ಮಾನಸಿಕ ಅಸ್ವಸ್ಥ ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ ರೋಟರಿ ಕ್ಲಬ್ ಪುತ್ತೂರು ಯುವ

0

ಪುತ್ತೂರು: ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿದ್ದ ಸುಮಾರು 50 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥೆಯೊಬ್ಬರನ್ನು ಪ್ರಾಧ್ಯಾಪಕಿ ಗೀತಾ ಕೊಂಕೋಡಿ ಅವರ ವಿನಂತಿಯಂತೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷ ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.


ಈ ಮಹಿಳೆಯು ಕಳೆದ ಅನೇಕ ವರ್ಷಗಳಿಂದ ಮಾನಸಿಕತೆಯಿಂದ ಬಳಲುತ್ತಿದ್ದು, ಸೂರ್ಯ ಬಸ್ ಪ್ರಯಾಣಿಕರ ತಂಗುದಾಣದಲ್ಲೇ ಅವರು ವಾಸ್ತವ್ಯ ಹೊಂದಿದ್ದರು. ಈ ಕುರಿತು ಸಾರ್ವಜನಿಕರು ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ದೂರು ನೀಡಿದ್ದರು. ಬಳಿಕ ಉಮೇಶ್ ನಾಯಕ್ ಅವರು ಮುಂದೆ ಬಂದು ಮಹಿಳೆಯನ್ನು ಸುರಕ್ಷಿತ ಸ್ಥಳಕೆ ಸೇರಿಸುವಲ್ಲಿ ಸಹಕರಿಸಿದರು. ಈ ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಶ್ರೀ ಗೋಕುಲದಾಸ್ ಭಕ್ತ, ಗ್ರಾ. ಪ ಉಪಾಧ್ಯಕ್ಷ ಪದ್ಮನಾಭ ಸಾಪಲ್ಯ, ಗ್ರಾ.ಪ ಸದಸ್ಯರಾದ ಭಾಗೀರಥಿ ಹಾಗೂ ಪುಷ್ಪಾವತಿ, ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿಟ್ಲ ಘಟಕದ ಮೇಲ್ವಿಚಾರಕಿ ಸೋಮಕ್ಕ, ಅಂಗನವಾಡಿ ಕಾರ್ಯಕರ್ತೆ ಕುಸುಮ, ಕೃಷಿಕರಾದ ಸುಬ್ರಾಯ ಭಟ್ ಕೊಂಕೋಡಿ, ಸ್ಥಳೀಯರಾದ ಪತ್ರಿಕಾ ವಿತರಕ ಖಾದ್ರಿ ಬ್ಯಾರಿ. ಮಾನಸಿಕ ಅಸ್ವಸ್ಥತೆಯ ಅಕ್ಕನ ಮಗ ಸತೀಶ ಹಾಗೂ ಗ್ರಾಮಸ್ಥರು ಸಹಕರಿಸಿದರು. ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಪುತ್ತಿಲ ಪರಿವಾರದ ಆಂಬುಲೆನ್ಸ್ ಸೇವೆಯನ್ನು ಸುಜಿತ್ ಅವರು ನೀಡಿದರು.

ಈ ಮಹಿಳೆಯ ತಾಯಿ ಮಚ್ಚುಳು ಎಂಬಾಕೆ ನಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ಮನೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಆಕೆ ಆರು ತಿಂಗಳ ಹಿಂದೆ ಮೃತಪಟ್ಟಿದ್ದು, ಸಾಯುವ ಸಮಯದಲ್ಲಿ ತನ್ನ ಮಗಳು ದಾರಿಯಲ್ಲಿ ಬೆಳೆಯದಂತೆ ನೋಡಿಕೊಂಡು ಒಂದು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿ ಕೇಳಿಕೊಂಡ ಮೇರೆಗೆ ಸಮಾಜ ಸೇವಕರಾದ ಪುತ್ತೂರು ಉಮೇಶ್ ನಾಯಕ್ ಅವರ ಸಹಕಾರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದೇನೆ. ಆಕೆಯ ತಾಯಿಗೆ ನೀಡಿದ ಮಾತನ್ನು ನೆರವೇರಿಸಿದ ಸಾರ್ಥಕ್ಯವಿದೆ.
ಗೀತಾ ಕೊಂಕೋಡಿ
ಮಾನಸಿಕ ಅಸ್ವಸ್ಥೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಮುತುವರ್ಜಿ ವಹಿಸಿದವರು.

ನಾಯಿ ಪ್ರೀತಿಗೆ ಭಾವುಕ
ಈ ಮಹಿಳೆಯು ಪುನರ್ವಸತಿ ಕೇಂದ್ರಕ್ಕೆ ಹೋಗುವ ಮುನ್ನ ಬಸ್ಸು ತಂಗುದಾಣದಲ್ಲಿ ತನ್ನ ಜೊತೆಗೆ ವಾಸವಿರುತ್ತಿದ್ದ ತನ್ನ ಮುದ್ದಿನ ನಾಯಿಗೆ ಬಿಸ್ಕಟನ್ನು ಹಾಕಿ ತಲೆ ಸವರಿದ ದೃಶ್ಯ ಅಲ್ಲಿ ನೆರೆದಿದ್ದವರನ್ನು ಭಾವುಕರನ್ನಾಗಿ ಮಾಡಿತು.

LEAVE A REPLY

Please enter your comment!
Please enter your name here