ಪುತ್ತೂರು: ಲಯನ್ಸ್ ಕ್ಲಬ್ ಜಿಲ್ಲೆ 317-ಡಿ ಇದರ ಪುತ್ತೂರು ಕ್ಲಬ್ಗೆ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರೇಮಲತಾ ರಾವ್ ಮತ್ತು ಕಾರ್ಯದರ್ಶಿಯಾಗಿ ಅರವಿಂದ ಭಗವಾನ್ ರೈ ಅವರು ಆಯ್ಕೆಗೊಂಡಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ಸದಾಶಿವ, ಖಜಾಂಜಿಯಾಗಿ ಸುಧಾಕರ್ ಕೆ.ಪಿ, ಉಪಾಧ್ಯಕ್ಷರಾಗಿ ಜಯಶ್ರೀ ಎಸ್ ಶೆಟ್ಟಿ, ಆನಂದ ಆಚಾರ್ಯ, ಮಂಜುನಾಥ್ ಗೌಡ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ರಶಾಂತ್, ಮೆಂಬರ್ಶಿಫ್ ಕಮ್ಯುನಿಟಿ ಚೈರ್ಪರ್ಸನ್ ಆಗಿ ಸದಾನಂದ ಶೆಟ್ಟಿ ಎಲ್ಸಿಐಎಫ್ ಚೈರ್ಪರ್ಸನ್ ಆಗಿ ಶಿವಪ್ರಸಾದ ಶೆಟ್ಟಿ, ಸರ್ವಿಸ್ ಆಕ್ಟಿವಿಟಿ ಚೈರ್ಪರ್ಸನ್ ಆಗಿ ಆನಂದ ರೈ, ಕ್ಲಬ್ ಪಿಆರ್ಒ ಆಗಿ ಶಿವಕುಮಾರ್, ಟೈಲ್ ಟ್ವಿಸ್ಟರ್ ಆಗಿ ದಿನೇಶ್ ಪಿ.ವಿ, ಲಯನ್ ಟಾಮರ್ ಆಗಿ ಜಯಶ್ರೀ ನಾಯಕ್ ಸಹಿತ 17 ಮಂದಿ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.
ಇಂದು ಪದಗ್ರಹಣ
ಲಯನ್ಸ್ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.10ರಂದು ಸಂಜೆ ಗಂಟೆ 7ಕ್ಕೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಮಂಗಳೂರು ಲಯನ್ಸ್ ಕ್ಲಬ್ನ ಅಧ್ಯಕ್ಷ ಎಸ್.ಶೀನಪ್ಪ ಪೂಜಾರಿ ಅವರು ಪದಪ್ರದಾನ ಅಧಿಕಾರಿಯಾಗಿ ಆಗಮಿಸಲಿದ್ದಾರೆ ಎಂದು ಕ್ಲಬ್ನ ಪ್ರಕಟಣೆ ತಿಳಿಸಿದೆ.