ರೋಟರಿ ಪುತ್ತೂರು ಈಸ್ಟ್ ಪದ ಪ್ರದಾನ

0

ಸ್ವ-ಹಿತಕ್ಕಿಂತ ಮಿಗಿಲಾದ ಸೇವೆ ರೋಟರಿಯದ್ದು-ಸುರೇಶ್ ಚೆಂಗಪ್ಪ

ಪುತ್ತೂರು:ಕೇವಲ ಹಣ, ಪದವಿ ಸಂಪಾದಿಸುವುದು ಮುಖ್ಯವಲ್ಲ, ಸಮಾಜವನ್ನು ಪ್ರೀತಿಸುವುದು ಆ ಮೂಲಕ ಪ್ರೀತಿಯನ್ನು ಹಂಚುವುದು ಮುಖ್ಯ. ನಾವು ನಮ್ಮ ಹಿತಕ್ಕಿಂತ ಪರರ ಹಿತವನ್ನು ಬಯಸುವುದು ಮುಖ್ಯ. ಅದರಂತೆ ರೋಟರಿಯು ಸ್ವ-ಹಿತಕ್ಕಿಂತ ಮಿಗಿಲಾದ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಪದ ಪ್ರದಾನ ಅಧಿಕಾರಿ, ರೋಟರಿ ಜಿಲ್ಲೆ 3181 ಇದರ ಪಿಡಿಜಿ ಸುರೇಶ್ ಚೆಂಗಪ್ಪರವರು ಹೇಳಿದರು.


ಜು.6 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ನಡೆದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರ ಪರವಾಗಿ ಪದ ಪ್ರದಾನ ನೆರವೇರಿಸಿ ಮಾತನಾಡಿದರು.


ವೃತ್ತಿಯೊಂದಿಗೆ ಸಮಾಜದ ಒಳಿತಿಗಾಗಿ ಸೇವೆ-ಸೂರ್ಯನಾಥ ಆಳ್ವ:
ಗೌರವ ಅತಿಥಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಮಿತ್ತಳಿಕೆ ಸೂರ್ಯನಾಥ ಆಳ್ವರವರು ಡಾ.ಶ್ಯಾಮ್ ಪ್ರಸಾದ್‌ರವರ ಸಂಪಾದಕತ್ವದ ಕ್ಲಬ್ ಬುಲೆಟಿನ್ “ರೋಟ ವಾಹಿನಿ” ಅನ್ನು ಅನಾವರಣಗೊಳಿಸಿ ಮಾತನಾಡಿ, ನಮ್ಮ ವೃತ್ತಿಯೊಂದಿಗೆ ಸಮಾಜದ ಒಳಿತಿಗಾಗಿ ಸೇವೆ ಮಾಡುವುದು ನಮ್ಮ ಗುರಿಯಾಗಬೇಕು. ರೋಟರಿ ಭೀಷ್ಮರವರು ಪುತ್ತೂರಿನ ಪ್ರತಿ ರೋಟರಿಗೆ ಪ್ರೇರಣಾಶಕ್ತಿ ಇದ್ದಾಗೆ. ಸದಸ್ಯರು ಬೆಳೆಯಲು ಮತ್ತು ತಮ್ಮ ಸಾಮಾರ್ಥ್ಯ ಓರೆಗೆ ಹಚ್ಚಲು ರೋಟರಿ ಅವಕಾಶ ಕೊಡುತ್ತದೆ ಮಾತ್ರವಲ್ಲ ರೋಟರಿ ಸದಸ್ಯರಾದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರು.


ರೋಟರಿ ಸದಸ್ಯರು ಆತ್ಮಗತವಾಗಿ ಸಮಾಜಕ್ಕೆ ಸೇವೆ ನೀಡುವವರು-ಮೊಹಮ್ಮದ್ ರಫೀಕ್:
ರೋಟರಿ ವಲಯ ಸೇನಾನಿ ಮೊಹಮ್ಮದ್ ರಫೀಕ್ ದರ್ಬೆ ಮಾತನಾಡಿ, ನಾವೆಲ್ಲ ರೋಟರಿ ಸ್ನೇಹಿತರು. ರೋಟರಿ ಸದಸ್ಯರು ಆತ್ಮಗತವಾಗಿ ಸಮಾಜಕ್ಕೆ ಸೇವೆ ನೀಡುವವರು. ಜಿಲ್ಲಾ ಗವರ್ನರ್‌ರವರ ಸಮಾಜಮುಖಿ ಓಂಭತ್ತು ಆಶಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ರೋಟರಿಯನ್ನು ಬೆಳೆಸೋಣ ಎಂದರು.


ಸಮಾಜ ಸೇವೆಯು ಯಶಸ್ವಿ ಪಥದತ್ತ ಸಾಗಲಿ-ಡಾ.ಶ್ರೀಪತಿ ರಾವ್:
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ರೋಟರಿ ಪುತ್ತೂರು ಸಂಸ್ಥೆಗೆ 59 ವರ್ಷಗಳ ಇತಿಹಾಸವಿದ್ದು ಪ್ರಸ್ತುತ ವಜ್ರಮಹೋತ್ಸವದ ಹೊಸ್ತಿಲಲ್ಲಿದೆ. ರೋಟರಿ ಪುತ್ತೂರುನಿಂದ ಸ್ಥಾಪಿತವಾದ ರೋಟರಿ ಈಸ್ಟ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ವೈದ್ಯಕೀಯ ಕ್ಷೇತ್ರದ ಸಚಿನ್ ತೆಂಡೂಲ್ಕರ್ ಎಂದೇ ಹೆಸರಾದ ಡಾ.ರವಿಪ್ರಕಾಶ್ ರವರ ಮುಂದಿನ ಸಮಾಜ ಸೇವೆಯು ಯಶಸ್ವಿ ಪಥದತ್ತ ಸಾಗಲಿ ಎಂದರು.


ರೋಟರಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವುದು ಆತ್ಮತೃಪ್ತಿ ತಂದಿದೆ-ಬೂಡಿಯಾರು ರಾಧಾಕೃಷ್ಣ ರೈ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಮಾತನಾಡಿ, ಕ್ಲಬ್‌ನ ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಸಹೋದರತ್ವ ಭಾವನೆಯಿಂದ ಮತ್ತು ಒಂದೇ ಮನೆಯ ಸದಸ್ಯರಂತೆ ನಮ್ಮೊಂದಿಗೆ ಕೈಜೋಡಿಸಿರುವುದು ಅಭಿನಂದನೀಯ. ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ ಗ್ರಾಮಾಂತರ ಪ್ರದೇಶದಲ್ಲೂ ಕ್ಲಬ್ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ಎನಿಸಿದ್ದು ರೋಟರಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವುದು ನನಗೆ ಆತ್ಮತೃಪ್ತಿ ತಂದಿದೆ ಎಂದರು.


ನೂತನ ಸದಸ್ಯ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಧನ್ವಂತರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೀವನ್ ಗೋವಿಯಸ್‌ರವರಿಗೆ ಪದ ಪ್ರದಾನ ಅಧಿಕಾರಿ ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.


ವಿದ್ಯಾರ್ಥಿವೇತನ/ದೇಣಿಗೆ ಹಸ್ತಾಂತರ:
ಇತ್ತೀಚೆಗೆ ರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ 6 ಚಿನ್ನ, 15 ಬೆಳ್ಳಿ, 6 ಕಂಚಿನ ಪದಕ ಪಡೆದು ಹ್ಯಾಟ್ರಿಕ್ ಚಾಂಪಿಯನ್ಸ್ ಎನಿಸಿದ ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನೋಲಜಿ ಕಾಲೇಜಿಗೆ ಯೂತ್ ಸರ್ವಿಸ್‌ನಡಿಯಲ್ಲಿ ರೂ.20250 ನಗದು ಕೊಡುಗೆಯನ್ನು ಕಾಲೇಜಿನ ವಿದ್ಯಾರ್ಥಿ ಯತೀಶ್ ಹಾಗೂ ತಂಡದವರಿಗೆ, ದಿ.ಮಾರಪ್ಪ ಶೆಟ್ಟಿ ಧತ್ತಿನಿಧಿಯಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ನಿರೀಕ್ಷಾ, ತೃಪ್ತಿ, ಚಿಂತನ್, ಕನಿಕಾ, ಧನುಷ್‌ರವರಿಗೆ ತಲಾ ರೂ.೪ ಸಾವಿರದಂತೆ ವಿದ್ಯಾರ್ಥಿವೇತನ, ದಿ.ಕುಡ್ಗಿ ಸುಧಾಕರ್ ಶೆಣೈ ಧತ್ತಿನಿಧಿಯಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ನ ರೋಶನ್ ಎಸ್.ಕೆ, ಪಿ.ಎ ರಕ್ಷಿತ್, ಕಿಶೋರ್ ಮಂಜುನಾಥ್, ವೈಷ್ಣವಿ, ಹರ್ಷಿತಾರವರಿಗೆ ತಲಾ ರೂ.4 ಸಾವಿರದಂತೆ ವಿದ್ಯಾರ್ಥಿವೇತನ, ಸುರತ್ಕಲ್ ಕೆಆರ್‌ಇಸಿಯಲ್ಲಿ ಅಂತಿಮ ವರ್ಷದ ಬಿಇ ಓದುತ್ತಿರುವ ಸುಜನ್ ರೈಯವರಿಗೆ ರೂ.೪ ಸಾವಿರ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.


ಕ್ಲಬ್ ಪ್ರತಿಭಾವಂತ ಮಕ್ಕಳಿಗೆ ಗೌರವ:
ಕ್ಲಬ್ ಸದಸ್ಯರ ಪ್ರತಿಭಾವಂತ ಮಕ್ಕಳಾದ ಭಾರವಿ ಕೆ.ಭಟ್(ಡಾ.ರವಿಪ್ರಕಾಶ್), ದೈವಿಕ್ ಹೆಬ್ಬಾರ್(ಡಾ.ಪ್ರಸನ್ನ ಹೆಬ್ಬಾರ್), ರಿಧಿ ಶೆಟ್ಟಿ(ಎನ್.ಚಂದ್ರಹಾಸ ಶೆಟ್ಟಿ), ಅನಿಶ್ರಿ(ನವೀನ್ ಎಂ), ಶ್ರುದನ್ ರೈ(ಶರತ್ ಕುಮಾರ್ ರೈ), ಅಂಚಿತ್ ನಡುಬೈಲು(ಜಯಂತ್ ನಡುಬೈಲು), ಪ್ರನಿಲ್ ರೈ(ಪ್ರಕಾಶ್ ರೈ)ರವರನ್ನು ಗೌರವಿಸಲಾಯಿತು.


ಜಿಲ್ಲಾ ಪ್ರತಿನಿಧಿಗಳಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ರೋಟರಿ ಜಿಲ್ಲೆಯಲ್ಲಿ ಪ್ರತಿನಿಧಿಸುವ ಸದಸ್ಯರಾದ ಸಚ್ಚಿದಾನಂದ, ಸೂರ್ಯನಾಥ ಆಳ್ವ, ಕೆ.ಆರ್ ಶೆಣೈ, ಪುರಂದರ ರೈ ಮಿತ್ರಂಪಾಡಿ, ರವಿಕುಮಾರ್ ರೈ, ದಿವಾಕರ ನಿಡ್ವಣ್ಣಾಯ, ರಾಧಾಕೃಷ್ಣ ರೈ ಬೂಡಿಯಾರು, ಪ್ರಮೀಳಾ ರಾವ್, ಜಯಂತ್ ನಡುಬೈಲು, ಕರ್ನಲ್ ಜಿ.ಡಿ ಭಟ್, ಡಾ.ಶ್ಯಾಮ್ ಪ್ರಸಾದ್, ಅಬ್ಬಾಸ್ ಮುರ, ಡಾ.ದೀಪಕ್ ರೈ, ಡಾ.ಪ್ರಸನ್ನ ಹೆಬ್ಬಾರ್, ಕೃಷ್ಣನಾರಾಯಣ ಮುಳಿಯ, ಮುರಳೀಶ್ಯಾಂರವರುಗಳನ್ನು ಗೌರವಿಸಲಾಯಿತು.


ಪಿ.ಎಚ್.ಎಫ್ ಗೌರವ:
ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ಟಿ.ಆರ್.ಎಫ್ ಕೊಡುಗೆ ನೀಡುವ ಭರವಸೆ ನೀಡಿದ ಡಾ.ಸೂರ್ಯನಾರಾಯಣ ಕೆ, ಕೃಷ್ಣನಾರಾಯಣ ಮುಳಿಯ, ಪುರಂದರ ರೈರವರನ್ನು ಗೌರವಿಸಲಾಯಿತು.


ನೂತನ ಅಧ್ಯಕ್ಷ ಡಾ.ರವಿಪ್ರಕಾಶ್‌ರವರ ಪತ್ನಿ ಡಾ.ವಿಜಯಾ ಸರಸ್ವತಿ, 2023-24ರ ನಿರ್ಗಮಿತ ಕಾರ್ಯದರ್ಶಿ ಶರತ್ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನೆಟ್ ಭಾರವಿ ಕೆ.ಭಟ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಸಂತ ಜಾಲಾಡಿ ವಂದಿಸಿದರು. ದಿವಾಕರ ನಿಡ್ವಣ್ಣಾಯ, ಪುರಂದರ ರೈ, ಮುರಳೀಶ್ಯಾಂ, ವಸಂತ್ ರೈ ದುಗ್ಗಳರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ನಿರ್ಗಮಿತ ಕಾರ್ಯದರ್ಶಿ ರವಿಕುಮಾರ್ ರೈ ವರದಿ ಮಂಡಿಸಿದರು. ಸಾರ್ಜಂಟ್ ಎಟ್ ಆಮ್ಸ್ ಸುರೇಶ್ ಕೆ.ಯು, ವೊಕೇಶನಲ್ ಸರ್ವಿಸ್ ನಿರ್ದೇಶಕ ವಿಜಯಾ ಬಿ.ಎಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪುರಂದರ ರೈ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಯೂತ್ ಸರ್ವಿಸ್ ನಿರ್ದೇಶಕ ಪ್ರಕಾಶ್ ರೈ ಮನವಳಿಕೆರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಹಾಗೂ ನಿಯೋಜಿತ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಹಾಗೂ ಪ್ರಸನ್ನ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಕ್ಲಬ್ ಉತ್ತುಂಗತೆಯಲ್ಲಿ ಶಕ್ತಿಮೀರಿ ಪ್ರಯತ್ನ..
ಕ್ಲಬ್ ಅಧ್ಯಕ್ಷನಾಗಿರುವುದು ನನಗೆ ಅವಿಸ್ಮರಣೀಯ ದಿನವಾಗಿದೆ. ಕ್ಲಬ್ ಉತ್ತುಂಗತೆಯಲ್ಲಿ ನನ್ನ ಮೇಲಿಟ್ಟ ಭರವಸೆ, ಆಸೆ, ಆಕಾಂಕ್ಷೆ, ನಿರೀಕ್ಷೆಯನ್ನು ಹುಸಿಗೊಳಿಸದೆ, ಸದಸ್ಯರ ಸಹಕಾರದೊಂದಿಗೆ ಶಕ್ತಿಮೀರಿ ಪ್ರಯತ್ನ ಮಾಡಲಿದ್ದೇನೆ. ರೋಟರಿಯ ಮುಖಾಂತರ ಒಡನಾಟ, ಮಿತೃತ್ವದೊಂದಿಗೆ ಜನರ ಮಧ್ಯೆ ಹೇಗೆ ಬೆರೆಯುವುದನ್ನು ಕಲಿತುಕೊಂಡಿದ್ದೇನೆ. ನೊಂದ ಜೀವಗಳಿಗೆ ಮಿಡಿಯುವುದೇ ರೋಟರಿಯ ಧರ್ಮವಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೆ ನಾವು ನಮ್ಮ ದುಡಿಮೆಯಲ್ಲಿ ಒಂದು ಪಾಲು ಸಮಾಜದಲ್ಲಿನ ಅಶಕ್ತರಿಗಾಗಿ ಮುಡುಪಾಗಿಟ್ಟುಕೊಂಡಾಗ ದೇವರ ಅನುಗ್ರಹವಿರುತ್ತದೆ.
-ಡಾ.ರವಿಪ್ರಕಾಶ್, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಈಸ್ಟ್

ಸೇವಾ ಕೊಡುಗೆ..
ಕಮ್ಯೂನಿಟಿ ಸರ್ವಿಸ್ ವತಿಯಿಂದ ದೇವಾ ಟ್ರೇಡರ್ಸ್ ಮಾಲಕ ರವೀಂದ್ರನ್‌ರವರ ಪ್ರಾಯೋಜಕತ್ವದಲ್ಲಿ ಜಯಂತಿ ಪುರಂದರ ಪೂಜಾರಿ ಸಾಲೆತ್ತೂರು, ರೇವತಿ ಸಿ.ಎನ್ ಕಾವು, ರಂಜಿತಾ ಅರಿಯಡ್ಕ, ನವೀನ ಅರಿಯಡ್ಕ ಎಂಬ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕೆ.ಆರ್ ಶೆಣೈ ಪ್ರಾಯೋಜಕತ್ವದಲ್ಲಿ ಗುರುವಪ್ಪರವರಿಗೆ ವ್ಹೀಲ್‌ಚೇರ್ ಕೊಡುಗೆ, ಬೊಳ್ವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಧನ್ವಂತರಿ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ.ಚಂದ್ರಶೇಖರ್‌ರವರ ಪ್ರಾಯೋಜಕತ್ವದಲ್ಲಿ ಮಿಕ್ಸಿ ಕೊಡುಗೆಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಸನ್ಮಾನ..
ವೊಕೇಶನಲ್ ಸರ್ವಿಸ್ ವತಿಯಿಂದ ಪುತ್ತೂರಿನಲ್ಲಿ ಕಳೆದ ೪೫ ವರ್ಷಗಳಿಂದ ವೈದ್ಯಕೀಯ ಸೇವೆ ನೀಡುತ್ತಿರುವ ಪುತ್ತೂರಿನ ಹಿರಿಯ ಸರ್ಜನ್ ಆಗಿರುವ ಎ.ಕೆ ರೈಯವರನ್ನು ಹಾಗೂ 2023-24ನೇ ಸಾಲಿನಲ್ಲಿ ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನೆಡೆಸಿದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಕಾರ್ಯದರ್ಶಿ ರವಿಕುಮಾರ್ ರೈ, ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.

ಪದ ಪ್ರದಾನ..
ನೂತನ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ, ಕಾರ್ಯದರ್ಶಿ ವಸಂತ್ ಜಾಲಾಡಿ, ಕೋಶಾಧಿಕಾರಿ ಶಶಿಕಿರಣ್ ರೈ ನೂಜಿ, ನಿಕಟಪೂರ್ವ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕ ಶಶಿಧರ್ ಕಿನ್ನಿಮಜಲು, ಉಪಾಧ್ಯಕ್ಷ ರವಿಕುಮಾರ್ ರೈ, ಜೊತೆ ಕಾರ್ಯದರ್ಶಿ ನವೀನ್ ರೈ ಪಂಜಳ, ಸಾರ್ಜಂಟ್ ಎಟ್ ಆರ್ಮ್ಸ್ ಸುರೇಶ್ ಕೆ.ಯು, ವೊಕೇಶನಲ್ ಸರ್ವಿಸ್ ನಿರ್ದೇಶಕ ವಿಜಯ್ ಬಿ.ಎಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಪುರಂದರ್ ರೈ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಕೃಷ್ಣನಾರಾಯಣ ಮುಳಿಯ, ಯೂತ್ ಸರ್ವಿಸ್ ನಿರ್ದೇಶಕ ಪ್ರಕಾಶ್ ರೈ ಮನವಳಿಕೆ, ಮೆಂಬರ್‌ಶಿಪ್ ಚೇರ್‌ಮ್ಯಾನ್ ಶರತ್ ಕುಮಾರ್ ರೈ, ಟಿಆರ್‌ಎಫ್ ಚೇರ್‌ಮ್ಯಾನ್ ಮುರಳಿಶ್ಯಾಂ, ಪೋಲಿಯೋ ಪ್ಲಸ್ ಚೇರ್‌ಮ್ಯಾನ್ ಚಂದ್ರಶೇಖರ್, ಐಟಿ ಮತ್ತು ವೆಬ್‌ಸೈಟ್ ಚೇರ್‌ಮ್ಯಾನ್ ಅಬ್ಬಾಸ್ ಮುರ, ಜಿಲ್ಲಾ ಪ್ರಾಜೆಕ್ಟ್ ಚೇರ್‌ಮ್ಯಾನ್ ಕೆ.ವಿ ಶೆಣೈ, ಬುಲೆಟಿನ್ ಎಡಿಟರ್ ಡಾ.ಶ್ಯಾಮ್‌ಪ್ರಸಾದ್‌ರವರಿಗೆ ಪದ ಪ್ರದಾನ ಅಧಿಕಾರಿ ಸುರೇಶ್ ಚೆಂಗಪ್ಪರವರು ಪದ ಪ್ರದಾನವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here