ್ಮೆಂಟ್ ಎಕ್ಸ್ಟೆನ್ಸನ್), ಜೈರಾಜ್ ಭಂಡಾರಿ(ಚೇರ್ಮನ್-ಜಿಲ್ಲಾ ಕಲ್ಚರಲ್), ಸುರೇಶ್ ಶೆಟ್ಟಿ(ವೈಸ್ ಚೇರ್ಮನ್-ಗ್ರೀವಿಯನ್ಸ್ ಸೆಲ್), ವಿ.ಜೆ ಫೆರ್ನಾಂಡೀಸ್(ಚೇರ್ಮನ್-ಥೀಮ್ ಪ್ರಮೋಶನ್), ಚಿದಾನಂದ ಬೈಲಾಡಿ(ವೈಸ್ ಚೇರ್ಮನ್-ವೊಕೇಶನಲ್ ಜಾಗೃತಿ), ಎ.ಜಗಜ್ಜೀವನ್‌ದಾಸ್ ರೈ(ವೇರ್ಮನ್-ನಾಯಕತ್ವ ಅಭಿವೃದ್ಧಿ), ಉಮಾನಾಥ್ ಪಿ.ಬಿ(ವೈಸ್ ಚೇರ್ಮನ್-ವಿನ್ಸ್), ಕೃಷ್ಣಕುಮಾರ್ ರೈ(ಚೇರ್ಮನ್-ಜಿಲ್ಲಾ ಪ್ರಾಜೆಕ್ಟ್, ಸಂಧ್ಯಾ ಸುರಕ್ಷಾ), ಡಾ.ಸುಧಾ ಎಸ್.ರಾವ್(ವೈಸ್ ಚೇರ್ಮನ್-ಮೆಂಟಲ್ ಹೆಲ್ತ್), ವಾಮನ್ ಪೈ(ಚೇರ್ಮನ್-ಎಂಡೋವ್‌ಮೆಂಟ್ಸ್ & ಮೇಜರ್ ಗಿಪ್ಟ್ಸ್), ರಾಮಕೃಷ್ಣ ಕೆ(ಚೇರ್ಮನ್-ಬೀಕ್ವೆಸ್ಟ್ ಸೊಸೈಟಿ), ಶ್ರೀಧರ್ ಆಚಾರ್(ವಲಯ ಕೋ-ಆರ್ಡಿನೇಟರ್, ರೈಲಾ), ಸುಜಿತ್ ಕುಮಾರ್(ವೈಸ್ ಚೇರ್ಮನ್-ರೋಟರ್‍ಯಾಕ್ಟ್)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.

ಪ್ರಾರ್ಥನಾ ಹಾಗೂ ಆರಾಧನಾ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಕ್ಲಬ್ ಸದಸ್ಯರನ್ನು ಗುರುತಿಸಿ ಅಭಿನಂದಿಸಲಾಯಿತು. ಕ್ಲಬ್ ನಿರ್ಗಮಿತ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ದಾಮೋದರ್ ಕೆ.ವಂದಿಸಿದರು. ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಡಾ.ಗೋಪಿನಾಥ್ ಪೈ, ಜೊತೆ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬರವರು ಅತಿಥಿಗಳ ಪರಿಚಯ ಮಾಡಿದರು. ನಿರ್ಗಮಿತ ಕಾರ್ಯದರ್ಶಿ ಸುಜಿತ್ ಡಿ.ರೈ ವರದಿ ವಾಚಿಸಿದರು. ಟಿ.ಆರ್.ಎಫ್ ಚೇರ್‌ಮ್ಯಾನ್ ಝೇವಿಯರ್ ಡಿ’ಸೋಜರವರು ನೂತನ ಪದಾಧಿಕಾರಿಗಳ ಹೆಸರನ್ನು ಓದಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕ ಚಿದಾನಂದ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಡಾ.ಜಯದೀಪ್, ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ, ಸಾರ್ಜಂಟ್ ಎಟ್ ಆರ್ಮ್ಸ್ ವಾಮನ್ ಪೈಯವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಹಾಗೂ ಕಿಶನ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.

ರೋಟರಿಗಾಗಿ ಸೇವೆ, ಸೇವೆಗಾಗಿ ರೋಟರಿ..
ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ನನಗೆ ಕ್ಲಬ್ ಅಧ್ಯಕ್ಷನಾಗಿ ಕ್ಲಬ್ ಮುನ್ನೆಡೆಸಲು ಖುಶಿ ಹಾಗೂ ಹೆಮ್ಮೆ ಎನಿಸುತ್ತದೆ. ಹಿಂದೆ ಪ್ರಗತಿಗಾಗಿ ಸೇವೆ, ಸೇವೆಗಾಗಿ ಪ್ರಗತಿ ಎಂಬ ಧ್ಯೇಯವಾಕ್ಯವಿತ್ತು ಪ್ರಸ್ತುತ ಇದನ್ನು ರೋಟರಿಗಾಗಿ ಸೇವೆ, ಸೇವೆಗಾಗಿ ರೋಟರಿ ಎಂಬ ಧ್ಯೇಯವಾಕ್ಯದೊಂದಿಗೆ ಬದಲಿಸುತ್ತಿದ್ದೇನೆ. ಪ್ರಸ್ತುತ ವರ್ಷದ ಧ್ಯೇಯವಾಕ್ಯವಾಗಿರುವ ಮ್ಯಾಜಿಕ್ ಆಫ್ ರೋಟರಿ ಎಂಬಂತೆ ಕ್ಲಬ್ ಅರವತ್ತನೇ ವರ್ಷಕ್ಕೆ ಅಧ್ಯಕ್ಷನಾಗಿರುವುದು ರೋಟರಿ ಮ್ಯಾಜಿಕ್ ಆಗಿದೆ ಎಂದು ಭಾವಿಸುತ್ತೇನೆ. ಶಾಂತಿ, ಸೌಹಾರ್ದತೆ, ಸಹಕಾರದಿಂದ ಉತ್ತಮ ಕ್ಲಬ್ ಆಗಿ ಮುನ್ನೆಡೆಯುತ್ತಿದ್ದು, ಇದನ್ನು ಎಲ್ಲರ ಸಹಕಾರದಿಂದ ಕ್ಲಬ್ ಅನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ.
-ಡಾ.ಶ್ರೀಪತಿ ರಾವ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

ಸನ್ಮಾನ..
ವೃತ್ತಿಪರ ಸೇವಾ ವಿಭಾಗದಡಿಯಲ್ಲಿ ಪುತ್ತೂರಿನ ಹೃದಯಭಾಗದಲ್ಲಿ ಹಲವಾರು ವರ್ಷಗಳಿಂದ ಬೆಳ್ಳಂ ಬೆಳಿಗ್ಗೆ ನಾಲ್ಕು ಗಂಟೆಗೆ ಹೋಟೆಲ್ ಮೂಲಕ ಗ್ರಾಹಕರ ಹೊಟ್ಟೆ ತುಂಬಿಸುತ್ತಿರುವುದು ಮಾತ್ರವಲ್ಲ ಕೊರೋನಾ ಸಮಯದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಉಚಿತವಾಗಿ ಊಟೋಪಚಾರ ನೀಡಿರುವ ಹೊಟೇಲ್ ದಿನೇಶ್ ಭವನದ ಮಾಲಕ ಗಿರಿಧರ್ ಶೆಣೈ ದಂಪತಿಯರನ್ನು ಹಾಗೂ 2024-25ನೇ ಸಾಲಿನ ಕ್ಲಬ್‌ನ್ನು ಯಶಸ್ವಿಯಾಗಿ ಮುನ್ನೆಡೆಸಿದ ನಿರ್ಗಮಿತ ಅಧ್ಯಕ್ಷ ಜೈರಾಜ್ ಭಂಡಾರಿ, ನಿರ್ಗಮಿತ ಕಾರ್ಯದರ್ಶಿ ಸುಜಿತ್ ಡಿ.ರೈ, ನಿರ್ಗಮಿತ ಕೋಶಾಧಿಕಾರಿ ಸಂಕಪ್ಪ ರೈಯವರನ್ನು ನೂತನ ಪದಾಧಿಕಾರಿಗಳು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.

ಪದ ಪ್ರದಾನ…
ನೂತನ ಅಧ್ಯಕ್ಷ ಡಾ.ಶ್ರೀಪತಿ ರಾವ್ ಯು, ಕಾರ್ಯದರ್ಶಿ ದಾಮೋದರ್ ಕೆ, ಕೋಶಾಧಿಕಾರಿ ಎಂ.ಜಿ ರಫೀಕ್, ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ, ಜೊತೆ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ, ಸಾರ್ಜಂಟ್ ಎಟ್ ಆರ್ಮ್ಸ್ ವಾಮನ್ ಪೈ ಪಿ, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ದೀಪಕ್ ಕೆ.ಪಿ, ಬುಲೆಟಿನ್ ಎಡಿಟರ್ ಕೆ.ಬಾಲಕೃಷ್ಣ ಆಚಾರ್ಯ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ವಿ.ಜೆ ಫೆರ್ನಾಂಡೀಸ್, ಕ್ಲಬ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡ, ವೊಕೇಶನಲ್ ಸರ್ವಿಸ್ ನಿರ್ದೇಶಕ ಚಿದಾನಂದ ಬೈಲಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಡಾ.ಜಯದೀಪ್ ಎನ್.ಎ, ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ, ಚೇರ್‌ಮ್ಯಾನ್‌ಗಳಾದ ಝೇವಿಯರ್ ಡಿ’ಸೋಜ(ಟಿ.ಆರ್.ಎಫ್), ಹೆರಾಲ್ಡ್ ಮಾಡ್ತಾ(ಸಿಎಲ್‌ಸಿಸಿ), ಡಾ.ಜೆ.ಸಿ ಅಡಿಗ(ಪಲ್ಸ್ ಪೋಲಿಯೋ), ಕಿಶನ್ ಬಿ.ವಿ(ಟೀಚ್), ಶ್ರೀಕಾಂತ್ ಕೊಳತ್ತಾಯ(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಸುಜಿತ್ ಡಿ.ರೈ(ವಿನ್ಸ್), ಡಾ.ಎಂ.ಎಸ್ ಭಟ್(ಎಥಿಕ್ಸ್), ಎ.ಜೆ ರೈ(ಪಬ್ಲಿಕ್ ಇಮೇಜ್), ಗುರುರಾಜ್ ಕೊಳತ್ತಾಯ(ಐಟಿ ಮತ್ತು ವೆಬ್), ಪ್ರಭಾಕರ್ ಮುಗೇರ್(ಜಿಲ್ಲಾ ಪ್ರಾಜೆಕ್ಟ್ಸ್), ಶ್ರೀಧರ್ ಆಚಾರ್ಯ(ರೋಟರ್‍ಯಾಕ್ಟ್), ಗೋವಿಂದಪ್ರಕಾಶ್ ಸಾಯ(ಪ್ರೋಗ್ರಾಂ ಸಮಿತಿ), ಸತೀಶ್ ನಾಯಕ್ ಎಂ(ರೋಟರ್‍ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್), ಮನೋಜ್ ಟಿ.ವಿ(ರೋಟರ್‍ಯಾಕ್ಟ್ ಕ್ಲಬ್ ಸ್ವರ್ಣ)ರವರುಗಳಿಗೆ ದೇವರಾಜ್ ಫೆರ್ನಾಂಡೀಸ್‌ರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here