ಸುಳ್ಯಪದವು ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾ.ಸ. ವತಿಯಿಂದ ವಾರ್ಷಿಕ ಮಹಾಸಭೆ – ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

0

ಬಡಗನ್ನೂರು: ಸುಳ್ಯಪದವು ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ಗ್ರಾಮ ಸಮಿತಿಯ ವತಿಯಿಂದ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಸುಳ್ಯಪದವು ಶಬರಿನಗರದ ಸ್ವಾಮಿ ಕೊರಗಜ್ಜ ಕ್ಷೇತ್ರದ ಸಭಾಂಗಣದಲ್ಲಿ  ಜು.7ರಂದು ನಡೆಯಿತು.
ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ನೆರವೇರಿಸಿದರು. ತಾಲ್ಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಕುಂಜೂರುಪಂಜ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ದಯಾನಂದ ಆಲಂಕಾರು  ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಬಿಲ್ಲವ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ  ವಿನಯ ಕುಮಾರಿ ಹಾಗೂ ಬಿಲ್ಲವ ಗ್ರಾಮ ಸಮಿತಿಯ ಗೌರವ ಅಧ್ಯಕ್ಷ ಗಿರೀಶ್ ಕನ್ನಡ್ಕ, ಕಾರ್ಯದರ್ಶಿ ಶಿವಕರುಣಾಕರ ಮತ್ತು ಪದಾಧಿಕಾರಿಗಳು, ಬಿಲ್ಲವ ಗ್ರಾಮ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 

ಸಾಧಕರಿಗೆ ಸನ್ಮಾನ:
ಉತ್ತಮ ಹಾಡುಗಾರರಾಗಿ, ಭಜನಾ ತರಬೇತುದಾರರಾಗಿ  ಮತ್ತು ಸಂಗೀತ ಗುರುಗಳಾಗಿ ಹಲವು ಮಂದಿ ಶಿಷ್ಯಕ ವೃಂದಕ್ಕೆ ವೇದಿಕೆ ಕಲ್ಲಿಸಿ, ಭಜನೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ  ದಾಮೋದರ ಮರದ ಮೂಲೆ ಹಾಗೂ ಯಕ್ಷಸಾರಥಿ, ಯಕ್ಷಬಳಗ ಸಂಚಾಲಕರಾಗಿ, ಗೆಜ್ಜೆಗಿರಿ ಹಾಗೂ ದೇಂತಡ್ಕ ಮೇಳದ ಕಲಾವಿದರಾಗಿ, ಯಕ್ಷ ಶಿಷ್ಯ ವರ್ಗದ ಗುರುಗಳಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ  ಚಂದ್ರಶೇಖರ್ ಸುಳ್ಯಪದವು ಇವರುಗಳನ್ನು ಪೇಟ ಧರಿಸಿ, ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಷ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. 2023-24 ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ  ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕು! ವಿನೀಶಾ ಕೆ, (575ಅಂಕ), ಕು!ಸೃಜನಾ ಎಸ್ (560 ಅಂಕ)  ಕು! ನೀಕ್ಷಾ ವಿ.ಎಸ್ (540 ಅಂಕ),  ಇವರುಗಳನ್ನು ಶಾಲು ಫಲಪುಷ್ಷ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಕ್ಷಕ ರಾಜೇಶ್ ಸುಳ್ಯಪದವು ಸಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಗಿರೀಶ್ ಕನ್ನಡ್ಕ ವಂದಿಸಿದರು.  

LEAVE A REPLY

Please enter your comment!
Please enter your name here